Viral: ತಲೆಯ ಮೇಲೆ ಕೂರಿಸಿಕೊಳ್ಳೋದು ಎಂದರೆ ಇದೇ!?

|

Updated on: Jul 25, 2023 | 11:49 AM

Dog lover : ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ​ವೈರಲ್ ಆಗುತ್ತಿದೆ. ಯಾವ ಊರಿನಲ್ಲಿ ಇದನ್ನು ಚಿತ್ರೀಕರಿಸಲಾಗಿದ್ದು ಎಂಬ ಮಾಹಿತಿ ಇಲ್ಲ. ಆದರೆ ನೆಟ್ಟಿಗರು ಪರವಿರೋಧ ಚರ್ಚೆ ನಡೆಸಿದ್ದಾರೆ.

Viral: ತಲೆಯ ಮೇಲೆ ಕೂರಿಸಿಕೊಳ್ಳೋದು ಎಂದರೆ ಇದೇ!?
ಹೇಗಿದೆ ಈ ಪ್ರದರ್ಶನ
Follow us on

Dog : ಅವರನ್ನು ಇವರು ತಲೆಮೇಲೆ ಕೂರಿಸಿಕೊಂಡಿದ್ದಾರೆ. ಇವರು ಅವರ ತಲೆ ಮೇಲೆ ಏರಿ ಕುಳಿತಿದ್ದಾರೆ ಎನ್ನುವುದನ್ನು ಆಗಾಗ ಮಾತಿನಲ್ಲಿ ಪ್ರಯೋಗಿಸುವುದನ್ನು ಕೇಳಿದ್ದಿರಿ. ಆದರೆ ಯಾವತ್ತಾದರೂ ಯಾರಾದರೂ ಇದನ್ನು ದೃಶ್ಯಾತ್ಮಕದಲ್ಲಿ ಹೇಳಿದ್ದಿದೆಯೇ? ಹಾಗಿದ್ದರೆ ನೋಡಿ, ಆ ಮಾತುಗಳಿಗೆ ಸಾದೃಶ್ಯವೆಂಬಂತೆ ಈ ವಿಡಿಯೋ ಸಿಕ್ಕಿದೆ. ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿರುವ ಈ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. ನೋಡಲೇನೋ ಮಜಾ ಬರುವಂತಿದೆ. ಆದರೆ ಈ ಮನುಷ್ಯ ಈ ನಾಯಿಗೆ ಅದೆಷ್ಟು ಕಾಲ ತರಬೇತಿ ಕೊಟ್ಟಿರಬಹುದು?

ಹೆಚ್ಚಿನ ಪಾಲು ನೆಟ್ಟಿಗರು ಈ ವಿಡಿಯೋ ನೋಡಿ ಬೇಸರಿಸಿಕೊಂಡಿದ್ದಾರೆ. ನಾಯಿ ಆತಂಕದಿಂದ ಅವನ ಮೇಲೆ ಕುಳಿತಿದೆ, ಅವನೇನೋ ನಿರಾಯಾಸವಾಗಿ ನಡೆದು ಹೋಗುತ್ತಿದ್ದಾನೆ. ಆದರೆ ಹೀಗೆ ಮಾಡುವುದರಿಂದ ಸಾಧಿಸುವುದಾದರೂ ಏನು? ಎಂದು ಕೇಳಿದ್ದಾರೆ. ನಿಮ್ಮ ನಾಯಿಯನ್ನು ಎಷ್ಟು ಪ್ರೀತಿಸುತ್ತೀರಿ ಎನ್ನುವುದನ್ನು ತೋರಿಸಲು ಈ ಸರ್ಕಸ್ ಮಾಡಬಾರದಾಗಿತ್ತು ಎಂದೂ ಹೇಳಿದ್ದಾರೆ.

ಇದನ್ನೂ ಓದಿ : Viral: ಬೆಂಗಳೂರು; 500 ಮೀ ಆಟೋ ಪ್ರಯಾಣಕ್ಕೆ ರೂ 100 ಪಾವತಿಸಿದ ಮುಂಬೈ ಸಿಇಒ

ಈ ವಿಡಿಯೋ ಎಲ್ಲಿ ಚಿತ್ರೀಕರಿಸಿದ್ದು ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಸುಮಾರು 10 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಅನೇಕರು, ಈ ವಿಡಿಯೋದಡಿ ಪರಸ್ಪರ ತಮಾಷೆ ಮಾಡಿಕೊಂಡಿದ್ದಾರೆ. ನೀವು ನಿಮ್ಮ ನಾಯಿಯನ್ನು ಹೀಗೆ ಕೂರಿಸಿಕೊಂಡು ನಡೆಯಬಹುದೆ, ನೀವು ಹೀಗೇನಾದರೂ ನಡೆದರೆ ನಿಮ್ಮ ಸ್ಯಾಲರಿಯಲ್ಲಿ ಹೈಕ್​ ಕೊಡಿಸಲಾಗುವುದು ಎಂದು ಒಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಉಚಿತ ಐಸ್ಕ್ರೀಮ್​​ಗಾಗಿ ಬೆಂಗಳೂರಿಗರು ಹೇಗೆ ನೃತ್ಯ ಮಾಡಿದ್ದಾರೆ ನೋಡಿ

ರೀಲಿಗಾಗಿ ಮಾಡುವ ಇಂಥ ತಮಾಷೆಗಳಿಂದ ಪ್ರಾಣಿಗಳಿಗೆ ಎಷ್ಟು ನೋವಾಗುತ್ತದೆಯೋ, ಇಂಥವರೆಲ್ಲರನ್ನೂ ಬಂಧಿಸಬೇಕು ಎಂದಿದ್ದಾರೆ ಮತ್ತೊಬ್ಬರು. ನಿಜಕ್ಕೂ ಹೀಗೆ ರೀಲ್ ಮಾಡಿ ಹಾಕುವುದರಿಂದ ಇವರಿಗೆ ಹಣ ಬರುತ್ತದೆಯೇ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:47 am, Tue, 25 July 23