ಅಂತರ್ಜಾಲದಲ್ಲಿ ಪ್ರಾಣಿ ಪ್ರಪಂಚದ ವಿಡಿಯೊಗಳು ಸಾಕಷ್ಟು ವೈರಲ್ ಆಗುತ್ತವೆ. ಅದರಲ್ಲೂ ಸಾಮಾನ್ಯವಾಗಿ ಮನುಷ್ಯನಿಗೆ ಕಾಣ ಸಿಗದ ಜೀವಿಗಳ ಕುರಿತು ಎಲ್ಲರಿಗೂ ಆಸಕ್ತಿ ಹೆಚ್ಚು. ಆದ್ದರಿಂದಲೇ ಸಿಂಹ, ಚಿರತೆ, ಹುಲಿ ಮೊದಲಾದ ಪ್ರಾಣಿಗಳು ನೆಟ್ಟಿಗರ ಕುತೂಹಲ ಕೆರಳಿಸುತ್ತವೆ. ಅದರಲ್ಲೂ ಅಂತಹ ಪ್ರಾಣಿಗಳ ತಮಾಷೆಯ ವಿಡಿಯೊವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದನ್ನು ನೋಡಿ, ನಕ್ಕು ಹಗುರಾಗುತ್ತಾರೆ. ಅಂತದ್ದೇ ಒಂದು ವಿಡಿಯೊ ಇಲ್ಲಿದೆ. ಕಾಡಿನ ರಾಜ ಸಿಂಹ, ಆಯತಪ್ಪಿ ನೀರಿಗೆ ಬಿದ್ದರೆ ಏನಾಗುತ್ತದೆ? ಇಲ್ಲಿದೆ ನೋಡಿ.
ಈ ವಿಡಿಯೊ ಜರ್ಮನ್ ಮೃಗಾಲಯದ್ದು ಎನ್ನಲಾಗಿದ್ದು, ಎರಡು ಸಿಂಹಗಳು ಅವುಗಳಿಗೆ ಈಜಲೆಂದು ನಿರ್ಮಿಸಿರುವ ಕೊಳದ ದಡದಲ್ಲಿ ಓಡಾಡುತ್ತಿರುತ್ತವೆ. ಆದರೆ ಎಲ್ಲೋ ನೋಡುತ್ತಾ ತೆರಳುತ್ತಿದ್ದ ಒಂದು ಸಿಂಹ, ಆಯ ತಪ್ಪಿ ನೀರಿನೊಳಗೆ ಬೀಳುತ್ತದೆ. ಅದು ಬಿದ್ದದ್ದು ಮತ್ತೊಂದು ಸಿಂಹಕ್ಕೆ ಗಾಬರಿಯಾಗುತ್ತದೆ. ನೀರಿನತ್ತ ಬಗ್ಗಿ ಏನಾಯಿತು ಎಂದು ನೋಡುತ್ತದೆ. ನಂತರ ನೀರಿನಲ್ಲಿದ್ದ ಸಿಂಹ ಈಜುತ್ತಾ ಬಂದು ದಡ ಸೇರಿದೆ. ಸಿಂಹದ ಈ ವಿಡಿಯೊ ಸದ್ಯ ವೈರಲ್ ಆಗಿದೆ.
ವಿಡಿಯೊ ಇಲ್ಲಿದೆ:
What do you mean I fell? I was just going for a swim ??❤️ pic.twitter.com/8ulKR5xtP9
— ❤️ A page to make you smile ❤️ (@hopkinsBRFC21) September 19, 2021
ಈ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ಸಾವಿರಾರು ಜನರು ಇದನ್ನು ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ಸಿಂಹ ಭಯಗೊಳ್ಳುವುದನ್ನು ತಾನು ನೋಡಿಯೇ ಇರಲಿಲ್ಲ. ಆದರೆ ದಡದಲ್ಲಿ ನಿಂತಿದ್ದ ಸಿಂಹದ ನಡೆ ಆಶ್ಚರ್ಯ ಉಂಟುಮಾಡಿದೆ ಎಂದಿದ್ದಾರೆ. ಮತ್ತಷ್ಟು ಜನ ಇದು ತಮಾಷೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಹಲವರು ಇದು ಮೃಗಾಲಯಗಳಲ್ಲಿ ಕಂಡುಬರುವ ಅತ್ಯಂತ ಅಪರೂಪದ ದೃಶ್ಯ ಎಂದು ಬರೆದಿದ್ದಾರೆ.
ಇದನ್ನೂ ಓದಿ:
ಶಿವಮೊಗ್ಗ: ಕಡಜದ ಹುಳು ಕಚ್ಚಿ ಇಬ್ಬರು ಮೃತ
ಅಫ್ಘಾನ್-ತಜಿಕಿಸ್ತಾನ್ ಗಡಿಯಲ್ಲಿ ಆತ್ಮಾಹುತಿ ಬಾಂಬರ್ಗಳ ಬೆಟಾಲಿಯನ್ ನಿಯೋಜಿಸುವುದಾಗಿ ಹೇಳಿದ ತಾಲಿಬಾನ್