Video: ಭರತನಾಟ್ಯದ ಮೂಲಕ ನಾಟ್ಯ ಗುರುಗಳಿಗೆ ಅಂತಿಮ ನಮನ ಸಲ್ಲಿಸಿದ ಶಿಷ್ಯೆಯರು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 08, 2024 | 5:28 PM

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನಮ್ಮ ಕಣ್ಣಂಚಲಿ ನೀರು ತರಿಸುತ್ತವೆ. ಅಂತಹದೊಂದು ಹೃದಯಸ್ಪರ್ಶಿ ವಿಡಿಯೋ ಇದೀಗ ವೈರಲ್‌ ಆಗಿದ್ದು, ಇಹಲೋಕ ತ್ಯಜಿಸಿದ ನೆಚ್ಚಿನ ನಾಟ್ಯ ಗುರುವಿಗೆ ಶಿಷ್ಯೆಯರು ಭರತನಾಟ್ಯದ ಮೂಲಕ ಅಂತಿಮ ನಮನವನ್ನು ಸಲ್ಲಿಸಿದ್ದಾರೆ. ಗುರು-ಶಿಷ್ಯರ ನಡುವಿನ ಈ ಪವಿತ್ರ ಸಂಬಂಧದ ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.

Video: ಭರತನಾಟ್ಯದ ಮೂಲಕ ನಾಟ್ಯ ಗುರುಗಳಿಗೆ ಅಂತಿಮ ನಮನ ಸಲ್ಲಿಸಿದ ಶಿಷ್ಯೆಯರು
ವೈರಲ್​​ ವಿಡಿಯೋ
Follow us on

ಅಜ್ಞಾನದ ಅಂಧಕಾರದಲ್ಲಿ ಮುಳುಗಿ ಕಲುಷಿತಗೊಂಡಿರುವ ಮನಸ್ಸನ್ನು ಸಂಸ್ಕರಣ ಮಾಡಿ ಜ್ಞಾನ, ವಿದ್ಯೆ, ವಿವೇಕದ ಜ್ಯೋತಿ ಬೆಳಗಿ ಶಿಷ್ಯರುಗಳನ್ನು ಬಲಿಷ್ಠರನ್ನಾಗಿ, ವಿಶಿಷ್ಟರನ್ನಾಗಿ ಜೊತೆಗೆ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ ಬಾಳುವವರನ್ನಾಗಿ ಮಾಡುವವರೇ ಗುರುಗಳು. ಇಂತಹ ಗುರುಗಳಿಗೆ ನಾವುಗಳು ಎಷ್ಟು ಋಣಿಯಾಗಿದ್ದರೂ ಕಮ್ಮಿಯೇ. ಇದೀಗ ಗುರು ಶಿಷ್ಯರ ಪವಿತ್ರ ಸಂಬಂಧಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್‌ ಆಗಿದ್ದು, ಇಹಲೋಕ ತ್ಯಜಿಸಿದ ನೆಚ್ಚಿನ ನಾಟ್ಯ ಗುರುವಿಗೆ ಶಿಷ್ಯೆಯರು, ಗುರುಗಳು ಕಲಿಸಿಕೊಟ್ಟ ಭರತನಾಟ್ಯದ ಮೂಲಕ ಅಂತಿಮ ನಮನವನ್ನು ಸಲ್ಲಿಸಿದ್ದಾರೆ. ಈ ದೃಶ್ಯ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.

Narthaki.com ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತ ಭಾವನಾತ್ಮಕ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದ್ದು, “ಶಿಷ್ಯೆಯರಿಂದ ಹೃದಯಸ್ಪರ್ಶಿ ವಿದಾಯ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಇಹಲೋಕ ತ್ಯಜಿಸಿದ ಗುರುಗಳಿಗೆ ಶಿಷ್ಯೆಯರು ಭರತನಾಟ್ಯದ ಮೂಲಕ ಅಂತಿಮ ನಮನವನ್ನು ಸಲ್ಲಿಸಿದ ಭಾವನಾತ್ಮಕ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಭರತನಾಟ್ಯ ಕಲಾವಿದೆ ರಮ ವೈದ್ಯನಾಥನ್‌ ಹಾಗೂ ಅವರ ಭರತನಾಟ್ಯ ತರಗತಿ ಸಹಪಾಠಿಗಳು ತಮಗೆ ಬಾಲ್ಯದಿಂದಲೂ ನೃತ್ಯ ಜ್ಞಾನವನ್ನು ಧಾರೆಯೆರೆದ ಗುರುಗಳು ಇಹಲೋಕ ತ್ಯಜಿಸಿದಾಗ, ಈ ಶಿಷ್ಯೆಯರು ತಮ್ಮ ನೆಚ್ಚಿನ ನಾಟ್ಯ ಗುರುಗಳಿಗೆ ಭರತನಾಟ್ಯದ ಮೂಲಕ ಅಂತಿಮ ನಮನವನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸಂಗೀತದ ಶಕ್ತಿ ಎಂಥದ್ದು ನೋಡಿ…. ಯುವತಿಯ ಭಜನೆ ಹಾಡನ್ನು ಕೇಳಿ ಕಣ್ಣೀರು ಹಾಕಿದ ʼಐಕಾನಿಕ್ ಗೂಳಿ‌ʼ

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಗುರುವಿಗೆ ಇದಕ್ಕಿಂತ ಉತ್ತಮ ವಿದಾಯ ಏನಿದೆ ಹೇಳಿ, ಅವರ ಆತ್ಮಕ್ಕೆ ಶಾಂತಿ ಸಿಗಲಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಗುರುವಿಗೆ ಇದಕ್ಕಿಂತ ದೊಡ್ಡ ಗುರು ದಕ್ಷಿಣೆ ಕೊಡಲು ಸಾಧ್ಯವೇ ಇಲ್ಲ” ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ