AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪುಟಾಣಿ ಆನೆಗೆ ಸೊಂಡಿಲಿನಿಂದ ನೀರು ಕುಡಿಯಲು ಕಲಿಸಿಕೊಟ್ಟ ತಾಯಾನೆ

ಮೂಕ ಪ್ರಾಣಿಗಳು ತನ್ನ ಕಂದಮ್ಮಗಳ ಮೇಲೆ ಪ್ರೀತಿ, ಕಾಳಜಿಯ ದೃಶ್ಯಗಳನ್ನು ನೀವು ನೋಡಿರುತ್ತೀರಿ. ಇದೀಗ ತಾಯಾನೆ ತನ್ನ ಕಂದಮ್ಮನಿಗೆ ಸೊಂಡಿಲಿನಿಂದ ನೀರು ಕುಡಿಯುವುದು ಹೇಗೆಂದು ಹೇಳಿ ಕೊಟ್ಟಿದೆ. ಮರಿಯಾನೆ ತಾಯಾನೆ ಹೇಳಿದ್ದಂತೆ ನೀರು ಕುಡಿದಿದ್ದು, ಈ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಪುಟಾಣಿ ಆನೆಗೆ ಸೊಂಡಿಲಿನಿಂದ ನೀರು ಕುಡಿಯಲು ಕಲಿಸಿಕೊಟ್ಟ ತಾಯಾನೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Aug 21, 2026 | 1:24 PM

Share

ತಾಯಿ ಪ್ರೀತಿಯೇ ಹಾಗೆ, ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇದೀಗ ತಾಯಾನೆಯೊಂದು (mother elephant) ತನ್ನ ಕಂದಮ್ಮನ ಮೇಲೆ ತೋರಿದ ಪ್ರೀತಿ ಇಂಟರ್ನೆಟ್‌ನಲ್ಲಿ ಎಲ್ಲರ ಗಮನ ಸೆಳೆದಿದೆ. ತಾಯಾನೆ ಸೊಂಡಿಲಿನಲ್ಲಿ ನೀರು ಕುಡಿಯುವುದು ಹೇಗೆಂದು ಮರಿಯಾನೆಗೆ ಕಲಿಸಿಕೊಟ್ಟಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೀವಾಯ್ಸ್‌ಆಫ್‌ಭಾರತ್‌.ಇನ್‌ (mevoiceofbharat.in) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾಯಿ – ಕಂದಮ್ಮನ ಬಾಂಧವ್ಯ ಸಾರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ತಾಯಾನೆಯೊಂದು ಬಕೆಟ್ ನಲ್ಲಿಟ್ಟ ನೀರು ಕುಡಿಯುತ್ತಿದೆ. ಮರಿಯಾನೆಯು ತನ್ನ ಅಮ್ಮನ ಬಳಿಗೆ ಬಂದು ನೀರು ಬೇಕು ಎನ್ನುವಂತೆ ಸನ್ನೆ ಮಾಡಿದೆ. ಇದನ್ನರಿತ ತಾಯಾನೆ ತನ್ನ ಕಂದಮ್ಮನಿಗೆ ಸೊಂಡಿಲಿನಿಂದ ನೀರು ಹೇಗೆ ಕುಡಿಯಬೇಕೆಂದು ಕಲಿಸಿ ಕೊಟ್ಟಿದೆ. ತದನಂತರದಲ್ಲಿ ಮರಿಯಾನೆ ತನ್ನ ಪುಟಾಣಿ ಸೊಂಡಿಲಿನಿಂದ ನೀರು ಕುಡಿಯುವುದನ್ನು ನೋಡಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮರದ ಕಡ್ಡಿ ಬಳಸಿ ಕಿವಿ ಸ್ವಚ್ಛಗೊಳಿಸಿದ ಗಜರಾಜ

ಈ ವಿಡಿಯೋ ಇದುವರೆಗೆ ಮೂವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತುಂಬಾ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, ತಾಯಿ ಪ್ರೀತಿಗೆ ಬೇರೆ ಹೋಲಿಕೆ ಇಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮೂಕ ಪ್ರಾಣಿಗಳ ಕಾಳಜಿ ನೋಡಿ ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಧಾರವಾಡ: ₹50 ಲಕ್ಷ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್
ಧಾರವಾಡ: ₹50 ಲಕ್ಷ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್
ಇಂದು ಕನ್ಯಾ ಸಂಕ್ರಮಣದ ದಿನ; ಸೂರ್ಯ ದೇವನ ದರ್ಶನದಿಂದ ಆರೋಗ್ಯ ವೃದ್ಧಿ
ಇಂದು ಕನ್ಯಾ ಸಂಕ್ರಮಣದ ದಿನ; ಸೂರ್ಯ ದೇವನ ದರ್ಶನದಿಂದ ಆರೋಗ್ಯ ವೃದ್ಧಿ
ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ನಿರ್ಮಲಾ ಸೀತಾರಾಮನ್!
ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ನಿರ್ಮಲಾ ಸೀತಾರಾಮನ್!
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ