ಈ ಆಧುನಿಕ ಯುಗದಲ್ಲಿ ಮನುಷ್ಯತ್ವಕ್ಕೆ, ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಆದರೆ ಮನುಷ್ಯನಿಗೆ ಇಲ್ಲದ ಮಾನವೀಯತೆ, ಸ್ನೇಹ ಮನೋಭಾವವನ್ನು ಪ್ರಾಣಿಗಳಲ್ಲಿ ಕಾಣಬಹುದು. ಅದರಲ್ಲೂ ಶ್ವಾನಗಳಿಗೆ ತುಸು ಹೆಚ್ಚೇ ನಿಯತ್ತು ಇದೆ. ಹೌದು ಅವುಗಳಿಗೆ ಒಂದು ತುತ್ತು ಅನ್ನ ನೀಡಿದರೆ ಸಾಕು ಅದರ ಕೊನೆಯುಸಿರು ಇರುವವವರೆಗೂ ಅನ್ನ ಹಾಕಿದವರಿಗೆ ನಿಯತ್ತಿನಿಂದ ಇರುತ್ತದೆ. ಜೊತೆಗೆ ಅನ್ನ ಹಾಕಿದವರೊಂದಿಗೆ ಸ್ನೇಹಪೂರ್ವಕವಾಗಿಗೂ ಇರುತ್ತವೆ. ಅಂತಹದ್ದೇ ಸುಂದರ ಸ್ನೇಹ ಬಾಂಧವ್ಯದ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಲೋಕೋ ಪೈಲಟ್ ಮತ್ತು ಬೀದಿ ನಾಯಿಯ ಸುಂದರ ಸ್ನೇಹವನ್ನು ಕಂಡು ನೋಡುಗರು ಭಾವುಕರಾಗಿದ್ದಾರೆ.
ಈ ಹೃದಯಸ್ಪರ್ಶಿ ವಿಡಿಯೋವನ್ನು @1hakankapucu ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ರೈಲು ಚಾಲಕ ನೀಡುವ ಆಹಾರಕ್ಕಾಗಿ ಪ್ರತಿನಿತ್ಯ ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತಿರುವ ಶ್ವಾನ. ಸ್ನೇಹಿತನ ರೈಲು ಬರುವಾಗ ಶ್ವಾನದ ಸಂತೋಷವನ್ನು ನೋಡುವುದೇ ನಮಗೊಂದು ಭಾಗ್ಯ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
A train driver gave food to this dog at the station. The dog remembered the train, & the engineer brought food regularly. It’s worth seeing his joy. Someone cannot make every being happy, but kindness always makes a being happy. pic.twitter.com/7Y8n50IdKh
— Hakan Kapucu (@1hakankapucu) April 30, 2024
ವೈರಲ್ ವಿಡಿಯೋದಲ್ಲಿ ಯಾವುದೋ ಒಂದು ರೈಲ್ವೆ ನಿಲ್ದಾಣದಲ್ಲಿ ಬೀದಿ ನಾಯಿಯೊಂದು ತನಗೆ ಪ್ರತಿನಿತ್ಯ ಊಟ ಹಾಕುವಂತಹ ಲೋಕೋ ಪೈಲಟ್ ಗಾಗಿ ಕಾದು ಕುಳಿತಿರುವ ದೃಶ್ಯವನ್ನು ಕಾಣಬಹುದು. ರೈಲು ಬರುತ್ತಿದ್ದಂತೆಯೇ ಅರೇ ನನ್ನ ಸ್ನೇಹಿತ ನನಗಾಗಿ ಊಟವನ್ನು ತಂದ ಎಂದು ಶ್ವಾನವು ಖುಷಿಯಿಂದ ರೈಲಿನ ಜೊತೆ ಜೊತೆಗೆ ಓಡಿಕೊಂಡು ಹೋಗುತ್ತದೆ. ನಂತರ ರೈಲು ನಿಲ್ಲಿಸಿ ಆ ಲೋಕೋ ಪೈಲಟ್ ಶ್ವಾನಕ್ಕೆ ತಾನು ತಂದಿರುವ ಊಟವನ್ನು ಹಾಕ್ತಾನೆ. ಆ ಸಂದರ್ಭದಲ್ಲಿ ಶ್ವಾನ ತನ್ನ ಮನುಷ್ಯ ಸ್ನೇಹಿತನನ್ನು ಕಂಡು ಖುಷಿಯಿಂದ ಕುಣಿದಾಡಿದೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಗುಡಿಸುವ ಶೈಲಿ ನೋಡಿ ಹೌಸ್ ಕೀಪರ್ ಪ್ರೀತಿಗೆ ಬಿದ್ದು ಮದುವೆಯಾದ ಲೇಡಿ ಡಾಕ್ಟರ್
ಮೇ 01 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಲೋಕೋ ಪೈಲಟ್ ಮತ್ತು ಬೀದಿ ನಾಯಿಯ ನಿಸ್ವಾರ್ಥ ಸ್ನೇಹವನ್ನು ಕಂಡು ಭಾವುಕರಾಗಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ