Shocking Video: ನಾಗರ ಪಂಚಮಿಯಂದು ಶೂ ಒಳಗೆ ಬುಸ್ ಬುಸ್ ನಾಗ! ಆತಂಕವೋ ಆತಂಕ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 03, 2022 | 4:14 PM

ವಾಕಿಂಗ್​ಗೆ ಹೋಗಲು ಶೂ ಹಾಕಿಕೊಳ್ಳಲು ಹೋದಾಗ ಶಾಕೊಂದು ಕಾದೀತು. ಹೌದು ಆ ವ್ಯಕ್ತಿಯ ಶೂ ಒಳಗೆ ನಾಗರ ಹಾವೊಂದು ಅಡಗಿ ಕೂತಿತ್ತು. ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಕುಮಾರ್ ಎಂಬುವರ ಮನೆಯ ಶೂನಲ್ಲಿ ನಾಗರಹಾವು ಅಡಗಿ ಕುಳಿತ್ತಿತ್ತು.

Shocking Video: ನಾಗರ ಪಂಚಮಿಯಂದು ಶೂ ಒಳಗೆ ಬುಸ್ ಬುಸ್ ನಾಗ! ಆತಂಕವೋ ಆತಂಕ
cobra
Follow us on

ಶಿವಮೊಗ್ಗ : ನಾಗರ ಪಂಚಮಿಯಂದು ನಾಗ ದೇವರ ಕಲ್ಲಿಗೆ ಹಾಲೆರೆದು ಪೂಜೆ ಮಾಡಿ, ತಮ್ಮ ಸಂಕಷ್ಟಗಳನ್ನು ನಾಗನ ಮುಂದೆ ಹೇಳಿಕೊಂಡು ಕೈ ಮುಗಿದು ಬರುವ ದಿನ ಅದು. ಆದರೆ ಶಿವಮೊಗ್ಗದಲ್ಲಿ ಒಂದು ಘಟನೆ ನಡೆದಿದೆ. ಕೆಲವರಿಗೆ ಬೆಳಗ್ಗೆ ವಾಕಿಂಗ್​ಗೆ ಹೋಗುವ ಅಭ್ಯಾಸ ಇರುತ್ತದೆ, ಹಾಗೆ ಇಲ್ಲೊಬ್ಬರು ವಾಕಿಂಗ್​ಗೆ ಹೋಗಲು ಶೂ ಹಾಕಿಕೊಳ್ಳಲು ಹೋದಾಗ ಶಾಕೊಂದು ಕಾದೀತು. ಹೌದು ಆ ವ್ಯಕ್ತಿಯ ಶೂ ಒಳಗೆ ನಾಗರ ಹಾವೊಂದು ಅಡಗಿ ಕೂತಿತ್ತು. ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಕುಮಾರ್ ಎಂಬುವರ ಮನೆಯ ಶೂನಲ್ಲಿ ನಾಗರ ಹಾವು ಅಡಗಿ ಕುಳಿತ್ತಿತ್ತು.

ಹಾವು ಎಂದಾಗ ಎಲ್ಲರಿಗೂ ಭಯವಾಗುವುದು ಖಂಡಿತ, ಆದರೆ ತನ್ನ ಶೂನಲ್ಲಿ ಹಾವು ಎಂದಾಗ ನಡುಕ ಉಂಟಾಗುವುದು ಖಂಡಿತ, ಹಾವು ಕಂಡ ಕ್ಷಣ ಕುಮಾರ್ ಗಾಬರಿಯಾಗಿದ್ದಾರೆ. ಪ್ರತಿ ಬಾರಿ ಹೂ ಹಾಕುವಾಗ ಶೂವಿನ ಒಳಗಡೆ ಒಮ್ಮೆ ನೋಡಬೇಕು, ಏಕೆಂದರೆ ಈಗ ಮಳೆಗಾಲ, ಹಾವುಗಳು ಬೆಚ್ಚಗಿನ ಪ್ರದೇಶವನ್ನು ಹುಡುಕುವುದು ಸಹಜ ಹಾಗಾಗಿ ಶೂ ಹಾಕುವ ಮುನ್ನ ಒಂದು ಬಾರಿ ಶೂವನ್ನು ನೋಡಿಕೊಂಡು ಹಾಕಿ ಎನ್ನುತ್ತಾರೆ ಉರಗ ತಜ್ಞರ.

ಕುಮಾರ್ ಅವರು ಶಿವಮೊಗ್ಗದ ಸ್ನೇಕ್​ ಕಿರಣ್ ಅವರಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದ್ದಾರೆ, ಕಿರಣ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ನೇಕ್ ಕಿರಣ್ ನಾಗರ ಹಾವನ್ನು ಹಿಡಿದುಕೊಂಡು ಹೋಗಿದ್ದಾರೆ. ಅದನ್ನು ಸುರಕ್ಷತ ಜಾಗಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ. ಜೊತೆಗೆ ಮುಂದೆ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ.
ಈ ಮಳೆಗಾಲದಲ್ಲಿ ಹಾವುಗಳ ಕಾಟ ಹೆಚ್ಚಾಗಿದೆ, ಹಾವಿನಿಂದ ಅನೇಕ ಈ ಮೊದಲು ಅಪಾಯವನ್ನು ಅನುಭವಿಸಿದ್ದಾರೆ ಈ ಬಗ್ಗೆ ಉರಗ ತಜ್ಞರ ಎಚ್ಚರಿಕೆಯನ್ನು ನೀಡಿದ್ದಾರೆ. ಬೆಂಗಳೂರಿನ ಅನೇಕ ಕಡೆ ಶೂ ಒಳಗೆ ಹಾವುಗಳು ಕಂಡು ಬಂದಿದೆ

ಇದನ್ನೂ ಓದಿ
One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್​ ಹೋಗಿ
World Milk Day 2022: ಹಾಲಿನ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಹೇಗೆ ಇಲ್ಲಿದೆ ಓದಿ
World No Tobacco Day 2022: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ; ವಿಶ್ವ ಧೂಮಪಾನ ರಹಿತ ದಿನವನ್ನು ಏಕೆ ಆಚರಿಸುತ್ತಾರೆ ಇಲ್ಲಿದೆ ಓದಿ
Travel: ಬೇಸಿಗೆ ರಜೆಯಲ್ಲಿ ಅಗ್ಗದ ಕುಟುಂಬ ಪ್ರವಾಸ ಮಾಡಲು ಈ ಸ್ಥಳಗಳಿಗೆ ಭೇಟಿ ನೀಡಿ..!

ಬಾಲಕಿಯ ಶೂ ಒಳಗೆ ಹಾವು

ಹಾವು (Snake) ಎಂದರೆ ಒಂದು ಕ್ಷಣ ಎದೆ ಜಲ್ ಅನ್ನುತ್ತೆ. ಕೈ ಕಾಲುಗಳು ನಡುಗುತ್ತವೆ. ಹಾವು ಇದೆ ಅಂತ ಗೊತ್ತಾದರೆ ಸಾಕು ತಿರುಗಿ ನೋಡದೆ ಓಡುತ್ತೇವೆ. ಕಾರಣ ಹಾವಿನ ಬಗ್ಗೆ ಇರುವ ಭಯ. ಸದ್ಯ ಮಳೆ ಸುರಿಯುತ್ತಿದ್ದರಿಂದ ಹಾವುಗಳು ಸಹಜವಾಗಿ ಜನ ವಾಸಿಸುವ ಸ್ಥಳಗಳತ್ತ ಕಾಣಿಸಿಕೊಳ್ಳುತ್ತವೆ. ಮನೆ (Home) ಹೊರಗೆ ಇರುವ ಶೂಗಳಲ್ಲಿ ಹಾವುಗಳು ಬೆಚ್ಚಗೆ ಮಲಗಿರುತ್ತವೆ. ಹೀಗಾಗಿ ಶೂ ಹಾಕುವ ಮೊದಲು ಎಚ್ಚರಿಕೆಯಿಂದಿರಬೇಕು. ಇನ್ನು ಮೈಸೂರಿನ ಹೆಬ್ಬಾಳ್ ಎರಡನೇ ಹಂತದಲ್ಲಿ ಇಂದು (ಜೂನ್ 22) ಬಾಲಕಿ ಶೂ ಒಳಗೆ ಹಾವು ಅಡಗಿ ಕುಳಿತಿತ್ತು. ಶಾಲೆಗೆ ತೆರಳಲು ಶೂ ತೆಗೆದುಕೊಳ್ಳಲು ಹೋದಾಗ ಹಾವು ಕಾಣಿಸಿಕೊಂಡಿದೆ. ನಾಗರಹಾವನ್ನು ಸಂರಕ್ಷಿಸಿ ಸ್ನೇಕ್ ಶ್ಯಾಮ್ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

Published On - 4:13 pm, Wed, 3 August 22