ಮದುವೆಯ ದಿನ ವಧುವಿಗೆ (bride) ಸಮಯಕ್ಕೆ ಸರಿಯಾಗಿ ಊಟ ಕೊಡದಿದ್ದರೆ ಏನಾಗುತ್ತದೆ ಅಂತ ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಸಾಮಾನ್ಯವಾಗಿ ಎಲ್ಲ ಧರ್ಮದ ಮದುವೆಗಳಲ್ಲಿ ವಧುವಿಗೆ ಸಿಂಗಾರ ಮಾಡುವುದರಲ್ಲಿ ಎಲ್ಲರೂ ತಲ್ಲೀನರಾಗಿರುತ್ತಾರೆಯೇ ಹೊರತು ಆಕೆಯ ಹಸಿವಿನ (hunger) ಬಗ್ಗೆ ಯಾರಿಗೂ ಯೋಚನೆ ಇರೋದಿಲ್ಲ. ವಧುಗಳು ಸಹ ಅಷ್ಟೇ. ಅವರ ಗಮನವೆಲ್ಲ ತಮಗೆ ಮಾಡುತ್ತಿರುವ ಅಲಂಕಾರದ ಮೇಲಿರುತ್ತದೆ. ತಾನು ಹೇಗೆ ಕಾಣ್ತಾ ಇದ್ದೀನಿ, ವರನಿಗೆ ಮತ್ತು ಅವನ ಕಡೆಯವರಿಗೆ ತನ್ನ ಸಿಂಗಾರ ಇಷ್ಟವಾಗುತ್ತದೆಯೋ ಇಲ್ಲವೋ, ಮೇಕ್ ಅಪ್ನಲ್ಲಿ (make-up) ಯಾವುದಾದರೂ ಕಮ್ಮಿಯಾಯಿತಾ? ಇಂಥ ಯೋಚನೆಗಳಲ್ಲಿ ಆಕೆ ಊಟವನ್ನು ಮರೆತುಬಿಡುತ್ತಾಳೆ. ಉತ್ತರ ಭಾರತದಲ್ಲಿ ನಡೆಯುವ ಮದುವೆಗಳಲ್ಲಿ ಕೆಲ ಸಲ ವರನ ಬಾರಾತ್ ಬರೋದು ತಡವಾಗುತ್ತದೆ. ವಧು ಸಿಂಗರಿಸಿಕೊಂಡು ಬಾರಾತ್ ಮತ್ತು ಬಾರಾತಿಗಳಿಗಾಗಿ ಬರಿ ಹೊಟ್ಟೆಯಲ್ಲಿ ಕಾಯುತ್ತಿರುತ್ತಾಳೆ.
ಆದರೆ, ತಮ್ಮ ಅಲಂಕಾರ, ಶೃಂಗಾರಗಳಷ್ಟೇ ಊಟ-ತಿಂಡಿಯನ್ನು ಪ್ರೀತಿಸುವ ಯುವತಿಯರೂ ಇರುತ್ತಾರೆ. ಈ ವಿಡಿಯೋನಲ್ಲಿರುವ ನಮ್ಮ ಕಥಾನಾಯಕಿಯ ಹಾಗೆ! ಬಾರಾತ್ (ಮದುಮಗ ಕುದುರೆಯೇರಿ ಮದುಮಗಳ ಮನೆಗೆ ಬರೋದು) ಆಗಮಿಸುವುದು ತಡವಾಗುತ್ತಿದ್ದಂತೆ ಆಕೆಯ ಹೊಟ್ಟೆ ತಾಳಹಾಕಲಾರಂಭಿಸಿದೆ. ವರ ಆಗಮಿಸಿ ಮದುವೆ ಶಾಸ್ತ್ರಗಳೆಲ್ಲ ಪೂರ್ಣಗೊಳ್ಳಲು ಬಹಳ ಸಮಯ ಹಿಡಿಯುತ್ತದೆ. ಸೋ, ದಾರಿಯೇನು? ಮದುವೆ ಊಟಕ್ಕೆ ತಯಾರಾಗಿರುವ ಭಕ್ಷ್ಯಗಳನ್ನು ತಾನು ರೆಡಿಯಾಗಿ ಕೂತಿರುವ ರೂಮಿಗೆ ತರಿಸಿಕೊಂಡು ಮೆಲ್ಲುವುದು!!
ಖುದ್ದು ವಧುವೇ ಹಸಿವೆಯಾಗಿದೆ ಅಂತ ಹೇಳಿದರೆ ಅಲ್ಲಿರುವ ಜನ ತಡಬಡಾಯಿಸಿ ಆಕೆಗೆ ತಿನ್ನಲು ತಂದುಕೊಡುತ್ತಾರೆ. ನಮ್ಮ ಕಥಾನಾಯಕಿಗೆ ಚೈನೀಸ್ ಭಕ್ಷ್ಯಗಳು ತಂದುಕೊಡಲಾಗಿದೆ. ಅಕೆ ಎಂಜಾಯ್ ಮಾಡುತ್ತಾ ತಿನ್ನುತ್ತಿದ್ದಾಳೆ. ಅವಳ ಎಡಗೈಯಲ್ಲಿ ಕೃಪಾಣ್ ಇದೆ, ಅದನ್ನು ಕೆಳಗಿಡುವಂತಿಲ್ಲ! ಬಾರಾತ್ ಬರುವಷ್ಟರಲ್ಲಿ ಗಪಗಪ ತಿಂದುಬಿಡೋಣ ಅಂತ ಅಂದುಕೊಂಡರೂ ಬಳೆಗಾತ್ರದ ಮೂಗುತಿ ಅಡ್ಡಿಪಡಿಸುತ್ತಿದೆ! ಕೃಪಾಣ್ ಹಿಡಿದ ಕೈಯಿಂದಲೇ ಮೂಗುತಿ ಪಕ್ಕಕ್ಕೆ ಸರಿಸಿ ಆಕೆ ತನ್ನೆದಿರು ಇಟ್ಟಿರುವ ಹಲವಾರು ತಿಂಡಿಗಳನ್ನು ತಿನ್ನುತ್ತಿದ್ದಾಳೆ.
ಈ ವಿಡಿಯೋವನ್ನು ಅಕೆಯೇ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ, ‘ಸಾರೀ, ನಾನು ಫುಡೀ ಬಹು, ಮತ್ತು ನಾನು ಹೀಗಿರೋದು ಅತ್ತೆ-ಮಾವನವರಿಗೆ ಯಾವುದೇ ಅಭ್ಯಂತರವಿಲ್ಲ!’ ಅಂತ ಶಿರ್ಷಿಕೆ ಕೊಟ್ಟಿದ್ದಾಳೆ.
ಇದನ್ನೂ ಓದಿ: ಬೀದಿ ಬದಿ ವ್ಯಾಪಾರಿಯ ಚಾಟ್ಸ್ ತಯಾರಿಕೆ ನೋಡಿ ಮೂಗುಮುರಿದ ನೆಟ್ಟಿಗರು: ಸ್ಟ್ರೀಟ್ ಫುಡ್ ತಯಾರಿಕೆಯ ವಿಡಿಯೋ ವೈರಲ್