Video: ಮಗಳ ತೊಡೆ ಮೇಲೆ ತಲೆಯಿಟ್ಟು ಹಾಯಾಗಿ ಮಲಗಿದ ತಂದೆ; ಎಷ್ಟು ಚಂದ ನೋಡಿ ಈ ಬಾಂಧವ್ಯ

ತಂದೆ ಮಗಳ ಸಂಬಂಧವೇ ಹಾಗೆ, ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಪ್ಪನಿಗೆ ಮಗಳು ಪ್ರಪಂಚವಾದರೆ, ಮಗಳಿಗೆ ಅಪ್ಪನೇ ಫಸ್ಟ್ ಹೀರೋ. ಇದೀಗ ಇಂತಹ ಸುಂದರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮಗಳ ತೊಡೆ ಮೇಲೆ ಮಲಗಿರುವ ತಂದೆಯ ವಿಡಿಯೋ ವೈರಲ್ ಆಗಿದ್ದು, ತಂದೆ ಮಗಳ ಪ್ರೀತಿಗೆ ನೆಟ್ಟಿಗರು ಕರಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮಗಳ ತೊಡೆ ಮೇಲೆ ತಲೆಯಿಟ್ಟು ಹಾಯಾಗಿ ಮಲಗಿದ ತಂದೆ; ಎಷ್ಟು ಚಂದ ನೋಡಿ ಈ ಬಾಂಧವ್ಯ
ವೈರಲ್ ವಿಡಿಯೋ
Image Credit source: Instagram

Updated on: Apr 09, 2026 | 11:04 AM

ಹೆಣ್ಣು ಮಕ್ಕಳಿಗೆ ತಂದೆಯೆಂದರೆ (father) ಪ್ರಪಂಚ. ಅದೇ ರೀತಿ ತಂದೆಗೂ ತಮ್ಮ ಮುದ್ದು ಮಗಳೆಂದರೆ ಅದೇನೋ ವಿಶೇಷ ಪ್ರೀತಿ ಹಾಗೂ ಕಾಳಜಿ. ತಂದೆ ಮಗಳ ಬಾಂಧವ್ಯ ಸಾರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಲ್ಲೊಬ್ಬಳು ಮಗಳು ತನ್ನ ತಂದೆಗೆ ಎರಡನೇ ತಾಯಿಯಾಗಿದ್ದಾಳೆ. ತನ್ನ ತಂದೆಯನ್ನು ತೊಡೆ ಮೇಲೆ ಮಲಗಿಸಿಕೊಂಡಿದ್ದು, ತಂದೆ ತಲೆಯಿಟ್ಟು ನಿದ್ರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

theiconictrolls ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಂದೆ ಮಗಳ ಬಾಂಧವ್ಯ ಸಾರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಪುಟಾಣಿಯೊಂದು ಬೆಂಚಿನ ಮೇಲೆ ಕುಳಿತುಕೊಂಡಿದೆ. ಈ ಪುಟಾಣಿಯ ತೊಡೆ ಮೇಲೆ ತಂದೆಯೂ ತಲೆಯಿಟ್ಟು ಹಾಯಾಗಿ ನಿದ್ರಿಸುತ್ತಿರುವುದನ್ನು ಕಾಣಬಹುದು. ಪುಟಾಣಿ ಅಪ್ಪನ ಕೂದಲಿನ ಮೇಲೆ ಕೈಯಾಡಿಸುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

ಈ ವಿಡಿಯೋ ಇಪ್ಪತ್ತಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದಕ್ಕಿಂತ ದೊಡ್ಡ ಉಡುಗೊರೆ ಏನಿದೆ ಎಂದಿದ್ದಾರೆ. ಇನ್ನೊಬ್ಬರು, ಇದೇ ಕಾರಣಕ್ಕೆ ಪ್ರತಿಯೊಬ್ಬ ಪುರುಷನು ಮಗಳನ್ನು ಬಯಸೋದು ಎಂದು ಹೇಳಿದ್ದಾರೆ. ಮತ್ತೊಬ್ಬರು, ನನ್ನ ಮಗಳು ನನ್ನ ತಾಯಿಯಂತೆ ವರ್ತಿಸುತ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us