Video: ಹುಲಿಯಣ್ಣನ ಮೈ ಮೇಲೆ ಒರಗಿ ವಿಶ್ರಾಂತಿ ಪಡೆದ ಸಿಂಹ

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಕುತೂಹಲಕಾರಿ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ನೀವು ಹಿಂದೆಂದೂ ನೋಡಿರದ ಅಪರೂಪದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಕಾಡಿನ ರಾಜ ಸಿಂಹ ಹಾಗೂ ಹುಲಿಯು ಪರಸ್ಪರ ಒರಗಿಕೊಂಡು ವಿಶ್ರಾಂತಿ ಪಡೆದ ವಿಡಿಯೋ ಇದಾಗಿದೆ. ಈ ಅಪರೂಪದ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

Video: ಹುಲಿಯಣ್ಣನ ಮೈ ಮೇಲೆ ಒರಗಿ ವಿಶ್ರಾಂತಿ ಪಡೆದ ಸಿಂಹ
ವೈರಲ್ ವಿಡಿಯೋ
Image Credit source: Twitter

Updated on: Jul 24, 2025 | 12:39 PM

ಕಾಡಿನ ರಾಜ ಸಿಂಹ (lion) ನಾವೆಲ್ಲರೂ ಅಂದುಕೊಂಡಂತೆ ಇದು ಬಲಿಷ್ಠ ಪ್ರಾಣಿ. ಆಹಾರಕ್ಕಾಗಿ ಕಾಡಿನ ಇತರ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುತ್ತವೆ. ಇವುಗಳ ಘರ್ಜನೆಯನ್ನು ಕೇಳಿದ್ರೆ ಸಾಕು ಇತರ ಪ್ರಾಣಿಗಳು ಓಡಿ ಹೋಗುತ್ತವೆ. ಹೀಗೆ ಕಾಡಿನ ರಾಜ ಇತರ ಪ್ರಾಣಿಗಳ ಮೇಲೆ ಅಟ್ಯಾಕ್‌ ಮಾಡುವಂತಹ ಶಾಕಿಂಗ್‌ ದೃಶ್ಯಗಳನ್ನು ನೋಡಿರುತ್ತೀರಿ ಅಲ್ವಾ. ಆದರೆ ಇತರ ಪ್ರಾಣಿಗಳ ಜೊತೆಗೆ ಕುಳಿತು ವಿಶ್ರಾಂತಿ ಪಡೆಯುವ ದೃಶ್ಯವನ್ನು ನೀವು ನೋಡಿರಲು ಸಾಧ್ಯವೇ ಇಲ್ಲ. ಹೌದು ಇದೀಗ ನೇಚರ್ ಇಸ್ ಆಮೇಜಿಂಗ್ (Nature is Amazing) ಹೆಸರಿನ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸಿಂಹ ಹಾಗೂ ಹುಲಿ ಪರಸ್ಪರ ಮೈ ಮೇಲೆ ಒರಗಿಕೊಂಡು ಮಲಗಿ ವಿಶ್ರಾಂತಿ ಪಡೆದುಕೊಂಡಿದೆ. ಈ ಬಾಂಧವ್ಯ ಸಾರುವ ಅಪರೂಪದ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

@AMAZING NATURE ಹೆಸರಿನ ಎಕ್ಸ್ ಖಾತೆಯಲ್ಲಿ ಸಿಂಹ ಹಾಗೂ ಹುಲಿಯು ಜೊತೆಗೆ ಇರುವ ವಿಡಿಯೋ ಶೇರ್ ಮಾಡಿಕೊಂಡು ಹುಲಿಗಳು ಒಂಟಿ ಪ್ರಾಣಿಗಳು; ಅವುಗಳಿಗೆ ವಿಶಾಲವಾದ ವೈಯಕ್ತಿಕ ಸ್ಥಳಾವಕಾಶ ಬೇಕು. ಆದರೆ ಈ ಸಿಂಹಗಳು ಅಂಟಿಕೊಂಡು ಬದುಕುವ ಸಾಮಾಜಿಕ ಪ್ರಾಣಿಗಳು” ಎಂಬ ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಸಿಂಹವೊಂದು ಹುಲಿಯ ಹತ್ತಿರ ಬಂದು ಪ್ರೀತಿಯಿಂದ  ಅದರ ಮೈ ಮೇಲೆ ಒರಗಿಕೊಂಡು ವಿಶ್ರಾಂತಿ ಪಡೆದುಕೊಂಡಿರುವುದನ್ನು ಕಾಣಬಹುದು.

ಇದನ್ನೂ ಓದಿ
ಶ್ವಾನ ಪ್ರಿಯರೇ ಹುಷಾರ್! ಸಾಕು ನಾಯಿ ನೆಕ್ಕಿದ್ದಕ್ಕೆ ಮಹಿಳೆ ಸಾವು
ಈಕೆ ನನಗೆ ಸಿಕ್ಕ ವರ : ಈ ವೃದ್ಧ ದಂಪತಿಯ ಶುದ್ಧ ಪ್ರೀತಿ ನೋಡಿ
ಹೊಸ ವಾಹನದ ಕೆಳಗೆ ನಿಂಬೆ ಹಣ್ಣು ಇಡೋದು ಯಾಕೆ ಗೊತ್ತಾ? ಇದೆ ನೋಡಿ ಕಾರಣ
ಮೊಬೈಲ್‌ ನೋಡುತ್ತಾ ಕುಳಿತು ಮೈ ಮರೆತ್ರೆ ಏನಾಗುತ್ತೆ ಅನ್ನೋದನ್ನು ನೋಡಿ

ಇದನ್ನೂ ಓದಿ: Video: ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿ, ಏನಾಯ್ತು ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಜುಲೈ 22 ರಂದು ಶೇರ್ ಮಾಡಲಾದ ಈ ವಿಡಿಯೋ ಈವರೆಗೆ 3.6 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ನಾನು ಹಅವರಿಬ್ಬರೂ ಶತ್ರುಗಳು ಎಂದುಕೊಂಡಿದ್ದೆ, ಆದರೆ ಮಿತ್ರರೆನ್ನುವುದು ಇಂದು ತಿಳಿಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ಅಪರೂಪದ ದೃಶ್ಯವು ಮುದ್ದಾಗಿದೆ ಎಂದಿದ್ದಾರೆ. ಆಸಕ್ತಿದಾಯಕ ವಿಡಿಯೋ, ಹುಲಿಗಳು ನಿಜಕ್ಕೂ ಒಂಟಿಯಾಗಿರುತ್ತವೆ ಹಾಗೂ ಪ್ರಾದೇಶಿಕವಾಗಿರುತ್ತವೆ. ಆದರೆ ಸಿಂಹಗಳು ಸಾಮಾಜಿಕವಾಗಿರುತ್ತವೆ. ಪ್ರತಿಯೊಂದು ಜಾತಿಯೂ ತನ್ನದೇ ಆದ ವಿಶಿಷ್ಟ ವ್ಯಕ್ತಿತ್ವ ಮತ್ತು ಸಾಮಾಜಿಕ ರಚನೆಯನ್ನು ಹೊಂದಿದೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Thu, 24 July 25