Viral: ತನ್ನನ್ನು ಕಾಳಜಿ ಮಾಡುವ ಜೀವಕೆ ಮುತ್ತು ನೀಡಿದ ಕರು; ಹೃದಯಸ್ಪರ್ಶಿ ದೃಶ್ಯ ವೈರಲ್‌

ಮೂಕ ಪ್ರಾಣಿಗಳು ಗುಣದಲಿ ಮೇಲು ಎನ್ನುವ ಮಾತಿದೆ. ನೀವು ಅವುಗಳಿಗೆ ಪ್ರೀತಿ, ಕಾಳಜಿ ತೋರಿದರೆ ಜೀವನ ಪರ್ಯಂತ ನಿಮ್ಮನ್ನು ಮರೆಯಲ್ಲ. ಇದೀಗ ಮನೆಯೊಡತಿಗೆ ಪುಟಾಣಿ ಕರುವೊಂದು ಮುತ್ತು ನೀಡಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ತನ್ನನ್ನು ಕಾಳಜಿ ಮಾಡುವ ಜೀವಕೆ ಮುತ್ತು ನೀಡಿದ ಕರು; ಹೃದಯಸ್ಪರ್ಶಿ ದೃಶ್ಯ ವೈರಲ್‌
ವೈರಲ್‌ ವಿಡಿಯೋ
Image Credit source: Facebook

Updated on: May 24, 2026 | 6:01 PM

ಮನುಷ್ಯನಿಗೆ ಹೋಲಿಸಿದರೆ ಒಳ್ಳೆಯ ಗುಣ, ಮಾನವೀಯತೆ, ಸಹಾಯ ಮನೋಭಾವ ಇವೆಲ್ಲವೂ ತುಸು ಹೆಚ್ಚೇ ಪ್ರಾಣಿಗಳಲ್ಲಿದೆ. ಇದಕ್ಕೆ ನಿದರ್ಶನದಂತಿರುವ ಸಾಕಷ್ಟು ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ (social media) ಆಗಾಗ್ಗೆ ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ಮನೆಯೊಡತಿಯೊಂದಿಗೆ ಪುಟಾಣಿ ಕರು (calf) ನಡೆದುಕೊಂಡ ರೀತಿ ನೋಡಿದ್ರೆ ನೀವು ಶಾಕ್ ಆಗ್ತೀರಾ. ತನ್ನನ್ನು ಕಾಳಜಿ ಮಾಡುವ ಮನೆಯೊಡತಿಗೆ ಮುತ್ತು ನೀಡಿ ಕರುವೊಂದು ತನ್ನ ಪ್ರೀತಿಯನ್ನು ತೋರ್ಪಡಿಸಿದ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪಿಂಗ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ನಿಷ್ಕಲ್ಮಶ ಪ್ರೀತಿಗೆ ಕರಗಿ ಹೋಗಿದ್ದಾರೆ.

Mr. Udburu ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮನೆ ಒಡತಿಯೂ ಕರುವಿನ ಮುಂದೆ ಮುತ್ತು ಕೊಡು ಎಂದು ಕೇಳುತ್ತಿರುವುದನ್ನು ಕಾಣಬಹುದು. ತನ್ನನ್ನು ಕಾಳಜಿ ಮಾಡುವ ಜೀವ ಹೀಗೆನ್ನುತ್ತಿದ್ದಂತೆ ಕರು ಮುತ್ತನ್ನು ನೀಡಿ ಪ್ರೀತಿ ತೋರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುಗ್ಧ ಮನಸ್ಸುಗಳ ಶುದ್ಧ ಸಂಭಾಷಣೆ; ಕರುವಿನ ಜತೆಗೆ ಮಾತಿಗಿಳಿದ ಪುಟಾಣಿ

ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಯಾರದರೇನಂತೆ ತಾಯಿ ಪ್ರೀತಿ ಒಂದೇ ಎಂದರೆ, ಮತ್ತೊಬ್ಬರು, ಮನುಷ್ಯನಿಗೆ ಪ್ರೀತಿ ಕೊಡೋದಕ್ಕಿಂತ ಈ ಮೂಕ ಪ್ರಾಣಿಗಳಿಗೆ ಪ್ರೀತಿ ಕೊಟ್ಟರೆ ನೆಮ್ಮದಿ ಅನ್ಸುತ್ತೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮಾತು ಬರುವ ಮನುಷ್ಯರಿಗಿಂತ ಮೂಕ ಪ್ರಾಣಿಗಳೇ ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:00 pm, Sun, 24 May 26

Loading...
Unable to load recommendations.
Follow Us