AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮುಂಬೈ: ಮರಾಠಿ ಧಾರಾವಾಹಿ ಸೆಟ್​ನಲ್ಲಿ ಕಾಣಿಸಿಕೊಂಡ ಮರಿಚಿರತೆ

Leopard : ಇದು ಮೊದಲ ಸಲವೇನಲ್ಲ, ಕಳೆದ 10 ದಿನಗಳಲ್ಲಿ ಗೋರೆಗಾಂವ್​ನ ಫಿಲ್ಮ್​ ಸಿಟಿಯಲ್ಲಿ ಇದು ನಾಲ್ಕನೇ ಪ್ರಕರಣವಾಗಿದೆ. ಸೀರಿಯಲ್ ತಂಡಕ್ಕೆ ಚಿರತೆಗಳು ದುಃಸ್ವಪ್ನದಂತೆ ಕಾಡುತ್ತಿವೆ.

Viral: ಮುಂಬೈ: ಮರಾಠಿ ಧಾರಾವಾಹಿ ಸೆಟ್​ನಲ್ಲಿ ಕಾಣಿಸಿಕೊಂಡ ಮರಿಚಿರತೆ
ಚಿರತೆಮರಿಯೊಂದು ಗೋರೆಗಾಂವ್​ ಫಿಲ್ಮ್​ ಸಿಟಿಯ ಸೀರಿಯಲ್ ಸೆಟ್​ನೊಳಗೆ ಚಲಿಸುತ್ತಿರುವುದು
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jul 27, 2023 | 1:41 PM

Share

Mumbai : ಮುಂಬೈನ ಗೋರೆಗಾಂವ್​ ಫಿಲ್ಮ್​ ಸಿಟಿಯ (Film City) ಮರಾಠಿ ಸೀರಿಯಲ್​ ಸೆಟ್​ನಲ್ಲಿ ಮತ್ತೆ ಚಿರತೆಮರಿಯೊಂದು ಕಾಣಿಸಿಕೊಂಡಿದೆ. ಪರಿಣಾಮವಾಗಿ ಅಲ್ಲಿ ಕೆಲಸದಲ್ಲಿ ತೊಡಗಿದ್ದ ಸೀರಿಯಲ್​ನ ತಂಡದವರು ಭಯದಿಂದ ಓಡಿದ್ದಾರೆ. ಈ ದೃಶ್ಯವನ್ನು ANI ಸುದ್ದಿಸಂಸ್ಥೆಯು ಟ್ವೀಟ್​ ಮಾಡಿದೆ. ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ ​​ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಗುಪ್ತಾ, ‘ಸೆಟ್‌ನಲ್ಲಿ 200 ಕ್ಕೂ ಹೆಚ್ಚು ಜನರಿದ್ದರು. ಯಾರಾದರೂ ಪ್ರಾಣಾಪಾಯಕ್ಕೆ ಈಡಾಗುವ ಸಾಧ್ಯತೆ ಇತ್ತು. ಕಳೆದ 10 ದಿನಗಳಲ್ಲಿ ಈ ಪ್ರಕರಣ ನಾಲ್ಕನೇ ಸಲ ಮರುಕಳಿಸಿದೆ. ಈ ನಿಟ್ಟಿನಲ್ಲಿ ಈತನಕವೂ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿಲ್ಲ’ ಎಂದು ಕಿಡಿಕಾರಿದ್ದಾರೆ.

‘ಅಜೂನಿ’ ಧಾರಾವಾಹಿಯ ಸೆಟ್​ನೊಳಗೆ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತಿವೆ. ಜು. 18ರಂದು ಫಿಲ್ಮ್ ಸಿಟಿಯಲ್ಲಿರುವ ನಾಯಿಯೊಂದರ ಮೇಲೆ ಚಿರತೆಯು ದಾಳಿ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಘಟನೆಯ ನಂತರ ರೆಸ್ಕಿಂಕ್ ಅಸೋಸಿಯೇಶನ್ ಫಾರ್ ವೈಲ್ಡ್ ಲೈಫ್ ವೆಲ್ಫೇರ್ (RAWW) ಸಂಸ್ಥಾಪಕ ಮತ್ತು ಅಧ್ಯಕ್ಷ ಪವನ್ ಶರ್ಮಾ, ‘ಮಳೆಗಾಲದ ಈ ಅವಧಿಯಲ್ಲಿ ಈ ಪ್ರದೇಶದಲ್ಲಿ ಎದೆಮಟ್ಟದತನಕ ಹುಲ್ಲು ಬೆಳೆದುನಿಂತಿರುತ್ತದೆ. ಅರಣ್ಯ ಇಲಾಖೆಯು ಚಿರತೆಪೀಡಿತ ಪ್ರದೇಶಗಳಲ್ಲಿ ಹುಲ್ಲಿನ ಕಟಾವು ನಡೆಸುತ್ತಿದೆ. ಇದರೊಂದಿಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನೂ ಪ್ರಾರಂಭಿಸಿದೆ. ಈ ಎಲ್ಲದರೊಂದಿಗೆ ಸ್ಥಳೀಯರು ಮತ್ತು ಫಿಲ್ಮ್​ ಸಿಟಿ ಸಿಬ್ಬಂದಿ ಈ ಬಗ್ಗೆ ಎಚ್ಚೆತ್ತುಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : Viral Video: ಕೈಲಾಸ ಪರ್ವತದಲ್ಲಿ ಶಿವ; ‘ಈಕೆ ಪಾರ್ವತಿಯ ಅವತಾರ, ಗಾಢನಿದ್ರೆಯಿಂದ ನಮ್ಮೆಲ್ಲರನ್ನು ಎಚ್ಚರಿಸುತ್ತಿದ್ದಾರೆ

ಸಂಜಯ್ ಗಾಂಧೀ ರಾಷ್ಟ್ರೀಯ ಉದ್ಯಾನದ ಗಡಿಭಾಗವು ಚಿರತೆಗಳ ವಾಸಸ್ಥಾನವಾಗಿದೆ. ಇದಕ್ಕೆ ಹೊಂದಿಕೊಂಡೇ ಈ ಫಿಲ್ಮ್​ ಸಿಟಿ ಇದೆ. ಹಾಗಾಗಿ ಚಿರತೆಗಳು ಆಗಾಗ ಶೂಟಿಂಗ್​ ಸೆಟ್​ಗೆ ಬಂದು ಸೀರಿಯಲ್​ ತಂಡವನ್ನು ಕೆಟ್ಟಕನಸಿನಂತೆ ಕಾಡುತ್ತಿವೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:40 pm, Thu, 27 July 23

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಡಿಕೆಶಿ ಕರೆದೊಯ್ಯಲು ಬಂದ ಹೊಸ ಬೆಂಜ್ ಕಾರು ಹೇಗಿದೆ ನೋಡಿ
ಡಿಕೆಶಿ ಕರೆದೊಯ್ಯಲು ಬಂದ ಹೊಸ ಬೆಂಜ್ ಕಾರು ಹೇಗಿದೆ ನೋಡಿ
ವೈಭವ್ ಸಿಕ್ಸರ್​ಗಳ ಸುನಾಮಿಗೆ ಗೇಲ್ ದಾಖಲೆ ಧ್ವಂಸ
ವೈಭವ್ ಸಿಕ್ಸರ್​ಗಳ ಸುನಾಮಿಗೆ ಗೇಲ್ ದಾಖಲೆ ಧ್ವಂಸ
‘ಸಿಟಿ ಲೈಟ್ಸ್’ ಸಿನಿಮಾ: ದುನಿಯಾ ವಿಜಯ್ ನಿರ್ದೇಶನ ಮಾಡುವ ಸ್ಟೈಲ್ ನೋಡಿ..
‘ಸಿಟಿ ಲೈಟ್ಸ್’ ಸಿನಿಮಾ: ದುನಿಯಾ ವಿಜಯ್ ನಿರ್ದೇಶನ ಮಾಡುವ ಸ್ಟೈಲ್ ನೋಡಿ..
ಸಿದ್ದರಾಮಯ್ಯ ಮನೆ ಮುಂದೆ ಭುಗಿಲೆದ್ದ ಆಕ್ರೋಶ: ಅಭಿಮಾನಿಗಳು ಪೊಲಿಸ್ ವಶಕ್ಕೆ
ಸಿದ್ದರಾಮಯ್ಯ ಮನೆ ಮುಂದೆ ಭುಗಿಲೆದ್ದ ಆಕ್ರೋಶ: ಅಭಿಮಾನಿಗಳು ಪೊಲಿಸ್ ವಶಕ್ಕೆ
ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತಗೊಂಡ ಆನೆ
ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತಗೊಂಡ ಆನೆ
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು