Video: ಸಂಗೀತದ ಶಕ್ತಿ ಎಂಥದ್ದು ನೋಡಿ…. ಯುವತಿಯ ಭಜನೆ ಹಾಡನ್ನು ಕೇಳಿ ಕಣ್ಣೀರು ಹಾಕಿದ ʼಐಕಾನಿಕ್ ಗೂಳಿʼ
ಸಂಗೀತ ಕೇಳಿದರೆ ಕಲ್ಲು ಕೂಡಾ ಕರಗುತ್ತದೆ ಎಂಬ ಮಾತಿದೆ. ಸಂಗೀತದ ಶಕ್ತಿಯೇ ಅಂತಹದ್ದು, ಇದು ಮನಸ್ಸಿಗೆ ತಂಪು ನೀಡಿ, ದುಃಖ ದುಮ್ಮಾನಗಳಿಂದ ಭಾರವಾದ ಮನಸ್ಸನ್ನು ತಿಳಿಗೊಳಿಸುತ್ತದೆ. ಅಷ್ಟೇ ಅಲ್ಲದೆ ಪ್ರಾಣಿಗಳು ಕೂಡಾ ಸಂಗೀತಕ್ಕೆ ಮನಸೋಲುತ್ತವೆ. ಇದಕ್ಕೆ ಉತ್ತಮ ನಿದರ್ಶನದಿಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಯುವತಿಯ ಭಜನೆ ಹಾಡನ್ನು ಕೇಳಿ ಈಶಾ ಫೌಂಡೇಶನ್ ಗೋಶಾಲೆಯಲ್ಲಿರುವ ಬಲಾಢ್ಯ ಗೂಳಿಯಾದ ಭೋಲಾ ಭಾವುಕವಾಗಿ ಕಣ್ಣೀರು ಸುರಿಸಿದೆ. ಈ ಹೃದಯಸ್ಪರ್ಶಿ ದೃಶ್ಯ ನೆಟಿಗರ ಮನಗೆದ್ದಿದೆ.
ಈಶಾ ಫೌಂಡೇಶನ್ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಇಲ್ಲಿ ಗೋಶಾಲೆಯನ್ನು ಕೂಡಾ ನಡೆಸಲಾಗುತ್ತದೆ. ಈ ಗೋಶಾಲೆಯಲ್ಲಿ 630ಕ್ಕೂ ಹೆಚ್ಚು ಸ್ಥಳೀಯ ತಳಿಯ ಹಸುಗಳು ಮತ್ತು ಗೂಳಿಗಳಿವೆ. ಅವುಗಳಲ್ಲಿ ಭೋಲಾ ಹೆಸರಿನ ವಿಶೇಷ ಗೂಳಿಯೂ ಒಂದು. ಈ ಬಲಾಢ್ಯ ಗೂಳಿಯನ್ನು ನೋಡಲು ಕೂಡಾ ಹಲವಾರು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ಈ ಗೂಳಿಗೆ ಸಂಬಂಧಿಸಿದ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದ್ದು, ಯುವತಿಯೊಬ್ಬಳ ಭಜನೆ ಹಾಡನ್ನು ಕೇಳಿ ಈ ಬಲಾಢ್ಯ ಗೂಳಿ ಭಾವುಕವಾಗಿ ಕಣ್ಣೀರು ಸುರಿಸಿದೆ. ಈ ದೃಶ್ಯ ನೆಟ್ಟಿಗರ ಮನಗೆದ್ದಿದೆ.
ತುಂಬಾನೇ ಆಕ್ರಮಣಕಾರಿ ಸ್ವಭಾವನ್ನು ಹೊಂದಿದ್ದ ಈ ಬಲಾಢ್ಯ ಗೂಳಿಯನ್ನು ಗೋಶಾಲೆಗೆ ತಂದು ಬಿಟ್ಟ ಬಳಿಕ ಸದ್ಗುರುಗಳ ಆರೈಕೆಯಲ್ಲಿ ಇದು ಶಾಂತಿ ಮತ್ತು ತಾಳ್ಮೆಯನ್ನು ಕಲಿಯಿತು. ನಂತರ ಸದ್ಗುರು ಈ ಗೂಳಿಗೆ ʼಭೋಲಾʼ ಎಂಬ ನಾಮಕರಣವನ್ನು ಮಾಡುತ್ತಾರೆ. ಹೀಗೆ ಗೋಶಾಲೆಗೆ ಬಂದ ಭೋಲಾ ನಂತರದಲ್ಲಿ ಎಲ್ಲರೊಂದಿಗೂ ದಯೆ ಮತ್ತು ತಾಳ್ಮೆಯಿಂದ ವರ್ತಿಸಲು ಪ್ರಾರಂಭಿಸಿತು. ಈ ಭೋಲಾನನ್ನು ನೋಡಲೆಂದೇ ಸಾವಿರಾರು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ʼಭೋಲಾʼ ಗೂಳಿಯ ಮೃದು ಮನಸ್ಸಿಗೆ ಸಂಬಂಧಿಸಿದ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
this_is_last_time_sg ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳ ಭಜನೆ ಹಾಡನ್ನು ಕೇಳುತ್ತಾ ಮಂತ್ರಮುಗ್ಧವಾಗಿ ನಿಂತ ಭೋಲಾ ಕೊನೆಯಲ್ಲಿ ಭಾವುಕವಾಗಿ ಕಣ್ಣೀರು ಸುರಿಸಿರುವ ಹೃಯಯಸ್ಪರ್ಶಿ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಅಯ್ಯೋ ದೇವ್ರೇ…. 69 ವರ್ಷದ ವರನ ಮುಖವನ್ನು ಕಂಡು ಕುಂತಲ್ಲೇ ಮೂರ್ಛೆ ಹೋದ ವಧು
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜವಾಗಿಯೂ ಈ ದೃಶ್ಯ ಹೃದಯಸ್ಪರ್ಶಿಯಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅದರ ಕಣ್ಣುಗಳು ತೀರಾ ಕೆಂಪಾಗಿವೆ. ಬಹುಶಃ ಕಣ್ಣಿನ ಸೋಂಕಿನಿಂದ ನೀರು ಬಂದಿರಬಹುದುʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ