
ವಿದೇಶವನ್ನು (abroad) ತೊರೆದು ಭಾರತದತ್ತ ಮುಖ ಮಾಡುತ್ತಿರುವ ಭಾರತೀಯರು, ಈ ಬಗ್ಗೆ ಅನೇಕ ವಿಡಿಯೋಗಳು ಹಾಗೂ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಕಾಣಬಹುದು. ಇದೀಗ ಇಲ್ಲೊಂದು ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ವಿದೇಶದಲ್ಲಿ ಹೆಚ್ಚು ಸಂಬಳಗಳನ್ನು ತೊರೆದು ಭಾರತಕ್ಕೆ ಬರಲು ಹಲವು ಕಾರಣಗಳು ಇದೆ. ಎಷ್ಟೇ ಸಂಬಳ ಇದ್ದರು, ನೆಮ್ಮದಿ ಇರುವುದಿಲ್ಲ , ತುಂಬಾ ಒತ್ತಡವನ್ನು ಅನುಭವಿಸಿರುತ್ತಾರೆ. ಈ ಕಾರಣಕ್ಕೆ ವಿದೇಶಕ್ಕಿಂತ ಭಾರತದ ಹಳ್ಳಿಗಳಲ್ಲಿ ನೆಮ್ಮದಿ ಇದೆ ಎಂದು ವಿದೇಶವನ್ನು ಬಿಟ್ಟು ಭಾರತಕ್ಕೆ ಬರುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದರಲ್ಲಿ ದಂಪತಿಗಳು ತಮ್ಮ ಮಕ್ಕಳೊಂದಿಗೆ ಸಿಂಗಾಪುರ ತೊರೆದು ಭಾರತಕ್ಕೆ ಬಂದಿರುವ ಬಗ್ಗೆ ಹಂಚಿಕೊಂಡಿದ್ದಾರೆ. ಸಿಂಗಾಪುರ (Singapore) ಬಿಡುವ ಬಗ್ಗೆ ಈ ಹಿಂದೆ ಯೋಚನೆ ಮಾಡಿತ್ತು. ಆದರೆ ಯಾವುದೇ ಪೂರ್ವ ತಯಾರಿಯನ್ನು ಮಾಡಿಕೊಂಡಿಲ್ಲ ಎಂದು ಇಲ್ಲಿ ಹೇಳಿದ್ದಾರೆ.
ಇನ್ನು ಈ ವಿಡಿಯೋದಲ್ಲಿ ತಮ್ಮ ಮಕ್ಕಳ ಬಗ್ಗೆಯೂ ಹಂಚಿಕೊಂಡಿದ್ದಾರೆ. ಮಕ್ಕಳು ಮುಕ್ತವಾಗಿ ಯಾವುದೇ ಭಯವಿಲ್ಲದೆ ಆಟವಾಡುವುದು. ಇನ್ನೊಂದು ಕಡೆ ಸುತ್ತಲೂ ಹಚ್ಚ ಹಸಿರು. ಮತ್ತೊಂದು ಕಡೆ ಕೋಳಿಗಳು ಅಲೆದಾಡುತ್ತಿರುವುದನ್ನು, ಶಾಂತಿಯುತವಾಗಿರುವ ಕೃಷಿ ಪರಿಸರದ ಬಗ್ಗೆ ಹಂಚಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಈ ದಂಪತಿ ನೆಮ್ಮದಿಗಾಗಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದರು. ಸಿಂಗಾಪುರದಲ್ಲಿ ದೊಡ್ಡ ಸಂಬಳವನ್ನು ತೊರೆದು, ಭಾರತಕ್ಕೆ ಬಂದು ಸ್ವಂತವಾಗಿ ಏನಾದರೂ ಮಾಡಬೇಕು ಎಂದು ಯೋಚಿಸಿದರು. ಯಾವುದೇ ಯೋಜನೆ ಇಲ್ಲದೆ, ಅಷ್ಟು ದೊಡ್ಡ ಸಂಬಳವನ್ನು ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಊರಿನಲ್ಲಿರುವ ಮನೆಯವರಿಗೆ, ಹೆತ್ತವರಿಗೆ ಸಮಯವನ್ನು ನೀಡಬೇಕು ಹಾಗೂ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನರ್ಸರಿ ಸ್ಕೂಲ್ ಫೀಸ್ 2.5 ಲಕ್ಷ ರೂ: ಇದು ವಿದ್ಯಾದೇಗುಲವೋ, ವ್ಯಾಪಾರ ಕೇಂದ್ರವೋ?
ಸಿಂಗಾಪುರದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಎಂಜಿನಿಯರ್ ಶರ್ಮಿಳಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೇಗದ ಜೀವನ ಮತ್ತು ದೀರ್ಘ ಕೆಲಸದಿಂದ ಬೇಸತ್ತು, ಭಾರತದಲ್ಲಿ ಪ್ರಕೃತಿಗೆ ಹತ್ತಿರವಾದ ಹಾಗೂ ಅರ್ಥಪೂರ್ಣ ಜೀವನವನ್ನು ನಡೆಸಬೇಕು ಎಂದು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಹಸಿರು ಘಟ್ಟದ ಮಧ್ಯೆ ವಾಸ ಮಾಡಿಕೊಂಡು ದೂರದಿಂದಲೇ ಕೆಲಸ ಮಾಡುತ್ತಾ ಮತ್ತು ದೈನಂದಿನ ಜೀವನದ ಸರಳ ಸಂತೋಷಗಳನ್ನು ಆನಂದಿಸುತ್ತಾ ತಮ್ಮ ದಿನಗಳನ್ನು ಕಳೆಯುತ್ತೇವೆ. ಶರ್ಮಿಳಾ ಅವರು ವರ್ಚುವಲ್ ಸಹಾಯಕರಾಗಿ ಕೆಲಸ ಮಾಡುತ್ತಾರೆ ಹಾಗೂ ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಇತರರಿಗೆ ಮಾರ್ಗದರ್ಶನ ನೀಡುತ್ತಾರೆ. ಈ ಕೆಲಸ ಮಾಡಿಕೊಂಡಿ 20 ಸಾವಿರಕ್ಕೂ ಹೆಚ್ಚು ಗಳಿಸುತ್ತಿದ್ದೇನೆ. ಒಂದು ನಿರ್ಧಾರ ನಮ್ಮ ಜೀವನವನ್ನು ಬದಲಾಯಿಸಿದೆ. 20 ಸಾವಿರದಲ್ಲೂ ಮನೆಯನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಈ ಜೀವನ ಕಳಿಸಿದೆ ಎಂದು ಹೇಳಿದ್ದಾರೆ, ಅನೇಕರು ಈ ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ