Viral Video: ಕುರುಡುನಾಯಿಯೂ ವಾತ್ಸಲ್ಯಮಯೀ ಬೆಕ್ಕಿನ ಅಂತಃಕರಣ ಪಾಠವೂ

|

Updated on: Jul 27, 2023 | 10:29 AM

Blind Dog : ಪ್ರಾಣಿಗಳಂಥ ಪ್ರಾಣಿಗಳಿಗೂ ವೈರತ್ವ ಮರೆತು ಪ್ರೀತಿಸುವುದು, ಬದುಕುವುದು ಸಾಧ್ಯವಾಗುತ್ತಿದೆ ಎಂದರೆ ಮನುಷ್ಯರಾದ ನಮಗೆ ಇದು ಯಾಕೆ ಕಷ್ಟವಾಗುತ್ತಿದೆ? ಮನುಷ್ಯನಿಗೂ ಇಂಥ ಸ್ಪರ್ಶ ಸಿಕ್ಕರೆ...

Viral Video: ಕುರುಡುನಾಯಿಯೂ ವಾತ್ಸಲ್ಯಮಯೀ ಬೆಕ್ಕಿನ ಅಂತಃಕರಣ ಪಾಠವೂ
ಕುರುಡು ನಾಯಿಯ ಕಾಳಜಿ ತೆಗೆದುಕೊಳ್ಳುತ್ತಿರುವ ಬೆಕ್ಕು
Follow us on

Pets : ನಾಯಿ ಮತ್ತು ಬೆಕ್ಕು ಬದ್ಧವೈರಿಗಳು ಎಂದು ನಂಬಿಕೊಂಡೇ ಬಂದಿದ್ದೇವೆ. ಇದಕ್ಕೆ ಪೂರಕವೆಂಬಂತೆ ನಾಯಿಗಳು ಬೆಕ್ಕುಗಳ ಕತ್ತು ಮುರಿದು ಕೊಲ್ಲುವುದನ್ನೂ ನೋಡಿದ್ದೇವೆ. ಆದರೂ ಇದಕ್ಕೆ ಅಪವಾದವೆಂಬಂತೆ ಕೆಲ ಬೆಕ್ಕು ನಾಯಿಗಳು ಸ್ನೇಹಿತರಂತೆಯೋ, ತಾಯಿ ಮಗುವಿನಂತೆಯೋ ಒಟ್ಟಾಗಿ ವಾಸಿಸುತ್ತಿರುತ್ತವೆ. ನಿರಂತರವಾಗಿ ಪರಸ್ಪರ ಮಿಡಿಯುತ್ತವೆ, ಸ್ಪಂದಿಸುತ್ತವೆ, ಕಾಳಜಿಯನ್ನೂ ತೆಗೆದುಕೊಳ್ಳುತ್ತವೆ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋ ಪ್ರಾಣಿಗಳ ರಕ್ಷಣಾ ಕೇಂದ್ರದಲ್ಲಿ ಚಿತ್ರೀಕರಿಸುವಂಥದ್ದು. ಅಶಕ್ತಗೊಂಡ ನಾಯಿಯೊಂದನ್ನು  ಆಪ್ತವಾಗಿ ಸಂತೈಸುತ್ತಿದೆ.

Every day we witness beautiful connections between our residents. Tam, a beloved member of Sara Morocco for 9 long years. He is a blind dog with Ehlers-Danlos syndrome. They graciously gift him with moments of gentle care and unwavering affection.
by u/sproggs44 in AnimalsBeingBros

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಸುಮಾರು 9 ವರ್ಷಗಳಿಂದ ಟ್ಯಾಮ್​, ನಮ್ಮ ಸಾರಾ ಮೊರೊಕ್ಕೊದ ಪ್ರೀತಿಯ ನಿವಾಸಿ. ಕುರುಡ (Ehlers-Danlos syndrome)ನಾದ ಇವನಿಗೆ ವಾತ್ಸಲ್ಯ ಮತ್ತು ಹೆಚ್ಚು ಕಾಳಜಿ ಇಲ್ಲಿ ಸಿಗುತ್ತದೆ. ಇಲ್ಲಿಯ ಜೀವಿಗಳ ಪರಸ್ಪರ ಆಪ್ತಚಿತ್ರಣಗಳಿಗೆ ನಾವು ಪ್ರತೀದಿನ ಸಾಕ್ಷಿಯಾಗುತ್ತೇವೆ’ ಎಂಬ ಒಕ್ಕಣೆಯೊಂದಿಗೆ ಈ ವಿಡಿಯೋ ಅನ್ನು ರೆಡ್ಡಿಟ್ ನಲ್ಲಿ ಪೋಸ್ಟ್​ ಮಾಡಲಾಗಿದೆ.

ಇದನ್ನೂ ಓದಿ : Viral: ಗ್ಯಾಂಗ್ಸ್​ ಆಫ್​ ವಾಸೇಪುರ್​ಗೂ ಬಾರ್ಬಿ ಫಿವರ್ ಸೋಂಕಿಸಿದ ಎಐ ಕಲಾವಿದರು

ಅಂಗಳದಲ್ಲಿರುವ ಟ್ಯಾಮ್​ಗೆ ಬೆಕ್ಕೊಂದು ಮಸಾಜ್​ ಮಾಡುತ್ತಿದೆ. ಟ್ಯಾಮ್​ ಅದನ್ನು ಅನುಭವಿಸುತ್ತಿದ್ದಾನೆ. ಸ್ವಲ್ಪ ದೂರದಲ್ಲಿ ಕಪ್ಪು ಬೆಕ್ಕೊಂದು ಈ ಘಳಿಗೆಗಳಿಗೆ ಸಾಕ್ಷಿಯಾಗುತ್ತಿದೆ. ಈ ಹೃದಯಸ್ಪರ್ಶಿಯಾದ ದೃಶ್ಯವು ನೆಟ್ಟಿಗರ ಮನಸೆಳೆಯುತ್ತಿದೆ. ಈ ವಿಡಿಯೋ ನನ್ನ ಹೃದಯವನ್ನು ಬೆಚ್ಚಗಾಗಿಸಿದೆ, ಮನುಷ್ಯರು ಕೂಡ ಇಂಥ ಆಪ್ತ ಘಳಿಗೆಗಳನ್ನು ಬಯಸುತ್ತಾರೆ ಎಂದಿದ್ದಾರೆ ಒಬ್ಬರು. ಆಹ್​ ಇದು ನನ್ನ ಭಾವಕೋಶವನ್ನು ಆರ್ದ್ರಗೊಳಿಸುತ್ತಿದೆ, ಇಂಥ ಸ್ಪರ್ಶ ಸಿಕ್ಕಲ್ಲಿ ಮನುಷ್ಯ ಕೂಡ ವೈರತ್ವವನ್ನು ಮರೆಯಬಹುದೇನೋ ಎಂದಿದ್ದಾರೆ ಮತ್ತೊಬ್ಬರು. ಈತನಕ ಈ ವಿಡಿಯೋ 14,000 ಅಪ್‌ವೋಟ್‌ ಗಳಿಸಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

 

Published On - 10:26 am, Thu, 27 July 23