ಅಂಕಲ್ ಎಂದಿದ್ದಕ್ಕೆ ಯುವತಿಯ ಮೇಲೆ ಗರಂ ಆದ ಚಾಯ್ ವಾಲಾ, ಫಾಲ್ಲೋರ್ಸ್ ಬಳಿಯೇ ಈ ಸಮಸ್ಯೆಗೆ ಪರಿಹಾರ ತಿಳಿಸಿ ಪ್ಲೀಸ್ ಎಂದ ಯುವತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 22, 2025 | 4:40 PM

ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಟ್‌ನಲ್ಲಿ ಬಳಕೆದಾರರು ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸುತ್ತಿರುತ್ತಾರೆ. ಇದೀಗ ರೆಡ್ಡಿಟ್ ಬಳಕೆದಾರರೊಬ್ಬರು, ನಿಮಗಿಂತ ವಯಸ್ಸಿನಲ್ಲಿ ಹೆಚ್ಚು ದೊಡ್ಡವರಾದ ಚಹಾ ಅಂಗಡಿಯವರ ಬಳಿ ಟೀ ಕೇಳುವಾಗ ಅವರನ್ನು ಏನೆಂದು ಕರೆಯುತ್ತೀರಿ ಎನ್ನುವ ಪ್ರಶ್ನೆಯನ್ನು ತನ್ನ ಫಾಲ್ಲೋರ್ಸ್ ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲದೇ ತಮಗಾದ ಅನುಭವವನ್ನು ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಅಂಕಲ್ ಎಂದಿದ್ದಕ್ಕೆ ಯುವತಿಯ ಮೇಲೆ ಗರಂ ಆದ ಚಾಯ್ ವಾಲಾ, ಫಾಲ್ಲೋರ್ಸ್ ಬಳಿಯೇ ಈ ಸಮಸ್ಯೆಗೆ ಪರಿಹಾರ ತಿಳಿಸಿ ಪ್ಲೀಸ್ ಎಂದ ಯುವತಿ
ಸಾಂದರ್ಭಿಕ ಚಿತ್ರ
Follow us on

ಸೋಶಿಯಲ್ ಮೀಡಿಯಾ (social media) ದಲ್ಲಿ ತಮ್ಮ ಪ್ರತಿಭೆ ಗಳನ್ನು ಅನಾವರಣ ಮಾಡಿಕೊಳ್ಳಲು ವೇದಿಕೆ ಅನ್ನೋದು ನಿಜ. ಅದೇ ರೀತಿ ದೈನಂದಿನ ಬದುಕಿನಲ್ಲಿ ಆಗುವ ಘಟನೆಗಳನ್ನು ಹಾಗೂ ಅನುಭವಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ತಮಗಿಂತ ದೊಡ್ಡವರನ್ನು ಅಥವಾ ಅಂಗಡಿಗೆ ಏನಾದರೂ ಖರೀದಿ ಮಾಡಲು ಹೋದಾಗ ಅಲ್ಲಿಂದವರನ್ನು ಅಂಕಲ್, ಅಣ್ಣ ಹೀಗೆ ಗೌರವದಿಂದ ಸಂಭೋಧಿಸುತ್ತೇವೆ. ಆದರೆ ಇದೀಗ ರೆಡ್ಡಿಟ್ ಬಳಕೆದಾರರೊಬ್ಬರು, ಚಹಾ ಅಂಗಡಿಗೆ ತೆರಳಿದಾಗ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಚಹಾ ಅಂಗಡಿಗೆ ಹೋಗಿದಾಗ ಚಾಯ್ ವಾಲಾ (chaiwala) ನನ್ನು ‘ಅಂಕಲ್’ ಎಂದು ಕರೆದಿದ್ದಕ್ಕೆ ಆತನು ಕೋಪಗೊಂಡಿದ್ದಾನೆ. ಭಾರತ (India) ದಲ್ಲಿ ಚಹಾ ಮಾರಾಟಗಾರರನ್ನು ಹೇಗೆ ಸಂಬೋಧಿಸುವುದು ಎಂದು ಫಾಲ್ಲೋರ್ಸ್ ಬಳಿ ಕೇಳಿದ್ದು, ಈ ಸಮಸ್ಯೆಗೆ ಪರಿಹಾರ ತಿಳಿಸಿ ಪ್ಲೀಸ್ ಎಂದಿದ್ದಾಳೆ.

 

ಹೌದು, ಸಮ್ಥಿಂಗ್ ಅಂಡ್ ಎನಿಥಿಂಗ್’ ಹೆಸರಿನ ಖಾತೆಯಲ್ಲಿ ಯುವತಿಯೊಬ್ಬಳು ಈ ಬಗ್ಗೆ ಪೋಸ್ಟ್‌ ಮಾಡಿದ್ದು, ‘ನಿಮಗಿಂತ ವಯಸ್ಸಿನಲ್ಲಿ ಹೆಚ್ಚು ದೊಡ್ಡವರಾದ ಚಹಾ ಅಂಗಡಿಯವನ ಬಳಿ ಚಹಾ ಕೇಳುವಾಗ ನೀವು ಅವರನ್ನು ಏನೆಂದು ಕರೆಯುತ್ತೀರಿ?’ಎನ್ನುವ ಪ್ರಶ್ನೆಯನ್ನು ಫಾಲ್ಲೋರ್ಸ್ ಮುಂದೆ ಇಟ್ಟಿದ್ದಾಳೆ. ‘ನಾನು ಚಿಕ್ಕವಳಿದ್ದಾಗ ಅದು ತುಂಬಾ ಸುಲಭವಾಗಿತ್ತು, ಅವರ ವಯಸ್ಸಿನ ಆಧಾರದ ಮೇಲೆ “ಭಯ್ಯಾ” ಅಥವಾ “ಅಂಕಲ್” ಎನ್ನುತ್ತಿದ್ದೆ. ಆದರೆ ಈಗ? ಅರ್ಧದಷ್ಟು ಕೆಲಸಗಾರರು ನನ್ನ ವಯಸ್ಸಿನವರು ಅಥವಾ ನನಗಿಂತ ಕಿರಿಯರು, ನಾನು ಅವನನ್ನು “ಅಂಕಲ್” ಎಂದು ಕರೆದಿದ್ದರಿಂದ ಆ ವ್ಯಕ್ತಿ ಕೋಪಗೊಂಡಿದ್ದ, ಏಕೆಂದರೆ ಅವನಿಗೆ ಕೇವಲ 36 ವರ್ಷ’ ಎಂದು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ: ಪತಿ ವಿಚ್ಛೇದಿತ ಪತ್ನಿಗೆ ಕೊಡುವ ಜೀವನಾಂಶ ನಿರ್ಧಾರವಾಗೋದು ಹೇಗೆ?

ಇದನ್ನೂ ಓದಿ
ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ
ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದ ಯುವಕರು
ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌
ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಇದು

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ‘ಅವರನ್ನು ಭಾಯ್ ಅಥವಾ ಬಾಸ್ ಎಂದು ಕರೆಯಿರಿ’ ಎಂದಿದ್ದಾರೆ. ಇನ್ನೊಬ್ಬದು, ‘ಬಾಸ್, ಹೌದು ಇದು ಒಳ್ಳೆಯ ಸಲಹೆ, ಅಭ್ಯಾಸವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ನೀವು ಅವನನ್ನು ದೋಸ್ತ್ ಎಂದು ಕರೆಯಬಹುದು’ ಎಂದು ಕಾಮೆಂಟ್ ಮಾಡಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:35 pm, Sat, 22 March 25