Dublin Airport : ಪ್ರೇಮನಿವೇದನೆ, ಮದುವೆ ಇವು ಬದುಕಿನ ಅತ್ಯಂತ ವಿಶೇಷ ಗಳಿಗೆಗಳು ಅವು ಅವಿಸ್ಮರಣೀಯವಾಗಿರಬೇಕು ಎನ್ನುವ ಹಂಬಲ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದೆ. ಮದುವೆ ಸರಿ, ಆದರೆ ಪ್ರೇಮನಿವೇದನೆ? ಇದು ಅತ್ಯಂತ ಖಾಸಗೀ ಎನ್ನುವುದು ತಲತಲಾಂತರದಿಂದ ಗೊತ್ತಿರುವಂಥದ್ದು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದರಲ್ಲಿಯೂ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಪ್ರೇಮನಿವೇದನೆ (Love Proposal) ಎನ್ನುವುದು ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಿಸುವ ಅತ್ಯಂತ ಹೆಮ್ಮೆಯ ಸಂಗತಿ ಎಂಬಂತಾಗಿದೆ. ಈ ಮೂಲಕ ತಮ್ಮ ಪ್ರೀತಿಯನ್ನು ಜಗತ್ತಿಗೆ ತಿಳಿಯಪಡಿಸಬೇಕು ಎನ್ನುವ ಹಂಬಲ ಜೋಡಿಗಳದ್ದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.
ಇದು ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ. ಗಗನಸಖಿಯಾಗಿರುವ (Flight Attendant) ಸ್ನೇಹಿತೆಯನ್ನು ಅಚ್ಚರಿಯಿದ ಮುದಗೊಳಿಸಲು ಈತ ಹೀಗೆ ವಿಮಾನ ನಿಲ್ಧಾಣದಲ್ಲಿ ಪ್ರೇಮನಿವೇದನೆ ಮಾಡಿಕೊಂಡಿದ್ದಾನೆ. ಆಗ ಆಕೆ ಸಖೇದಾಶ್ಚರ್ಯಗೊಂಡಿದ್ದಾಳೆ. ಹಿನ್ನೆಲೆಯಲ್ಲಿ ಪಿಯಾನೋವಾದನವೂ ಕೇಳಿಬಂದು ಸನ್ನಿವೇಶವನ್ನು ಶೃಂಗಾರಮಯವಾಗಿಸಿದೆ. ಆತನಕ ಮೂಕಪ್ರೇಕ್ಷಕರಂತೆ ನಿಂತಿದ್ದ ಜನರೆಲ್ಲ ಚಪ್ಪಾಳಗಳಿಂದ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Viral Video: ಚೈನೀಸ್ ಖಾದ್ಯದಲ್ಲಿ ಜೀವಂತ ಕಪ್ಪೆಮರಿ; ಗ್ರಾಹಕರ ಕ್ಷಮೆ ಕೇಳಿದ ರೆಸ್ಟೋರೆಂಟ್
ಈ ವಿಡಿಯೋ ಈಗಾಗಲೇ 2.8 ಮಿಲಿಯನ್‌ಗಿಂತಲೂ ಹೆಚ್ಚು ಜನರಿಂದ ನೋಡಲ್ಪಟ್ಟಿದೆ. ನೆಟ್ಟಿಗರು ಪುಳಕಿತಗೊಂಡು ಪ್ರತಿಕ್ರಿಯಿಸುತ್ತಿದ್ದಾರೆ. ಪ್ರೀತಿ ಎಲ್ಲವನ್ನೂ ಗೆಲ್ಲುತ್ತದೆ, ವಿಮಾನನಿಲ್ದಾಣದಲ್ಲಿರುವ ಅದೆಷ್ಟೋ ಜನರು ಯಾವ ಭಾಷೆಯೋ, ದೇಶವೋ, ಜನಾಂಗವೋ ಅಂತೂ ಎಲ್ಲರೂ ಈ ಕ್ಷಣಗಳನ್ನು ಒಟ್ಟಾಗಿ ಸಂಭ್ರಮಿಸಿದರಲ್ಲವೆ? ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ಎಗ್ ಪ್ಲ್ಯಾಂಟ್; ಇದರ ಹೆಸರು ಈಗ ಸಾರ್ಥಕವಾಯಿತು ಎನ್ನುತ್ತಿರುವ ನೆಟ್ಟಿಗರು
ನನ್ನ ಗಂಡ 35 ವರ್ಷಗಳ ಹಿಂದೆ ನಾನು ಕೆನಡಿ ವಿಮಾನ ನಿಲ್ದಾಣದಲ್ಲಿ ಟಿಡಬ್ಲ್ಯೂಎ ಫ್ಲೈಟ್ ಅಟೆಂಡೆಂಟ್ ಆಘಿದ್ದಾಗ ನನಗೆ ಪ್ರೇಮ ನಿವೇದನೆ ಮಾಡಿಕೊಂಢಿದ್ದರು. ಆಹಾ ಎಂಥ ಶೃಂಗಾರಮಯವಾಗಿದೆ ಈ ದೃಶ್ಯ, ಜಗತ್ತಿನಲ್ಲಿ ಇಂಥ ದೃಶ್ಯಗಳು ಹೆಚ್ಚಬೇಕು, ಎಲ್ಲೆಡೆ ಪ್ರೀತಿ ಶಾಂತಿ ನೆಲೆಸಬೇಕು. ಮುಖ್ಯಕ್ಷಣಗಳು ಹತ್ತಿರವಾಗುವ ತನಕವೂ ಅಲ್ಲಿ ನೆರೆದ ಜನರೆಲ್ಲ ಎಷ್ಟು ಶಾಂತಿಯಿಂದ ಕಾಯುತ್ತಿದ್ದರು… ಎಂಬಿತ್ಯಾದಿ ಪ್ರತಿಕ್ರಿಯೆಗಳ ಸುರಿಮಳೆಯೇ ಇಲ್ಲಿ ಸುರಿದಿದೆ.
ನೀವೇನಂತೀರಿ ಈ ವಿಡಿಯೋ ನೋಡಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ