Video: ನೀವು ನನ್ನ ಜತೆ ರೈಡ್ ಬರ್ತೀರಾ; ಆಟೋ ಓಡಿಸಿ ಖುಷಿ ಪಟ್ಟ ವಿದೇಶಿಗ

ಭಾರತಕ್ಕೆ ಬರುವ ವಿದೇಶಿಗರು ಇಲ್ಲಿನ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡುತ್ತಾರೆ. ಆದರೆ ಇದೀಗ ಭಾರತಕ್ಕೆ ಭೇಟಿ ನೀಡಿದ ವಿದೇಶಿಗನೊಬ್ಬ ಆಟೋ ಓಡಿಸಿ ಖುಷಿ ಪಟ್ಟಿದ್ದಾನೆ. ಆತನ ಮುಖದಲ್ಲಿನ ನೈಜ ನಗು ಆತನಿಗಾದ ಖುಷಿಯನ್ನು ಹೇಳುತ್ತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ನೀವು ನನ್ನ ಜತೆ ರೈಡ್ ಬರ್ತೀರಾ; ಆಟೋ ಓಡಿಸಿ ಖುಷಿ ಪಟ್ಟ ವಿದೇಶಿಗ
ವೈರಲ್‌ ವಿಡಿಯೋ
Image Credit source: Instagram

Updated on: Sep 06, 2026 | 6:15 PM

ವಿದೇಶಿ ಪ್ರವಾಸಿಗರು (foreigner) ಭಾರತಕ್ಕೆ ಬಂದಾಗ ಇಲ್ಲಿನ ಬಸ್ಸು, ರೈಲು ಹಾಗೂ ಆಟೋ ರಿಕ್ಷಾ ಪ್ರಯಾಣವನ್ನು ತುಂಬಾ ಇಷ್ಟಪಡುತ್ತಾರೆ. ಕೆಲವೊಮ್ಮೆ ತಾವೇ ಸ್ವತಃ ಆಟೋ ಓಡಿಸಿ ಖುಷಿ ಪಡುತ್ತಾರೆ. ಇದೀಗ ವಿದೇಶಿಗನೊಬ್ಬ ಭಾರತಕ್ಕೆ ಭೇಟಿ ನೀಡಿದ ವೇಳೆ ಆಟೋ ಓಡಿಸುತ್ತ ಸಖತ್ ಎಂಜಾಯ್ ಮಾಡಿದ್ದಾನೆ. ತನ್ನ ಆಟೋದ ಜತೆಗೆ ರೈಡ್ ಬರ್ತೀರಾ ಎಂದು ಭಾರತೀಯರನ್ನು ಕೇಳಿದ್ದಾನೆ. ವಿದೇಶಿಗನ ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಆಟೋ ಓಡಿಸಿ ಖುಷಿ ಪಟ್ಟ ವಿದೇಶಿಗ

ಟೈಲರ್ ಬ್ಲೂಡೆನ್ (Tyler blunden) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ವಿದೇಶಿಗನೊಬ್ಬ ರಾಜಸ್ಥಾನದ ಜೈಪುರಕ್ಕೆ ಭೇಟಿ ನೀಡಿದ್ದಾನೆ. ಇದೇ ವೇಳೆ ರಸ್ತೆಯಲ್ಲಿ ಆಟೋ ಓಡಿಸಿ ಖುಷಿ ಪಟ್ಟಿದ್ದಾನೆ. ರಸ್ತೆ ಬದಿಯಲ್ಲಿ ನಿಂತಿದ್ದ ಜನರನ್ನು ತನ್ನ ಆಟೋದಲ್ಲಿ ಕೂರುವಂತೆ ಕರೆದಿದ್ದಾನೆ. ಆಟೋದಲ್ಲಿ ಜಾಲಿ ರೈಡ್ ಗೆ 200 ರೂ ಎಂದು ಹೇಳಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಂದು ಅಮೆರಿಕದಿಂದ ಭಾರತದತ್ತ ಪ್ರಯಾಣ; ತನ್ನ ಈ ನಿರ್ಧಾರದ ಬಗ್ಗೆ ಖುಷಿ ವ್ಯಕ್ತಪಡಿಸಿದ ಟೆಕ್ಕಿ

ಈ ವಿಡಿಯೋ ಎಂಭತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಫಾರಿನರ್ ಫಾರಿನರ್ ಗೆ ಸ್ಕ್ಯಾಮ್ ಮಾಡಿದ್ದಾನೆ ಎಂದು ಹೇಳಿದ್ದಾರೆ. ಮತ್ತೊಬ್ಬರು ರೈಶ್ ಡ್ರೈವಿಂಗ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಸಣ್ಣ ಸಣ್ಣ ವಿಷ್ಯದಲ್ಲೂ ಖುಷಿ ಕಾಣುವುದು ಮುಖ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us