
ಮರಿಯಾನೆಗಳ (baby elephant) ಆಟ ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವುದೇ ಕಣ್ಣಿಗೆ ಹಬ್ಬ. ಅವುಗಳ ತುಂಟಾಟಗಳು ನೆಟ್ಟಿಗರ ಮನಸ್ಸನ್ನು ಗೆದ್ದು ಬಿಡುತ್ತವೆ. ಇದೀಗ ಇಂತಹದ್ದೆ ದೃಶ್ಯವೊಂದು ವೈರಲ್ ಆಗಿದೆ. ಮರಿಯಾನೆಯೊಂದು ಸಣ್ಣ ಕೋಲಿನಿಂದ ಮೈ ಕೆರೆದುಕೊಂಡಿದ್ದು ಬುದ್ಧಿವಂತಿಕೆಯನ್ನು ತೋರ್ಪಡಿಸಿದೆ. ಈ ವಿಡಿಯೋ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
ಲೇಸಿ ಮ್ಯಾಂಗೋ ಹೋಮ್ ಸ್ಟೇ (Lazy mango homestay) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮರಿಯಾನೆಯೊಂದು ಆನೆಗಳ ಹಿಂಡಿನಲ್ಲಿ ಇರುವುದನ್ನು ಕಾಣಬಹುದು. ಇದೇ ವೇಳೆ ಈ ಪುಟಾಣಿ ಆನೆ ತನ್ನ ಬುದ್ಧಿವಂತಿಕೆಯನ್ನು ತೋರಿಸಿದೆ. ಈ ಆನೆ ಮರಿಯು ಸಣ್ಣ ಕೋಲಿನಿಂದ ಮೈ ಕೆರೆದುಕೊಳ್ಳುತ್ತಿರುವ ದೃಶ್ಯವನ್ನು ನೀವು ನೋಡಬಹುದು.
ಇದನ್ನೂ ಓದಿ: ಪುಟಾಣಿ ಆನೆಗೆ ಸೊಂಡಿಲಿನಿಂದ ನೀರು ಕುಡಿಯಲು ಕಲಿಸಿಕೊಟ್ಟ ತಾಯಾನೆ
ಈ ವಿಡಿಯೋ 14 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸ್ವೀಟ್ ಬೇಬಿ ಎಂದಿದ್ದಾರೆ. ಇನ್ನೊಬ್ಬರು, ಈ ಮರಿಯಾನೆ ನಿಜಕ್ಕೂ ಬುದ್ಧಿವಂತೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಆನೆಗಳು ಬುದ್ಧಿವಂತ ಪ್ರಾಣಿಗಳು, ಅವುಗಳನ್ನು ಪ್ರೀತಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ