
ಯಕ್ಷಗಾನವನ್ನು (Yakshagana) ನೋಡುವುದೇ ಚಂದ. ಹೀಗಾಗಿ ಈ ಕಲೆಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಹೌದು, ಪೌರಾಣಿಕ ಪ್ರಸಂಗದ ಜತೆಗೆ ಪ್ರಸಕ್ತ ವಿದ್ಯಮಾನಗಳ ಕುರಿತ ಹಾಸ್ಯಮಯ ಸಂಭಾಷಣೆಗಳ ಕುರಿತಾದ ವಿಡಿಯೋ ವೈರಲ್ ಆಗುವುದನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ಸ್ಪೆಷಲ್ ಗೆಸ್ಟ್‌ನ ಆಗಮನದಿಂದಲೇ ಈ ದೃಶ್ಯ ಹರಿದಾಡುತ್ತಿದೆ. ಈ ಪ್ರಾಣಿಗಳಿಗೂ ಯಕ್ಷಗಾನವೆಂದರೆ ಎಷ್ಟು ಪ್ರೀತಿಯಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು, ಕಮಲಶಿಲೆ ಮೇಳದವರ ಸೇವೆಯಾಟದ ಸಂದರ್ಭದಲ್ಲಿ ಆಟ ಆಸ್ವಾದಿಸಲು ಜಿಂಕೆಯೊಂದು ಚೌಕಿಗೆ ಆಗಮಿಸಿದೆ. ಯಕ್ಷಗಾನ ನೋಡಲು ಬಂದ ವಿಶೇಷ ಅತಿಥಿಯಾದ ಜಿಂಕೆಯ (deer) ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಈ ದೃಶ್ಯ ನೋಡಿ ಖುಷಿ ಪಟ್ಟಿದ್ದಾರೆ.
jpbadakere ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಯಕ್ಷಗಾನವೆಂದರೆ ಈ ಪ್ರಾಣಿಗಳಿಗೂ ಪ್ರೀತಿ! ಹೌದು ನಿನ್ನೆ ರಾತ್ರಿ ಕಮಲಶಿಲೆ ಮೇಳದವರ ಸೇವೆಯಾಟದ ಸಂದರ್ಭದಲ್ಲಿ ಚೌಕಿಗೆ ಬಂದ ಈ ಜಿಂಕೆ ಆದಿಪೂಜಿತ ಗಣಪತಿಗೆ ಮೊದಲೊಂದಿಸಿ. ನಂತರ ಆಟ ಆಸ್ವಾದಿಸಲು ರಂಗಸ್ಥಳದೆಡೆಗೆ ಧಾವಿಸಿದಂತಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಜಿಂಕೆಯೊಂದು ಚೌಕಿಗೆ ಬಂದು ಆ ಬಳಿಕ ಯಕ್ಷಗಾನ ನೋಡಲು ರಂಗಸ್ಥಳದೆಡೆಗೆ ಹೋಗುತ್ತಿರುವ ದೃಶ್ಯವನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ:ದೈಹಿಕ ಅಂಗವೈಕಲ್ಯತೆಯನ್ನು ಮೀರಿ ಪ್ರತಿಭೆ ಪ್ರದರ್ಶಿಸಿದ ಕಲಾವಿದರು
ಈ ವಿಡಿಯೋ ಮೂವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಬೇಕು ಅಂತ ಬಂದದ್ದಲ್ಲ, ದಾರಿ ತಪ್ಪಿ ಬಂದದ್ದು ಎಂದು ಹೇಳಿದ್ದಾರೆ. ಇನ್ನೊಬ್ಬರು, ವಾವ್ಹ್ ಯಕ್ಷಗಾನ ನೋಡಲು ಬಂದೇ ಬಿಟ್ರು ಸ್ಪೆಷಲ್ ಗೆಸ್ಟ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:19 pm, Fri, 21 November 25