Viral Video: ಕೈಲಾಸ ಪರ್ವತದಲ್ಲಿ ಶಿವ; ‘ಈಕೆ ಪಾರ್ವತಿಯ ಅವತಾರ, ಗಾಢನಿದ್ರೆಯಿಂದ ನಮ್ಮೆಲ್ಲರನ್ನು ಎಚ್ಚರಿಸುತ್ತಿದ್ದಾರೆ’
India : 'ದೇಶದ ಭವಿಷ್ಯ ಉಜ್ವಲವಾಗಿದೆ! ಈ ಉಪನ್ಯಾಸದ ಹಕ್ಕುಗಳನ್ನು NASA ಉಪಗ್ರಹದಿಂದ ಪ್ರಮಾಣೀಕರಿಸಲಾಗಿದೆ. ನೆಹರೂ ಭಾರತವನ್ನು ಮುನ್ನಡೆಸಿದರು, ಮೋದಿ ಮತ್ತೆ ಕತ್ತಲೆಯೆಡೆ ಕೊಂಡೊಯ್ಯುತ್ತಿದ್ದಾರೆ' ಎಂದೆನ್ನುತ್ತಿದ್ದಾರೆ ನೆಟ್ಟಿಗರು.
Kailash Parvat: ‘ಕಳೆದ 21,000 ವರ್ಷಗಳಿಂದ ಕೈಲಾಸ ಪರ್ವತದಲ್ಲಿ ಶಿವನು ಪಾರ್ವತಿಯೊಂದಿಗೆ ಧ್ಯಾನಮಗ್ನನಾಗಿದ್ದಾನೆ. 2016ರಲ್ಲಿ ನಾಸಾ ಉಪಗ್ರಹದ (Nasa) ಮೂಲಕ ಆ ಪರ್ವತದ ಫೋಟೋ ತೆಗೆದಾಗ ಶಿವನ ಮುಖಮುದ್ರೆಯು ಮೂಡಿಬಂದಿದೆ. ಇಡೀ ಜಗತ್ತಿನ ಅಧ್ಯಾತ್ಮ ಕೇಂದ್ರವೆನ್ನಿಸಿರುವ ಈ ಪರ್ವತದಿಂದ ಉತ್ತರ ಧೃವವು 6,666 ಕಿ.ಮೀ ದೂರದಲ್ಲಿದೆ. ಅಂದರೆ ಇದು ದಕ್ಷಿಣ ಧೃವದಿಂದ ಎರಡು ಪಟ್ಟು, 13, 332 ಕಿ.ಮೀ. ದೂರದಲ್ಲಿದೆ. ಈ ಪರ್ವತದಲ್ಲಿ ಅಧ್ಯಾತ್ಮಿಕ ಸಾಕ್ಷಾತ್ಕಾರವಾಗುವ ಜಾಗವನ್ನು ಮುಂಡಿ ಎನ್ನುತ್ತಾರೆ. ರಾಮಾಯಣದಲ್ಲಿಯೂ ಈ ಜಾಗದ ಬಗ್ಗೆ ಇದೇ ರೀತಿ ಅತ್ಯಂತ ನಿಖರವಾಗಿ ಉಲ್ಲೇಖಿಸಲಾಗಿದೆ.’ ಹೀಗೆಂದು ಈ ವಿಡಿಯೋದಲ್ಲಿರುವ ಯುವತಿ ಪಾಠ ಒಪ್ಪಿಸುತ್ತಿದ್ದಾರೆ. ನೆಟ್ಟಿಗರ ಕಥೆ ಕೇಳಬೇಕೆ!?
NASA satellite confirms Shiv ji and Parvati meditating on mount Kailash pic.twitter.com/1l5PLCNmRg
— COSMIC/. (@cosmicaz_) July 23, 2023
ಈ ವಿಡಿಯೋದಲ್ಲಿರುವ ಬುದ್ಧಿವಂತೆ ನಾನಲ್ಲ, ಈಕೆಯ ಪುರಾಣ ವಿಜ್ಞಾನವನ್ನು ನಾನು ಬೆಂಬಲಿಸುವುದಿಲ್ಲ ಎಂದಿದ್ದಾರೆ ಒಬ್ಬರು. ಅಬ್ಬಾ ಇಂಥ ಸುಂದರವಾದ ಮೀಮ್ ಈತನಕ ನೋಡಿರಲೇ ಇಲ್ಲ ಎಂದಿದ್ದಾರೆ ಇನ್ನೊಬ್ಬರು. ಹಿಂದೂ ದೇವತೆಗಳು ಧ್ಯಾನಕ್ಕೆ ಕುಳಿತಿರುವುದನ್ನು ಸಾಬೀತುಗೊಳಿಸುವ ದಿಕ್ಕಿನಲ್ಲಿ ನಾಸಾ ಗಂಭೀರವಾಗಿ ತೊಡಗಿಕೊಂಡಿದೆ. ಮುಂದಿನ ದಿನಗಳಲ್ಲಿ ಉತ್ತರ ಧೃವದಲ್ಲಿ ಸಾಂತಾಕ್ಲಾಸ್ ಸಾಕ್ಷಾತ್ಕಾರಗೊಳ್ಳುತ್ತಾನೆ ಎಂಬುದನ್ನು ನಾಸಾ ದೃಢೀಕರಿಸಲೂಬಹುದು. ನೋಡೋಣ ನನ್ನ ಈ ಊಹೆ ನಿಜವಾಗುವುದೋ ಏನೋ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral: ‘ಮಾಂಸಾಹಾರ ಸಸ್ಯಾಹಾರಕ್ಕೆ ಒಂದೇ ಚಮಚ ಬಳಸಿದ್ದರೆ!’ ಸುಧಾ ಮೂರ್ತಿಯ ಮೇಲೆ ಮತ್ತೆ ಮುಗಿಬಿದ್ದ ನೆಟ್ಟಿಗರು
ಇತ್ತೀಚಿನ ದಿನಮಾನಗಳಲ್ಲಿ ಇಂಗ್ಲಿಷ್ನಲ್ಲಿ ಏನನ್ನಾದರೂ ಹೇಳಿದರೆ ಭಾರತೀಯರು ಅದನ್ನು ಹೆಚ್ಚು ನಂಬುತ್ತಾರೆ ಎನ್ನುವುದು ಇಂಥವರಿಗೆ ತಿಳಿದಿದೆ ಎಂದಿದ್ದಾರೆ ಒಬ್ಬರು. ಹೌದು, ಇದು ಆಲ್ಬರ್ಟ್ ಐನ್ಸ್ಟಿನ್ನ ಪುನರ್ಜನ್ಮ ಎಂದು ನನ್ನ ಟೋಸ್ಟರ್ ದೃಢಪಡಿಸಿದೆ ಹಾಗಾಗಿ ಸತ್ಯಸಂಗತಿಗಳನ್ನು ಇವರಿಂದ ನೇರವಾಗಿ ಪಡೆಯಿರಿ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral: ನಿಮಗೆ ಬಾಯ್ಫ್ರೆಂಡ್ ಇದ್ದಾರಾ? ಡೆಲಿವರಿ ಏಜೆಂಟ್ ಗ್ರಾಹಕಿಯನ್ನು ಕೇಳಿದಾಗ
ಮೇಡಮ್, ಈ ವಿಷಯದ ಬಗ್ಗೆ ನಿಖರತೆ ಮತ್ತು ಆತ್ಮವಿಶ್ವಾಸವನ್ನು ಹೊಂದಿಲ್ಲ. ಹಾಗಾಗಿ ನಾಸಾದ ಹೆಸರನ್ನು ಬಳಸಿಕೊಂಡು ವಿಶ್ವಾಸಾರ್ಹತೆ ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ನಿಮಗಿನ್ನೂ ಅರ್ಥವಾಗಿಲ್ಲವೆ? ಎಂದು ಕೇಳಿದ್ದಾರೆ ಒಬ್ಬರು. ಗಣಿತ ವೆಕೇಷನ್ಗೆ ಹೋಗಿದೆಯೇ? ಎಂದು ಮಗದೊಬ್ಬರು ಕೇಳಿದ್ದಾರೆ. ಏನೇ ಆಗಲಿ ಇಂಗ್ಲಿಷ್ನಲ್ಲಿ ಹೇಳುತ್ತಿದ್ದಾರೆಂದ ಮೇಲೆ ಇದು ನಿಜಕ್ಕೂ ಸತ್ಯವೇ! ಎಂದು ಮಗದೊಬ್ಬರು ಕಾಲೆಳೆದಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ