ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಹತ್ತಾರು ವಿಡಿಯೋಗಳು ವೈರಲ್ (Viral Video) ಆಗುತ್ತವೆ. ಈ ಪೈಕಿ ಕೆಲ ವಿಡಿಯೋಗಳು ಜನರಿಗೆ ಇಷ್ಟವಾಗಬಹುದು. ಇನ್ನು ಕೆಲವು ಚರ್ಚೆಗೆ ಕಾರಣವಾಗಬಹುದು. ಅಲ್ಲದೇ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳಬಹುದು. ಸದ್ಯ ಟ್ರೆಂಡಿಂಗ್ನಲ್ಲಿರುವ ಹಾಡೆಂದರೆ ಕಚ್ಚಾ ಬಾದಮ್. ಫೇಸ್ಬುಕ್, ಇನ್ಸ್ಟಾಗ್ರಾಮ್ ಓಪನ್ ಆದರೆ ಸಾಕು ಕಚ್ಚಾ ಬಾದಾಮ್ (Kaccha Badam) ಹಾಡಿಗೆ ಹೆಜ್ಜೆ ಹಾಕಿರುವ ಹಲವರ ನೃತ್ಯಗಳು ಬಂದು ಬಿಡುತ್ತೆ. ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಹಾಡಿರುವ ಈ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ.
ಭುವನ್ ಬಡ್ಯಾಕರ್ ಹಾಡಿರುವ ಈ ಹಾಡಿಗೆ ಎಲ್ಲರೂ ಒಲವು ತೋರುತ್ತಿದ್ದಾರೆ. ಇದೀಗ ಶಾಲಾ ಬಾಲಕಿಯೊಬ್ಬಳು ಕಚ್ಚಾ ಬಾದಮ್ಗೆ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಆಕೆಯ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ, ಅಂಗನವಾಡಿ ಕೇಂದ್ರದಂತೆ ಕಂಡುಬರುವ ಜನರ ಗುಂಪಿನ ಮುಂದೆ ಶಾಲಾ ಸಮವಸ್ತ್ರವನ್ನು ಧರಿಸಿರುವ ಪುಟ್ಟ ಹುಡುಗಿಯನ್ನು ಕಾಣಬಹುದು. ಈ ವಿಡಿಯೋ ಗುಜರಾತ್ನದ್ದು ಎಂದು ಹೇಳಲಾಗುತ್ತಿದೆ. ಆದರೆ, ಬಾಲಕಿ ಬಗ್ಗೆ ಮಾಹಿತಿ ಇಲ್ಲ.
Trends are not only for urban areas .. it has gone deep down in villages too .. trending #kachabadam and beautifully done #hookstep of the song by all the more beautiful cute little girl of #anganwadi center in Gujarat. ❣️❣️❣️ pic.twitter.com/A9jHyXJNgb
— Neha Kantharia (@nehakantharia) March 12, 2022
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ನೇಹಾ ಕಾಂತರಿಯಾ ಅವರು ಟ್ವಿಟರ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೃತ್ಯ ವೀಕ್ಷಿಸಿದ ಹಲವರು ಚಿಕ್ಕ ಹುಡುಗಿಯ ನೃತ್ಯ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಜೊತೆಗೆ ಕಾಮೆಂಟ್ಗಳ ವಿಭಾಗದಲ್ಲಿ ಬೇರೆ ಮಕ್ಕಳ ಮುದ್ದಾದ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಕಚ್ಚಾ ಬಾದಾಮ್ ಸಿಂಗರ್:
ಪಶ್ವಿಮ ಬಂಗಾಳದ ಬ್ರಿಬುರ್ಮ್ ಎನ್ನುವ ಹಳ್ಳಿಯೊಂದರಲ್ಲಿ ಕಡಲೆಕಾಯಿ ಮಾರಾಟ ಮಾಡುವ ಭುವನ್ ಬಡ್ಯಾಕರ್ ಹಾಡು ಹೇಳಿಕೊಂಡು ತಾನು ತಂದಿರುವ ಕಡಲೆಕಾಯಿಯನ್ನು ಮಾರಾಟ ಮಾಡಿದ್ದಾನೆ. ಅವನ ಹಾಡು ನೆಟ್ಟಿಗರ ಗಮನ ಸೆಳೆದಿದೆ. ಕಡಲೆಕಾಯಿ ಮಾರುವ ವೇಳೆ ಕಚ್ಚಾ ಬಾದಮ್ ಹಾಡನ್ನು ಹಾಡುತ್ತಾನೆ. ಈತನ ಹಾಡು ಕೇಳಿಯೆ ಜನ ಕಳೆದುಹೋಗುತ್ತಾರೆ. ಬಬೂನ್ ಅವರ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವರು ಅವರ ಕಚ್ಚಾ ಬಾದಾಮ್ ಹಾಡಿಗೆ ಮ್ಯಾಶ್ ಅಪ್ಗಳನ್ನ ಮಾಡಿ ಹಂಚಿಕೊಂಡಿದ್ದಾರೆ.
ಇನ್ನೊಂದು ಪ್ರಮುಖ ವಿಚಾರವೆಂದರೆ ಬೂಬನ್ ತಮ್ಮ ಕಚ್ಚಾ ಬಾದಾಮ್ ಹಾಡಿಗಾಗಿ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹಾಡು ವೈರಲ್ ಆಗಿ ಲಕ್ಷಾಂತರ ಜನ ವೀಕ್ಷಿಸಿದರೂ ತನಗೆ ಯಾವುದೇ ಆದಾಯ ಬಂದಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ನನ್ನ ಹಾಡಿನಿಂದ ಹಲವರು ಹಣಗಳಿಸುತ್ತಿದ್ದಾರೆ. ನನಗೂ ನನ್ನ ಹಾಡಿನಿಂದ ಬಂದ ಲಾಭ ಸಿಗಬೇಕು ಎಂದು ಪೋಲೀಸರಿಗೆ ದೂರನ್ನೂ ನೀಡಿದ್ದರು. ಈ ಬಗ್ಗೆ ಅವರು ಪೋಲೀಸರಿಗೆ ದೂರು ನೀಡಿದ ನಂತರ ನನಗೆ ಹಲವು ಬೆದರಿಕೆ ಕರೆಗಳೂ ಬಂದಿವೆ. ಅದೆಲ್ಲವನ್ನೂ ನಾನು ಎದುರಿಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ
‘ಜೇಮ್ಸ್’ ಚಿತ್ರಕ್ಕೆ ಸ್ವಾಗತ ಕೋರಲು ಫ್ಯಾನ್ಸ್ ಸಿದ್ಧತೆ; ಹುಬ್ಬಳ್ಳಿ ಚಿತ್ರಮಂದಿರದ ಎದುರು ಹೇಗಿದೆ ನೋಡಿ ಸಂಭ್ರಮ
Published On - 1:08 pm, Mon, 14 March 22