Tata Harrier : ‘ಟಾಟಾ ಹ್ಯಾರಿಯರ್‌ನಲ್ಲಿರುವ ಜನರು ಅದೃಷ್ಟವಂತರು. ಆ ದೊಡ್ಡ ಬಂಡೆಗಲ್ಲು ಎರಡು ಅಡಿ ಹಿಂದೆ ಏನಾದರೂ ಬಿದ್ದಿದ್ದರೆ ಕಾರಿನೊಳಗಿನವರೆಲ್ಲರೂ ಖಂಡಿತ ಸಾವನ್ನಪ್ಪುತ್ತಿದ್ದರು. ಟಾಟಾ ಮೊಟಾರ್ಸ್ನ ಈ ಕಾರು ಉತ್ತಮ ಗುಣಮಟ್ಟವನ್ನು ಹೊಂದಿದೆ. ಇಷ್ಟೊಂದು ದೊಡ್ಡ ಹೊಡೆತಕ್ಕೂ ಅದು ಬಗ್ಗಲಿಲ್ಲ. ಉತ್ತಮ ಗುಣಮಟ್ಟವು ಜೀವವನ್ನು ಉಳಿಸುತ್ತದೆ.’ ಸಿನಿಕಲ್ ಉಜ್ವಲ್ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಟ್ವೀಟ್ ಆಗಿದೆ. ಈ ಟ್ವೀಟ್ನಡಿಯೇ, ಖಂಡಿತ ಟಾಟಾ ಮೋಟಾರ್ಸ್ ಈ ಟ್ವೀಟ್ ಮಾಡಲು ನನಗೆ ಹಣ ಕೊಟ್ಟಿಲ್ಲ. ನೀವು ಈ ಟ್ವೀಟ್ ಅನ್ನು ಮತ್ತೊಮ್ಮೆ ಓದಿ ಎಂದಿದ್ದಾರೆ ಇದರ ಖಾತೆದಾರ.
The folks in the Harrier were lucky. 2ft behind & it’d have meant certain death.
ಇದನ್ನೂ ಓದಿThis is excellent build quality from @TataMotors – the suspension & frame strength meant the vehicle did not budge much despite the extreme intensity of the impact. Quality saves lives; pay for it. pic.twitter.com/b62SqR6S7h
— Cynical Ujval (@cynical_ujval) July 12, 2023
ಈ ವಿಡಿಯೋ ಅನ್ನು 1.8 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 2,000 ಜನರು ಲೈಕ್ ಮಾಡಿದ್ದಾರೆ. ಸುಮಾರು 500 ಜನರು ರೀಟ್ವೀಟ್ ಮಾಡಿದ್ದಾರೆ. ಇಂಥ ಘೋರ ಅಪಘಾತದಲ್ಲಿಯೂ ಕಾರಿನಲ್ಲಿರುವವರೆಲ್ಲ ಬದುಕುಳಿದಿದ್ದಾರಲ್ಲ, ಅವರ ಅದೃಷ್ಟ! ಎಂದು ಹಲವಾರು ಜನ ಹೇಳಿದ್ದಾರೆ. ನಿಮ್ಮ ಟ್ವೀಟ್ ಅದನ್ನು ಧ್ವನಿಸದೆ ಟಾಟಾ ಹ್ಯಾರಿಯರ್ ಬ್ರ್ಯಾಂಡ್ನ ಗುಣಮಟ್ಟದ ಬಗ್ಗೆ ಪ್ರಚಾರ ಮಾಡುತ್ತಿರುವಂತೆ ತೋರುತ್ತಿದೆ. ಇದಕ್ಕಾಗಿ ಎಷ್ಟು ಹಣವನ್ನು ನಿಮಗೆ ಕೊಟ್ಟಿರುತ್ತಾರೆ ಎಂದು ಸಿನಿಕಲ್ ಉಜ್ವಲ್ ಗೆ ಕೇಳಿದ್ದಾರೆ ಅನೇಕರು. ಆದರೂ ಈ ವ್ಯಕ್ತಿ ಮತ್ತೆ ಮತ್ತೆ ಕಾರು ಮತ್ತು ಅಟೊಮೊಬೈಲ್ ಬಗ್ಗೆಯೇ ವಿವರಣೆ ನೀಡುತ್ತಿದ್ದಾರೆ.
ಇದನ್ನೂಓದಿ : Viral: ಹೇರ್ ಎಕ್ಸ್ಟೆನ್ಷನ್ ತಂದಿಟ್ಟ ಫಜೀತಿ; ಈ ಸಲೂನಿಗೆ ಯಾರೂ ಹೋಗಬೇಡಿ ಎಂದ ಮಹಿಳೆ
ಕಾರಿನ ಗುಣಮಟ್ಟಕ್ಕೆ ಇದು ಸಂಬಂಧವೇ ಇಲ್ಲ. ಜನರ ಅದೃಷ್ಟ, ಬದುಕುಳಿದಿದ್ದಾರೆ ಅಷ್ಟೇ ಎಂದು ಅನೇಕರು ಹೇಳಿದ್ದಾರೆ. ಆದರೂ ಈ ವ್ಯಕ್ತಿ ತನ್ನ ಟ್ವೀಟ್ ಅನ್ನು ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸುವ ಲಕ್ಷಣಗಳೇ ಕಂಡಿಲ್ಲ. ಆಗ ಹಲವಾರು ಜನ ಈತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಟಾಟಾ ಮೋಟಾರ್ಸ್ ಅನ್ನು ಟ್ಯಾಗ್ ಮಾಡಿದ ಈ ವ್ಯಕ್ತಿ ನೆಟ್ಟಿಗರ ಹಾವಳಿಯನ್ನು ಸಹಿಸಿಕೊಳ್ಳಲಾಗದೆ ಬೇಗ ಹಣ ಕಳಿಸಿಬಿಡಿ! ಎಂದು (ತಮಾಷೆಯಿಂದ?) ಶರಣಾಗಿದ್ದಾರೆ.
ಈ ದುರ್ಘಟನೆ ಭಾರತದಲ್ಲಿ ಎಲ್ಲಿ ನಡೆದಿದೆ ಎಂಬ ಮಾಹಿತಿ ಈ ಟ್ವೀಟ್ನಲ್ಲಿಲ್ಲ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:30 pm, Thu, 13 July 23