ಈ ಬೆಕ್ಕುಗಳು ಹಾಗೇನೆ ಅಲ್ವಾ ಅವುಗಳಿಗೆ ಇತರ ಸಣ್ಣಪುಟ್ಟ ಜೀವಿಗಳ ಜೊತೆಗೆ ಚೆಲ್ಲಾಟ ಆಡುವುದೆಂದರೆ ಎಲ್ಲಿಲ್ಲದ ಸಂತೋಷ. ಸಣ್ಣ ಕೀಟಗಳಿರಲಿ, ಇಲಿಗಳಿರಲಿ, ಸಣ್ಣಪುಟ್ಟ ಹಾವುಗಳಿರಲಿ ಅಥವಾ ಹಕ್ಕಿಗಳಿರಲಿ ಅವುಗಳನ್ನೆಲ್ಲಾ ತನ್ನ ಬುದ್ಧಿವಂತಿಕೆಯಿಂದ ಹಿಡಿಡು, ಅವುಗಳಿಗೆ ಕೀಟಲೇ ಮಾಡಿ ಕೊನೆಗೆ ಈ ಜೀವಿಗಳನ್ನು ಕೊಂದುಹಾಕಿಬಿಡುತ್ತವೆ. ಬೆಕ್ಕುಗಳ ಚೆಲ್ಲಾಟದ ಕುರಿತ ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತದೆ. ಅದೇ ರೀತಿ ಇಲ್ಲೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಪುಟ್ಟ ಹಕ್ಕಿಯೊಂದು ಬೆಕ್ಕುಗಳ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ತಾಳ್ಮೆಯಿಂದ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಕೊನೆಯಲ್ಲಿ ಬೆಕ್ಕುಗಳ ಬಲೆಯಿಂದ ಪುಟ್ಟ ಹಕ್ಕಿ ತಪ್ಪಿಸಿಕೊಡು ಹೋಗುತ್ತೆ. ಬೆಕ್ಕುಗಳ ದಾಳಿಯಿಂದ ತನ್ನ ಪ್ರಾಣವನ್ನು ಉಳಿಸಿಕೊಂಡ ಹಕ್ಕಿಯ ಬುದ್ದಿವಂತಿಕೆಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
@gunsnrosesgirl3 ಎಂಬ X ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಮೂರು ಬೆಕ್ಕುಗಳ ನಡುವೆ ಸಿಕ್ಕಿಹಾಕಿಕೊಂಡಂತಹ ಪುಟ್ಟ ಹಕ್ಕಿಯೊಂದು ತನ್ನ ಬುದ್ಧಿವಂತಿಕೆಯಿಂದ ಆ ಬೆಕ್ಕುಗಳಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಹೋಗುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Bird manages to escape a group of cats by playing statue
Watch to the endpic.twitter.com/Kk4wsyE5yd
— Science girl (@gunsnrosesgirl3) November 29, 2023
1.45 ನಿಮಿಷಗಳ ಈ ವಿಡಿಯೋದಲ್ಲಿ ಮೊದಲಿಗೆ ಹಕ್ಕಿಯೊಂದು ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು. ಆ ಹಕ್ಕಿಯನ್ನು ಹೇಗಾದರೂ ಬೇಟೆಯಾಡಿ ಅದರೊಂದಿಗೆ ಚೆಲ್ಲಾಟವಾಡಬೇಕಲ್ಲವೇ ಎನ್ನುತ್ತಾ ಎರಡು ಬೆಕ್ಕುಗಳು ಅಲ್ಲಿಯೇ ಹೊಂಚು ಹಾಕಿ ಕುಳಿತುಕೊಳ್ಳುತ್ತವೆ. ಸ್ವಲ್ಪ ಹೊತ್ತಿನ ಬಳಿಕ ಈ ಎರಡೂ ಬೆಕ್ಕುಗಳು ಹಕ್ಕಿಯ ಬಳಿ ಹೋಗಿ ಅದನ್ನು ಮುಟ್ಟಲು ಪ್ರಯತ್ನಿಸುತ್ತದೆ. ಅಷ್ಟರಲ್ಲಿ ಇನ್ನೊಂದು ಬೆಕ್ಕು ಕೂಡಾ ಅಲ್ಲಿಗೆ ಬರುತ್ತದೆ. ಈಗೇನಾದರೂ ನಾನು ತುಟಿಕ್ ಪಿಟಿಕ್ ಎಂದರೆ ನನ್ನ ಕಥೆ ಮುಗಿತೆಂದೇ ಅರ್ಥ ಎಂದು ಹಕ್ಕಿ ತನ್ನ ಮನಸ್ಸಿನಲ್ಲಿಯೇ ಮಾತಾಡಿಕೊಳ್ಳುತ್ತಾ, ತಾಳ್ಮೆ ಮತ್ತು ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಈ ಪುಟ್ಟ ಹಕ್ಕಿ ಸ್ಥಿರವಾಗಿ ಸ್ಟ್ಯಾಚ್ಯೂ ತರಹ ನಿಂತ ಜಾಗದಲ್ಲಿಯೇ ಅಲ್ಲಾಡದೆ ನಿಂತು ಬಿಡುತ್ತದೆ. ಇದರಿಂದ ಫುಲ್ ಕನ್ಫ್ಯೂಸ್ ಆದ ಬೆಕ್ಕುಗಳು ಇದಾವುದೋ ನಿರ್ಜೀವ ವಸ್ತುವೇ ಇರಬೇಕು ಎಂದು ಭಾವಿಸುತ್ತವೆ. ಹೀಗೆ ಇದೇ ಗೊಂದಲದಿಂದ ಸುಮಾರು ಹೊತ್ತುಗಳ ಕಾಲ ಹಕ್ಕಿಯು ಸುತ್ತಲೂ ಮೂರು ಬೆಕ್ಕುಗಳು ಓಡಾಡುತ್ತವೆ. ಆದ್ರೆ ಹಕ್ಕಿ ಮಾತ್ರ ನಿಂತ ಜಾಗದಿಂದ ಕದಲಲಿಲ್ಲ. ಕೊನೆಯಲ್ಲಿ ಬೆಕ್ಕುಗಳು ದೂರ ಸರಿಯುತ್ತಿದ್ದಂತೆ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ಹಕ್ಕಿ ಅಲ್ಲಿಂದ ಥಟ್ಟನೆ ಹಾರಿ ಹೋಗುವುದನ್ನು ಕಾಣಬಹುದು.
ಇದನ್ನೂ ಓದಿ: ಡ್ರೈವರಣ್ಣ ಬಸ್ ನಿಲ್ಸೋ, ನಾನು ಬರ್ತೀನಿ, ಕ್ವಾಟ್ಲೆ ಕೊಟ್ಟ ಗಜರಾಜ
ನವೆಂಬರ್ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಲೈಕ್ಸ್ಗಳನ್ನು ಪಡದುಕೊಂಡಿದೆ. ಒಬ್ಬ ಬಳಕೆದಾರರು “ಈ ವಿಡಿಯೋ ಉತ್ತಮ ಸಂದೇಶವನ್ನು ಹೊಂದಿದೆ- ಸಮಸ್ಯೆಗಳು ಬಂದಾಗ ಶಾಂತವಾಗಿ ತಾಳ್ಮೆಯಿಂದ ವರ್ತಿಸಬೇಕು ಆಗ ಮಾತ್ರ ಸಮಸ್ಯೆಯನ್ನು ಜಯಿಸಲು ಸಾಧ್ಯವಾಗುತ್ತದೆʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼವಿಡಿಯೋ ಮಾಡುವ ಬದಲು ಹಕ್ಕಿಗೆ ಸಹಾಯ ಮಾಡಬಹುದಿತ್ತಲ್ವಾʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹಕ್ಕಿಯ ತಾಳ್ಮೆ ಮತ್ತು ಬುದ್ಧಿವಂತಿಕೆಯನ್ನು ಮೆಚ್ಚಲೇಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ