Video: ನೋಡೋರಿಗೆ ಮನೋರಂಜನೆ; ಇದು ಸೈಕಲ್ ಸರ್ಕಸ್ ನಂಬಿಕೊಂಡ ಕುಟುಂಬದ ಹೋರಾಟದ ಬದುಕು

ಹೊಟ್ಟೆ ತುಂಬಿಸಿಕೊಳ್ಳಲು ದಿನವಿಡೀ ಮೈಮುರಿದು ದುಡಿಯಬೇಕು. ಮುರೊತ್ತಿನ ಊಟಕ್ಕೆ ಒಬ್ಬರದ್ದು ಒಂದೊಂದು ರೀತಿಯ ದುಡಿತ. ಈ ವಿಡಿಯೋ ನೋಡಿದರೆ ಬದುಕಿನ ಇನ್ನೊಂದು ಮುಖ ತಿಳಿಯುತ್ತದೆ. ಇದು ಸೈಕಲ್ ಸರ್ಕಸ್‌ ನಂಬಿಕೊಂಡಿರುವ ಕುಟುಂಬದ ಚಿತ್ರಣ. ಸೈಕಲ್‌ನಲ್ಲಿ ಕುಳಿತು ಸಾಹಸ ಮಾಡುತ್ತಿರುವ ವ್ಯಕ್ತಿಗೆ ಮಕ್ಕಳು ಸಾಥ್ ನೀಡುತ್ತಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.

Video: ನೋಡೋರಿಗೆ ಮನೋರಂಜನೆ; ಇದು ಸೈಕಲ್ ಸರ್ಕಸ್ ನಂಬಿಕೊಂಡ ಕುಟುಂಬದ ಹೋರಾಟದ ಬದುಕು
ವೈರಲ್‌ ವಿಡಿಯೋ
Image Credit source: Instagram

Updated on: Nov 07, 2025 | 3:12 PM

ಬದುಕು (life) ಎಲ್ಲರದ್ದು ಒಂದೇ ರೀತಿ ಇರಲ್ಲ, ಮೈ ದಂಡಿಸಿ ದುಡಿದರೆ ಮಾತ್ರ ಹೊಟ್ಟೆ ಗಟ್ಟಿಯಾಗುವುದು. ಇದಕ್ಕೆ ಉದಾಹರಣೆಯಂತಿದೆ ಈ ಸೈಕಲ್ ಸರ್ಕಸ್ (cycle circus) ನಂಬಿ ಬದುಕುತ್ತಿರುವ ಈ ಕುಟುಂಬ. ನೋಡುವವರಿಗೆ ಇದೊಂದು ಮನೋರಂಜನೆ. ಇದನ್ನೇ ನಂಬಿದವರಿಗೆ ಇದೇ ಅನ್ನ ನೀಡುವ ದುಡಿತ. ವ್ಯಕ್ತಿಯೊಬ್ಬರು ಸೈಕಲ್ ಓಡಿಸುತ್ತಾ ಸಾಹಸಗಳನ್ನು ಮಾಡುತ್ತಿದ್ದಾರೆ. ಇತ್ತ ತಮ್ಮ ಬಾಲ್ಯವನ್ನು ಆನಂದಿಸಬೇಕಾದ ನಾಲ್ವರು ಮಕ್ಕಳು ವ್ಯಕ್ತಿಗೆ ಸಾಥ್ ನೀಡುತ್ತಾ ಅದರಲ್ಲೇ ಖುಷಿ ಕಾಣುತ್ತಿದ್ದಾರೆ. ಈ ದೃಶ್ಯವು ವೀಕ್ಷಕರಿಗೆ ಮನೋರಂಜನೆಯ ರಸದೌತಣ. ಹೃದಯಕ್ಕೆ ಹತ್ತಿರವಾಗಿರುವ ಈ ವಿಡಿಯೋ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.

ಮಹೇಶ್ ಗೌಡ (Mahesh Gowda) ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವು ಸೈಕಲ್ ಸರ್ಕಸ್ ನಲ್ಲಿ ನಂಬಿ ಬದುಕುತ್ತಿರುವ ಕುಟುಂಬದ ಚಿತ್ರಣ. ವ್ಯಕ್ತಿಯೊಬ್ಬರು ಸೈಕಲ್ ಓಡಿಸುತ್ತಾ ನಾಲ್ವರು ಮಕ್ಕಳು ವೃತ್ತಾಕಾರವಾಗಿ ಮಲಗಿರುವಲ್ಲಿಗೆ ಬರುವುದನ್ನು ನೋಡಬಹುದು. ಆ ಬಳಿಕ ತನ್ನ ಸೈಕಲ್‌ನ ಮುಂಭಾಗದ ಚಕ್ರವನ್ನು ಮಕ್ಕಳ ಸಮೀಪ ವೃತ್ತಾಕಾರವಾಗಿ ತಿರುಗಿಸುತ್ತಿದ್ದಾರೆ. ಕಾಲಿನಲ್ಲಿ ಸೈಕಲ್ ಬ್ಯಾಲೆನ್ಸ್ ಮಾಡುತ್ತಾ ತನ್ನ ಎರಡು ಕೈಗಳನ್ನು ಮೇಲಕ್ಕೆತ್ತಿ ನೋಡುಗರಿಗೆ ಮನೋರಂಜನೆ ನೀಡುತ್ತಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಲಂಡನ್‌ನಲ್ಲಿ ಬಿಹಾರಿ ವ್ಯಕ್ತಿಯ ಕೈ ಹಿಡಿದ ಸಮೋಸಾ ವ್ಯಾಪಾರ, ದಿನದ ಗಳಿಕೆ ಕೇಳಿದ್ರೆ ನೀವು ಶಾಕ್ ಆಗ್ತೀರಾ

ಈ ವಿಡಿಯೋ 7.5 ಮಿಲಿಯನ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಅಳಿವಿನ ಅಂಚಿನಲ್ಲಿರುವ ಈ ಕಲೆಗೆ ಪ್ರೋತ್ಸಾಹದ ಅವಶ್ಯಕತೆ ಇದೆ ಎಂದಿದ್ದಾರೆ. ಇನ್ನೊಬ್ಬರು ತುಂಬಾ ಹಳೆಯ ನೆನಪು. ಅಂದಿನ ಖುಷಿ ಇವತ್ತು ಹುಡುಕಿದ್ರೂ ಸಿಗದು. ಮತ್ತೆ ಇಂತಹ ಕಲೆಗೆ ಪುನರ್ ಚೇತನ ಸಿಗಬೇಕಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಇದು ಕಣಯ್ಯ ನಿಜವಾದ ಕಲೆ ಅಂದ್ರೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ