Viral Video: ಬರೀಗೈಯಿಂದ ಹಾವು ಹಿಡಿಯುತ್ತಿರುವ ಯುವತಿಯ ವಿಡಿಯೋ ವೈರಲ್

|

Updated on: Sep 26, 2023 | 1:08 PM

Snake Catcher : ಮಹಾರಾಷ್ಟ್ರದ ಶ್ವೇತಾ ಸುತಾರ ವನ್ಯಪ್ರಾಣಿಗಳ ರಕ್ಷಕಿ. ಇದೀಗ ಅಂಗಡಿಯ ಗೊಡೌನ್​ನಲ್ಲಿ ದೊಡ್ಡ ಹಾವನ್ನು ಬರೀಗೈಯಿಂದ ಹಿಡಿದಿದ್ದಾರೆ. ಈ ವಿಡಿಯೋ ನೋಡಿದ ಲಕ್ಷಾಂತರ ಜನರು ಈಕೆಯ ಧೈರ್ಯವನ್ನು ಮೆಚ್ಚಿದ್ದಾರೆ. ಹಾಗೆಯೇ ಈ ಸಾಹಸದಿಂದ ಅಪಾಯಕ್ಕೆ ಬೀಳದಿರಿ ಎಂದು ಬುದ್ಧಿಮಾತನ್ನೂ ಹೇಳಿದ್ಧಾರೆ. ನಿಮಗೆ ಒಳ್ಳೆಯದಾಗಲಿ ಸಹೋದರಿ ಎಂದೂ ಕೆಲವರು ಹರಿಸಿದ್ದಾರೆ.

Viral Video: ಬರೀಗೈಯಿಂದ ಹಾವು ಹಿಡಿಯುತ್ತಿರುವ ಯುವತಿಯ ವಿಡಿಯೋ ವೈರಲ್
ಬರೀಗೈಯಲ್ಲಿ ಹಾವು ಹಿಡಿಯುತ್ತಿರುವ ಶ್ವೇತಾ ಸುತಾರ
Follow us on

Rat Snake: ಹಾವು ಎಂದರೆ ಅನೇಕರು ಓಡಿ ಹೋಗುವವರೇ ಹೆಚ್ಚು. ಆದರೆ ಕೆಲವರು ಮಾತ್ರ ಹಾವುಗಳನ್ನು ಉಪಾಯದಿಂದ ಅವುಗಳನ್ನು ಹಿಡಿಯುವ ಕೌಶಲ ಬೆಳೆಸಿಕೊಂಡಿರುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಯುವತಿಯೊಬ್ಬಳು ಬರೀಗೈಯಿಂದ ಇಂಥ ದೊಡ್ಡ ಹಾವನ್ನು (Rat Snake) ರಕ್ಷಿಸಿದ್ದಾಳೆ. ಆಕೆಯ ಸುತ್ತಮುತ್ತಲಿರುವ ಜನರೆಲ್ಲ ಬೆರಗಿನಿಂದ ನೋಡುತ್ತಿದ್ದಾರೆ. ಅಂಗಡಿಯ ಗೊಡೌನ್​ನಲ್ಲಿ ಹೊಕ್ಕಿದ್ದ ಈ ಹಾವನ್ನು ಹಿಡಿಯುವಲ್ಲಿ  ನೆಟ್ಟಿಗರು ಈ ವಿಡಿಯೋ ನೋಡಿ ಭಲೇ ಹುಡುಗಿ ಎಂದು  ಆಕೆಯ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಕೊಂಡಾಡುತ್ತಿದ್ದಾರೆ. ಲಕ್ಷಾಂತರ ಜನರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಸೂರತ್​ನ ಬೀದಿಯಲ್ಲಿ ಕೋಟ್ಯಂತರ ಮೌಲ್ಯದ ವಜ್ರಗಳು; ಆರಿಸಿಕೊಳ್ಳಲು ಹೆಣಗಾಡುತ್ತಿರುವ ಜನ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಯುವತಿಯ ಹೆಸರು ಶ್ವೇತಾ ಸುತಾರ್. ಈಕೆ ವನ್ಯಪ್ರಾಣಿಗಳ ರಕ್ಷಕಿ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಸೆ. 12ರಂದು ಹಂಚಿಕೊಂಡಿದ್ದಾಳೆ. ಈತನಕ 3 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ಧಾರೆ. ಅನೇಕರು ಪ್ರತಿಕ್ರಿಯಿಸಿ, ನನ್ನ ಎದೆ ಬಡಿದುಕೊಳ್ಳುತ್ತಿದೆ, ಇದು ದುರ್ಬಲರು ನೋಡುವಂಥ ವಿಡಿಯೋ ಅಲ್ಲ ಎನ್ನುತ್ತಿದ್ದಾರೆ ಕೆಲವರು. ಧೈರ್ಯವನ್ನು ಮೆಚ್ಚಬೇಕು ಇದು ಎಲ್ಲರಿಗೂ ಸಿದ್ಧಿಸುವುದಿಲ್ಲ ಎಂದಿದ್ದಾರೆ ಇನ್ನೂ ಕೆಲವರು.

ಶ್ವೇತಾ ಸುತಾರ್ ಹಾವು ಹಿಡಿಯುತ್ತಿರುವುದು

ಇದು ರ್ಯಾಟ್​ ಸ್ನೇಕ್ ಎನ್ನಿಸುತ್ತದೆ, ಆದರೆ ಪೈಪ್​ನಿಂದ ಮುಚ್ಚುವುದು ಅಪಾಯಕಾರಿ ಎಂದಿದ್ದಾರೆ ಒಬ್ಬರು. ಇದು ವಿಷಕಾರಿ ಹಾವಲ್ಲ, ಮಹಾರಾಷ್ಟ್ರದ ಸುತ್ತಮುತ್ತ ಇಂಥ ಹಾವುಗಳು ಸಾಮಾನ್ಯ. ಆದರೆ ಈ ಹುಡುಗಿ ಧೈರ್ಯ ತೋರಿರುವುದು ಮಾತ್ರ ಶ್ಲಾಘನೀಯ ಎಂದಿದ್ದಾರೆ ಇನ್ನೊಬ್ಬರು. ಸಹೋದರಿ ನಿಮ್ಮ ಸುರಕ್ಷೆಯ ಬಗ್ಗೆ ಗಮನವಿರಲಿ ಎಂದು ಅನೇಕರು ಕಾಳಜಿ ವಹಿಸಿದ್ದಾರೆ.

ಇದನ್ನೂ ಓದಿ : Viral Video: ಬೆಕ್ಕೆಂದು ಕರಿಚಿರತೆಯನ್ನು ಬೆಳೆಸಿದ ರಷ್ಯಾದ ಮಹಿಳೆ; ಸಹಾನುಭೂತಿಗೆ ಮನಸೋತ ನೆಟ್ಟಿಗರು

ಹಾವುಗಳನ್ನು ರಕ್ಷಿಸಬೇಕು, ಪರಿಸರಕ್ಕೆ ಎಲ್ಲ ಜೀವಿಗಳೂ ಬೇಕು ಎಂದಿದ್ದಾರೆ ಕೆಲವರು. ನಿಮ್ಮನ್ನು ನೋಡಿ ಹಾವೇ ಹೆದರಿಕೊಂಡಿದೆ, ನೀವೇನು ನಾಗಿನಿಯೋ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ