Video: ಮುದ್ದಾಗಿ ಸೊಳ್ಳೆ ಹಾಡು ಹಾಡುತ್ತಾ ಕೀಟವನ್ನು ಹೊಡೆದು ಸಾಯಿಸಿದ ಪುಟಾಣಿ
ಪುಟಾಣಿಗಳು ಏನು ಮಾಡಿದ್ರು ಚಂದನೇ. ಈ ಮುದ್ದು ಮಕ್ಕಳ ಆಟ ತುಂಟಾಟ ಹಾಗೂ ಮುಗ್ಧತೆ ಕೆಲಸವನ್ನು ಕಂಡಾಗ ಅಪ್ಪಿ ಮುದ್ದಾಡಬೇಕು ಎಂದೆನಿಸುವುದು ಸಹಜ. ಆದರೆ ಇಲ್ಲೊಂದು ಪುಟಾಣಿ ಸೊಳ್ಳೆ ಹೊಡೆಯುತ್ತಾ ಸಖತ್ ಎಂಜಾಯ್ ಮಾಡ್ತಿದೆ. ಈ ಮುದ್ದಾದ ವಿಡಿಯೋ ನೆಟ್ಟಿಗರ ಹೃದಯಕ್ಕೆ ಹತ್ತಿರವಾಗಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಪುಟಾಣಿಗಳ (Kids) ಪ್ರಪಂಚವೇ ಹಾಗೆ, ಸ್ವಾರ್ಥದ ಬಗ್ಗೆ ತಿಳಿದೇ ಇಲ್ಲ. ತಮಗೆ ತೋಚಿದ್ದಂತೆ ಮಾಡುವ ಕೆಲಸಗಳು ದೊಡ್ಡವರ ಮೊಗದಲ್ಲಿ ನಗು ಮೂಡುವಂತೆ ಮಾಡುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಈ ಪುಟ್ಟ ಮಕ್ಕಳ ಮುಗ್ಧತೆಯ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹದ್ದೇ ದೃಶ್ಯವೊಂದು ವೈರಲ್ ಆಗಿದೆ. ಈ ಪುಟಾಣಿಯೊಂದು ಸೊಳ್ಳೆ ಸೊಳ್ಳೆ ಎಂದು ಹಾಡು ಹಾಡುತ್ತಾ ಸೊಳ್ಳೆಯನ್ನು (mosquito) ಹೊಡೆದು ಸಾಯಿಸುತ್ತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಬಿದ್ದು ಬಿದ್ದು ನಕ್ಕಿದ್ದಾರೆ.
ಈ ಪುಟಾಣಿ ಸೊಳ್ಳೆ ಸಾಯಿಸುವ ರೀತಿ ನೋಡಿ
Pinu ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ಕಿರಿದಾದ ಸೋಜಿಗಕ್ಕೆ ದೊಡ್ಡ ಸಾಹಸ, ಹಾಡು ಹಾಡುತ್ತಾ ಈಚೆಯನ್ನು ಹೊಡೆದು ಹಾಕಿದ ನನ್ನ ಚಿನ್ನಾರಿ, ಮಜಾ ಡಬಲ್ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೊಂದು ಸೊಳ್ಳೆಯನ್ನು ಹೊಡೆದು ಸಾಯಿಸಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ, ಸೊಳ್ಳೆ ಸೊಳ್ಳೆ ಸೊಳ್ಳೆ, ನನ್ನ ಮುದ್ದು ಸೊಳ್ಳೆ ಎಂದು ರಾಗಬದ್ಧವಾಗಿ ಹಾಡು ಹಾಡುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಅಂಗಡಿಗೆ ನುಗ್ಗಿದ ಕಳ್ಳನ ಮನಸ್ಸನ್ನು ಗೆದ್ದು ತಂದೆಯನ್ನು ಕಾಪಾಡಿದ ಪುಟಾಣಿ
ಪುಟಾಣಿಯ ಮುದ್ದಾದ ವಿಡಿಯೋ ಇದುವರೆಗೂ ನಾಲ್ಕೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಸೊಳ್ಳೆ ಹಾಡು ಹಾಡೋದು ಒಂದು ಕಲೆ, ಸೊಳ್ಳೆ ಸೊಳ್ಳೆ ನನ್ನ ಮುದ್ದು ಸೊಳ್ಳೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಪಾಪ ಸೊಳ್ಳೆ, ಅದರ ಗರ್ಲ್ ಫ್ರೆಂಡ್ ಮನೆಯಲ್ಲಿ ಕಾಯ್ತಾ ಇರ್ತದೆ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ ಕಾಮೆಂಟ್ ನಲ್ಲಿ ಏನು ಬರೀಬೇಕು ಅಂತಾನೆ ಗೊತ್ತಾಗ್ತಾ ಇಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




