ಸಾಮಾಜಿಕ ಜಾಲತಾಣದಲ್ಲಿ ಒಮ್ಮೊಮ್ಮೆ ಬಹಳ ಅಪರೂಪದ ಸಂಗತಿಗಳು, ನೋಡುಗರ ಗಮನ ಸೆಳೆಯುತ್ತವೆ. ಯಾವ ಸಮಯದಲ್ಲಿ ಯಾವ ವಿಡಿಯೊ ವೈರಲ್ ಆಗುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಪ್ರಸ್ತುತ ಶ್ವಾನವೊಂದು ಎಲ್ಲರನ್ನೂ ಬೇಸ್ತು ಬೀಳಿಸಿದ ವಿಡಿಯೊ ಎಲ್ಲರ ಗಮನ ಸೆಳೆದಿದೆ. ಅಷ್ಟಕ್ಕೂ ಅದು ಏನು ಮಾಡಿತು ಅಂತೀರಾ? ಇಲ್ಲಿದೆ ಓದಿ.
ಈ ನಾಯಿಗೆ ಜನರನ್ನು ಆಕರ್ಷಿಸುವ ಕಲೆ ಕರಗತವಾಗಿದೆ. ತನ್ನ ಜಾಣತನದಿಂದ ಎಲ್ಲರ ಗಮನ ಸೆಳೆದ ಈ ನಾಯಿಯ ಚೇಷ್ಟೆ ನೋಡಿದ ವೀಕ್ಷಕರು, ಅಬ್ಬಾ ನಾಯಿಯೇ! ಎಂದು ಉದ್ಗರಿಸಿದ್ದು ಸುಳ್ಳಲ್ಲ. ಕಾರಣ, ಈ ಶ್ವಾನ ಮೊದಲಿಗೆ, ತನ್ನ ನಾಲ್ಕು ಕಾಲುಗಳೊಂದಿಗೆ ನೆಲದಲ್ಲಿ ತೆವಳುವ ಮಾದರಿಯಲ್ಲಿ ಸಾಗುತ್ತಿರುತ್ತದೆ. ಮೊದಲಿಗೆ ನೋಡುವಾಗ, ನಾಯಿಗೆ ಏನೋ ಖಾಯಿಲೆಯಾಗಿ ಕಷ್ಟ ಪಡುತ್ತಿರುವಂತೆ ಕಾಣಿಸುತ್ತದೆ. ಆದರೆ ಸ್ವಲ್ಪ ಸಮಯದ ನಂತರವೇ ಎಲ್ಲರಿಗೂ ನಿಜದ ಅರಿವಾಗುವುದು!
ವಿಡಿಯೊದಲ್ಲಿ ಮೊದಲಿಗೆ ತೆವಳುತ್ತಿರುವ ನಾಯಿ ಇದ್ದಕ್ಕಿದ್ದಂತೆ, ಮಾಮೂಲಿಯಾಗಿ ಎದ್ದು ನಿಲ್ಲುತ್ತದೆ.. ತನಗೇನೂ ಆಗಿಲ್ಲವಂತೆ ನಡೆದು ನೋಡುಗರನ್ನು ಚಕಿತರನ್ನಾಗಿಸುತ್ತದೆ. ಎಲ್ಲರನ್ನೂ ಮಂಗ ಮಾಡುವ ಈ ಕಲೆ ಈ ನಾಯಿಗೆ ಬಹಳ ಕರಗತವಾದಂತಿದೆ. ವೈರಲ್ ಆಗಿರುವ ಈ ವಿಡಿಯೊವನ್ನು ನೋಡಿದ ನೆಟ್ಟಿಗರು, ನಾಯಿಯ ತುಂಟಾಟಕ್ಕೆ ಮೆಚ್ಚಿಕೊಂಡಿದ್ದು ಥರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ACTOR? pic.twitter.com/aZu6u146lN
— ViralPosts (@ViralPosts5) September 23, 2021
ನಾಯಿಯ ಈ ವಿಡಿಯೊಗೆ ಬಂದಿರುವ ಕಾಮೆಂಟ್ಗಳಲ್ಲಿ ಒಬ್ಬರು, ‘ಆ ಶ್ವಾನ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಬೇಕು’ ಎಂದಿದ್ದಾರೆ. ಇನ್ನೊಬ್ಬರು ವಿಡಿಯೊದಲ್ಲಿ ಕಾಣುವ ನಾಯಿ ತುಂಬಾ ಬುದ್ಧಿವಂತ ಎಂದು ಬರೆದಿದ್ದಾರೆ. ‘ಇಂತಹ ಸಾಕುಪ್ರಾಣಿಯು ಎಲ್ಲರ ಮನೆಯಲ್ಲಿ ಇರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಓರ್ವ ಬಳಕೆದಾರರಂತೂ ಇನ್ನೂ ಮುಂದಕ್ಕೆ ಹೋಗಿ, ‘ಈ ‘ಕೋಳಿಗೆ’ ಆಸ್ಕರ್ ಸಿಗಬೇಕು’ ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ನೆಟ್ಟಿಗರ ಮುಖದಲ್ಲಿ ನಗು ಮೂಡಿಸಲು ಈ ಶ್ವಾನ ಕಾರಣವಾಗಿರುವುದಂತೂ ಹೌದು.
ಇದನ್ನೂ ಓದಿ:
Viral Video: ಶಾಪಿಂಗ್ಗೆಂದು 10 ನಿಮಿಷ ಜೀಪ್ ನಿಲ್ಲಿಸಿ ಹೋದ ವ್ಯಕ್ತಿ; ಮರಳಿದಾಗ ಎದುರುಗೊಂಡಿದ್ದು ಜೇನುನೊಣಗಳು!
ಸೈಬೀರಿಯಾ ಕಾಡಿನಲ್ಲಿ ರಷ್ಯಾ ಅಧ್ಯಕ್ಷ; ಮೀನು ಹಿಡಿದು, ಗುಡ್ಡ ಹತ್ತಿದ ವ್ಲಾದಿಮಿರ್ ಪುತಿನ್
Uttar Pradesh: ಬಿಜೆಪಿ ಸಂಸದನಿಗೆ ಥಳಿಸಿದ ಸಾರ್ವಜನಿಕರು; ತಪ್ಪಿಸಿಕೊಂಡರೂ ಅಟ್ಟಿಸಿ ಹೋಗಿ ಹಲ್ಲೆ
(a dog act like it does not able to walk but then there is shocking for viewer watch the video)