ಕ್ಯಾನ್ಸರ್ ಕಾಯಿಲೆಯಲ್ಲಿ ಬದುಕುಳಿಯುವ ಸಂಖ್ಯೆ ತೀರಾ ಕಡಿಮೆ. ಆದರೆ ಇಲ್ಲೊಂದು ಶ್ವಾನ ಕ್ಯಾನ್ಸರ್ನಿಂದ ಗೆದ್ದು, ಗುಣಮುಖವಾಗಿ ಮತ್ತೇ ತನ್ನ ಕರ್ತವ್ಯಕ್ಕೆ ಹಾಜರಾಗಿದೆ. ಪಂಜಾಬ್ನ ಪೊಲೀಸ್ ಶ್ವಾನ ಪಡೆಯ ಲ್ಯಾಬ್ರಡಾರ್ ತಳಿಯ ಸಿಮ್ಮಿ ಹೆಸರಿನ ಶ್ವಾನ ಸಾಕಷ್ಟು ದಿನಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿತ್ತು. ಕ್ಯಾನ್ಸರ್ ಎಂದಾಕ್ಷಣ ಎದೆ ನಡುಕ ಹುಟ್ಟಿಸುವುದಂತೂ ಖಂಡಿತಾ. ಯಾಕೆಂದರೆ ಈ ಕಾಯಿಲೆಯಿಂದ ಬಳಲುತ್ತಿದ್ದರೆ, ಬದುಕುಳಿಯುವ ಸಂಖ್ಯೆ ತೀರಾ ಕಡಿಮೆ. ಆದರೆ ಸಿಮ್ಮಿಗೆ ಪಂಜಾಬ್ನ ಪೊಲೀಸ್ ತಂಡದಿಂದ ಸರಿಯಾದ ಸಮಯಕ್ಕೆ ವೈದ್ಯರನ್ನು ನೇಮಿಸಿ ಚಿಕಿತ್ಸೆಯನ್ನು ನೀಡಲಾಗಿದೆ. ಅದೃಷ್ಟವಶಾತ್ ಸಿಮ್ಮಿ ಕ್ಯಾನ್ಸರ್ ಮಹಾಮಾರಿಯಿಂದ ಗೆದ್ದು ಬಂದಿದ್ದು, ಮತ್ತೇ ತನ್ನ ಕರ್ತವ್ಯಕ್ಕೆ ಮರಳಿದೆ.
ಕ್ಯಾನ್ಸರ್ನಿಂದ ಗುಣಮುಖವಾದ ಬಳಿಕ ಪೊಲೀಸ್ ಅಧಿಕಾರಿಯೊಂದಿಗೆ ಸಿಮ್ಮಿ ಶ್ವಾನ ಓಡಾಡುತ್ತಿರುವ ವಿಡಿಯೋವನ್ನು ಸುದ್ದಿ ಸಂಸ್ಥೆ ಎಎನ್‌ಐ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಇದೀಗಾ ಎಲ್ಲೆಡೆ ಭಾರೀ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ ನೋಡಿ:
#WATCH | Faridkot: A Labrador dog named Simmy, who is part of the Punjab Police Canine squad, beats cancer and joins back duty pic.twitter.com/hT4qEqFqH4
— ANI (@ANI) May 19, 2023
ಇದನ್ನೂ ಓದಿ: ‘ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಅಸ್ತಿತ್ವಕ್ಕಾಗಿ ಮುಗ್ಧಜೀವಗಳನ್ನು ಬಳಸಿಕೊಂಡಿದ್ದೀರಿ!’
ಎಎನ್‌ಐ ಟ್ವೀಟ್ಗೆ ರೀಟ್ವೀಟ್ ಮಾಡಿದ ಫರೀದ್ ಕೋಟ್ ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹರ್ಜಿತ್ ಸಿಂಗ್, “ಸಿಮ್ಮಿ ದೀರ್ಘಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿತ್ತು. ಈಗ ಇದರ ಆರೋಗ್ಯ ಸುಧಾರಿಸಿದೆ. ಮುಂದೆ ಪಂಜಾಬ್ನ ಪೊಲೀಸ್ ಇಲಾಖೆಯ ವಿರೋಧಿ ವಿಧ್ವಂಸಕ ತಪಾಸಣೆ ಸಹಾಯ ಮಾಡಲಿದ್ದು, ಮತ್ತೆ ತನ್ನ ಕರ್ತವ್ಯವದಲ್ಲಿ ತೊಡಗಿಸಿಕೊಳ್ಳಲಿದೆ” ಎಂದು ಹೇಳಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ವಿಡಿಯೋ ಸಾಕಷ್ಟು ಲೈಕ್,ಕಾಮೆಂಟ್ ಹಾಗೂ ಶೇರ್ಗಳನ್ನು ಪಡೆದುಕೊಂಡಿದೆ. ಇದಲ್ಲದೇ ಶ್ವಾನವನ್ನು ಆರೋಗ್ಯವಾಗಿ ನೋಡಿಕೊಳ್ಳಿ ಎಂದು ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:57 pm, Fri, 19 May 23