ಮಹಿಳೆಯರು ಏನು ಸಾಧನೆ ಮಾಡುತ್ತಾರೆ ಎಂಬಲ್ಲಿಂದ ಮಹಿಳೆಯರು ಅವಕಾಶ ಸಿಕ್ಕರೆ ಎಂತಹ ಕೆಲಸವನ್ನೂ ಮಾಡಬಲ್ಲರು. ಅವರು ಗಂಡಸರಿಗಿಂತ ಯಾವುದರಲ್ಲೂ ಕಡಿಮೆ ಅಲ್ಲ ಎಂಬುದು ಹಲವು ಬಾರಿ ಸಾಬೀತಾಗಿದೆ. ಅಂಥದ್ದೇ ವಿಶೇಷ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಮಹಿಳೆಯೊಬ್ಬಳು ಸಬಲೆ ಎಂದು ತೋರಿಸುತ್ತಿದೆ. ಸಾಧನೆಗೆ ಹೆಣ್ಣು ಗಂಡು ಎಂಬುದು ಅಡ್ಡಿಯಾಗದು ಎಂದೂ ಒತ್ತಿ ಹೇಳಿದಂತೆ ಕಂಡಿದೆ.
ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಅಂತೀರಾ? 46 ವರ್ಷದ ಮಹಿಳೆಯೊಬ್ಬರು ಸ್ಕೇಟಿಂಗ್ ಮಾಡಿದ್ದಾರೆ. ಅದೂ ಸೀರೆ ಉಟ್ಟುಕೊಂಡು ವಿಶೇಷ ಸ್ಕೇಟಿಂಗ್ ಪ್ರದರ್ಶನ ತೋರಿದ್ದಾರೆ. ಆಂಟಿ ಸ್ಕೇಟ್ಸ್ ಎಂಬ ಇನ್‌ಸ್ಟಾಗ್ರಾಂ ಖಾತೆಯನ್ನು ಹೊಂದಿರುವ ಇವರು ಸೀರೆ ಉಟ್ಟು ಸ್ಕೇಟಿಂಗ್ ಮಾಡುವ ವಿಡಿಯೋವನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲಿ ಈಗ ಹಂಚಿಕೊಂಡ ವಿಡಿಯೋ ಇನ್ನೂ ವಿಶೇಷವಾಗಿದೆ.
ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವಂತೆ, ಆಂಟಿ 46 ವರ್ಷದವರು ಹಾಗೂ ಸೀರೆ ಉಟ್ಟು ಸ್ಕೇಟ್ ಮಾಡುತ್ತಾರೆ. ಹರ್ಷ ಮತ್ತು ಧನಾತ್ಮಕ ಭಾವ ಹಂಚಲು ಈ ವಯಸ್ಸು ದೊಡ್ಡದಾಗಿಲ್ಲ ಎಂಬ ಅರ್ಥದ ಸಾಲುಗಳಿದೆ. ಅವರ ವಿಡಿಯೋಗಳು ಎಂಥವರಿಗೂ ಸ್ಫೂರ್ತಿ ತುಂಬಬಲ್ಲವಾಗಿದೆ.
ವಿಡಿಯೋದಲ್ಲಿ ಅವರು ನೇರಳೆ ಬಣ್ಣದ ಸೀರೆ ತೊಟ್ಟುಕೊಂಡಿದ್ದಾರೆ. ಹೆಲ್ಮೆಟ್ ಹಾಗೂ ಸ್ಕೇಟಿಂಗ್ ವೀಲ್ ತೊಟ್ಟುಕೊಂಡು ಸಂಭ್ರಮದಿಂದಲೇ ಸ್ಕೇಟಿಂಗ್ ಮಾಡುತ್ತಾರೆ. ಸಾವಿರಾರು ಜನರು ಅವರ ವಿಡಿಯೋ ಲೈಕ್ ಮಾಡಿದ್ದಾರೆ. ಅವರ ಕೌಶಲ್ಯ ನೋಡಿ ಜನರು ಬೆರಗುಗೊಂಡಿದ್ದಾರೆ. ಪ್ರಶಂಸೆಯ ಸುರಿಮಳೆಯನ್ನೇ ಸುರಿದಿದ್ದಾರೆ. ಇದೊಂದು ಸ್ಫೂರ್ತಿ ಸೆಲೆ, ಕೂಲ್ ವಿಡಿಯೋ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.
ತಾನು ಮಕ್ಕಳೊಂದಿಗೆ ಈ ಸ್ಕೇಟಿಂಗ್ ಕಲಿಕೆ ಆರಂಭಿಸಿದೆ. ಸ್ಕೇಟಿಂಗ್ ಮಾಡಿದೆ. ಧನಾತ್ಮಕ ಭಾವ ಹಂಚಲು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಕೂಡ ಮಾಡಿದೆ. ಆದ್ದರಿಂದ ಕೆಲವೇ ತಿಂಗಳಲ್ಲಿ 12.7k ಹಿಂಬಾಲಕರು ಬಂದರು. ಆಮೇಲೆ ಇದನ್ನು ಮುಂದುವರಿಸಿದ್ದೇನೆ ಎಂದು ಆಕೆ ಮಾತನಾಡಿದ್ದಾರೆ.
ಇದನ್ನೂ ಓದಿ: Viral Video: ಫುಟ್‌ಬಾಲ್ ಒದ್ದಂತೆ ಸೇರು ಅಕ್ಕಿಯನ್ನು ಒದ್ದ ವಧು! ವಿಡಿಯೋ ನೋಡಿದ್ರೆ ನೀವೂ ನಗೋದು ಗ್ಯಾರಂಟಿ