
ಮದುವೆ (marriage) ಎಂದರೆ ಸಂಭ್ರಮವೇನೋ ಸರಿಯೇ, ಹೆಣ್ಣು ಮಕ್ಕಳ ಮದುವೆ ಹೆತ್ತವರಿಗೆ ಹೊರೆಯಾಗುತ್ತದೆ. ಆದರೆ, ಗಂಡಿನ ಮನೆಯವರ ಗೌರವಕ್ಕೆ ಧಕ್ಕೆ ಬರದಂತೆ ಅದ್ದೂರಿಯಾಗಿ ಮದುವೆ ಮಾಡಿಕೊಡಬೇಕಾಗುತ್ತದೆ. ವರನಿಗೆ ಬೇಕಾದ ದುಬಾರಿ ಉಡುಗೊರೆ (gift) ಗಳನ್ನು ನೀಡಬೇಕಾಗುತ್ತದೆ. ಇನ್ನು ಕೆಲವೆಡೆ ಮಗಳು ಚೆನ್ನಾಗಿ ಇರಬೇಕೆಂದು ಮನೆಗೆ ಬೇಕಾದ ಫ್ಯಾನ್, ಫ್ರಿಡ್ಜ್, ಸೋಫಾ ಸೆಟ್ ಸೇರಿದಂತೆ ಇನ್ನಿತ್ತರ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗ (boy) ನೊಬ್ಬನು ತನ್ನ ಸಹೋದರಿಯ ಮದುವೆ ಸಮಾರಂಭದಲ್ಲಿ ಆಕೆಗೆ ಏನೆಲ್ಲಾ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದೇವೆ ಎಂದು ಹೇಳುತ್ತಿದ್ದಾನೆ. ಈ ವಿಡಿಯೋಗೆ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.
@manusinghvlogs1999 ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ ಬಿಹಾರದ್ದು ಎನ್ನಲಾಗಿದ್ದು, ಇದರಲ್ಲಿ ಹುಡುಗನೊಬ್ಬನು ತನ್ನ ಸಹೋದರಿ ಮದುವೆಯ ತಿಲಕ ಸಮಾರಂಭಕ್ಕಾಗಿ ತನ್ನ ಸಹೋದರಿಗೆ ನೀಡಲು ಸಿದ್ಧಪಡಿಸಿದ ಉಡುಗೊರೆಗಳನ್ನು ತೋರಿಸುತ್ತಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಹವಾನಿಯಂತ್ರಣ, ರೆಫ್ರಿಜರೇಟರ್, ಸೋಫಾಗಳು, ಕುರ್ಚಿಗಳು ಮತ್ತು ಹಾಸಿಗೆ ಸೇರಿದಂತೆ ಮನೆಗೆ ಬೇಕಾದ ಅಗತ್ಯ ವಸ್ತುಗಳು ಇಲ್ಲಿವೆ. ಎಲ್ಲವೂ ಒಳ್ಳೆಯ ಬ್ರ್ಯಾಂಡ್ ವಸ್ತುಗಳಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಸಹೋದರಿಗೆ ನೀಡಲು ಸಿದ್ಧಪಡಿಸಲಾಗಿದೆ ಎನ್ನುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ : ಭಾರತದಲ್ಲಿ ಇರುವ ಏಕೈಕ ಪುರುಷ ನದಿ ಯಾವುದು ಗೊತ್ತಾ?
ಈ ವಿಡಿಯೋ ಈಗಾಗಲೇ ಇಪ್ಪತ್ತಾರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಇದು ಸಹೋದರಿಗಾಗಿ ನೀಡುವ ಪ್ರೀತಿಯ ಉಡುಗೊರೆ’ ಎಂದಿದ್ದಾರೆ. ಇನ್ನೊಬ್ಬರು, ‘ಅಕ್ಕನ ಮದುವೆ ಎನ್ನುವ ಖುಷಿ ಆ ಹುಡುಗನ ಮುಖದಲ್ಲಿ ಎದ್ದು ಕಾಣುತ್ತಿದೆ. ಅದಲ್ಲದೇ ಖುಷಿಯನ್ನು ಯಾವ ರೀತಿ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದಾನೆ. ಬಿಹಾರಿ ಮದುವೆಯಲ್ಲಿ ಪ್ರತಿಯೊಬ್ಬ ತಂದೆಯೂ ತನ್ನ ಮಗಳಿಗೆ ಈ ರೀತಿ ಉಡುಗೊರೆಗಳನ್ನು ನೀಡುವುದು ಸರ್ವೇ ಸಾಮಾನ್ಯವಾಗಿದೆ. ಇದು ವರದಕ್ಷಿಣೆಯಲ್ಲ, ನಿಮ್ಮ ದೃಷ್ಟಿಕೋನದಲ್ಲಿ ಇದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ಹುಡುಗನ ಮುಖದಲ್ಲಿ ಎಷ್ಟು ಮುಗ್ದತೆಯಿದೆ ಎನ್ನುವುದನ್ನು ನೋಡಿ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ