
ಕೆಲವು ಹೆಣ್ಣು ಮಕ್ಕಳು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಗೃಹಿಣಿ (house wife) ಯಾಗಿ ತನ್ನ ಪತಿಯ ಬೇಕು ಬೇಡಗಳ ಬಗ್ಗೆ ಗಮನ ಹರಿಸುತ್ತಾರೆ. ಹೌದು, ಎಷ್ಟೋ ಹೆಣ್ಣು ಮಕ್ಕಳು ಮದುವೆಯ ಬಳಿಕ ಪತಿ ಹಾಗೂ ತನ್ನ ಕುಟುಂಬಕ್ಕಾಗಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳುತ್ತಾರೆ. ಹೀಗೆ ಇರುವ ಹೆಣ್ಣು ತನ್ನ ಗಂಡ ಆಗಾಗ ತನಗೆ ಸರ್ಪ್ರೈಸ್ ಉಡುಗೊರೆ (surprise gift) ಕೊಡುವ ಮೂಲಕ ತನ್ನನ್ನು ಖುಷಿಪಡಿಸಬೇಕು ಎಂದುಕೊಳ್ಳುವುದು ಸಹಜ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಗಂಡನಿಗಾಗಿ ದುಡಿಯುವ ಹಾಗೂ ರುಚಿ ರುಚಿ ಅಡುಗೆ ಮಾಡಿ ಟಿಫಿನ್ ಬಾಕ್ಸ್‌ಗೆ ಹಾಕಿಕೊಡುವ ಪತ್ನಿಗಾಗಿ ತನ್ನ ಟಿಫಿನ್ ಬಾಕ್ಸ್‌ನಲ್ಲಿ ಸರ್ಪ್ರೈಸ್ ಉಡುಗೊರೆ ನೀಡುವ ಮೂಲಕ ಹೆಂಡತಿ ಮೊಗದಲ್ಲಿ ನಗು ಮೂಡಿಸಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ರೀತಿ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
@sathyashrii ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋಗೆ ಸಣ್ಣ ಸಣ್ಣ ಪ್ರಯತ್ನ ಮುಖ್ಯವಾಗುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಆಫೀಸು ಮುಗಿಸಿ ಸಂಜೆ ಪತಿಯು ಮನೆಗೆ ಬಂದಿದ್ದಾನೆ. ಆತನ ಟಿಫಿನ್ ಬಾಕ್ಸ್‌ನ್ನು ಪತ್ನಿಯೂ ತೊಳೆಯಲು ಮುಂದಾಗಿದ್ದಾಳೆ. ಈ ವೇಳೆಯಲ್ಲಿ ಟಿಫಿನ್ ಬಾಕ್ಸ್ ಒಳಗೆ ಇದ್ದ ಸರ್ಪ್ರೈಸ್ ಗಿಫ್ಟ್ ನೋಡಿ ಮುದ್ದಾಗಿ ರಿಯಾಕ್ಷನ್ ಕೊಟ್ಟಿದ್ದಾಳೆ. ಪತಿಯೂ ತನ್ನ ಪತ್ನಿಗೆ ಸರ್ಪ್ರೈಸ್ ನೀಡಿ ಖುಷಿ ಪಡಿಸಲು ಈ ಬಾಕ್ಸ್ ಒಳಗೆ ಕಿವಿಯೋಲೆ, ರೋಜ್ ಹಾಗೂ ಚಾಕೋಲೇಟ್ ಇಟ್ಟಿರುವುದನ್ನು ನೋಡಬಹುದು. ಇದನ್ನು ನೋಡಿ ಪತ್ನಿಯೂ ಶಾಕ್ ಆಗಿದ್ದು ಪತಿಯತ್ತ ನೋಡಿ ನಕ್ಕಿದ್ದಾಳೆ.
ಇದನ್ನೂ ಓದಿ : ಹೆಂಡ್ತಿಗೆ ಹೆರಿಗೆ ನೋವು : ಪತ್ನಿ ನೋವು ಅನುಭವಿಸುವುದನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಪತಿ
Little effort matters 🥹💓 pic.twitter.com/HHDY5LC9lE
— SriSathya (@sathyashrii) May 27, 2025
ಈ ವಿಡಿಯೋವೊಂದು ನಾಲ್ಕು ಲಕ್ಷ ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ಗಂಡನ ಈ ರೀತಿಯ ಪ್ರೀತಿ ಎಲ್ಲರಿಗೂ ಸಿಗಲಿ ಎಂದಿದ್ದಾರೆ. ಇನ್ನೊಬ್ಬರು, ಈ ಮಹಿಳೆ ವಾರಪೂರ್ತಿ ಈ ಸರ್ಪ್ರೈಸ್ ಉಡುಗೊರೆಯನ್ನೇ ನೆನಪಿಸಿಕೊಂಡು ಖುಷಿ ಪಡುತ್ತಾಳೆ ಎಂದಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ನನ್ನ ಮುಖದಲ್ಲಿ ನಗುವನ್ನು ತಂದಿತು. ಈ ಇಬ್ಬರೂ ಜೀವನದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ