Video : ಕಾರಿನ ಸೈರನ್‌ಗೆ ಸಖತ್ ಸ್ಟೆಪ್ ಹಾಕಿದ ಪುಟಾಣಿ

ಪುಟಾಣಿ ಮಕ್ಕಳು ಏನು ಮಾಡಿದರೂ ಚಂದ. ಹೌದು, ಈ ಮುದ್ದಾದ ಮಕ್ಕಳ ಮಾತು ತರಲೆ ತುಂಟಾಟಗಳನ್ನು ಕಣ್ತುಂಬಿಕೊಳ್ಳುವ ಖುಷಿಯೇ ಬೇರೆ. ಅದರಲ್ಲಿ ತನ್ನ ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ ನೃತ್ಯ ಮಾಡುತ್ತಿದ್ದರೆ ನೋಡಲು ಎರಡು ಕಣ್ಣು ಸಾಲದು. ಆದರೆ ಇದೀಗ ಪುಟಾಣಿಯೊಂದು ಕಾರಿನ ಸೈರನ್‌ ಕೇಳುತ್ತಿದ್ದಂತೆ ಮುದ್ದಾಗಿ ಡ್ಯಾನ್ಸ್‌ ಮಾಡಿದ್ದು, ಈ ವಿಡಿಯೋ ತುಣುಕು ನೋಡಿ ನೆಟ್ಟಿಗರು ಕಳೆದುಹೋಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿವೆ.

ಮುಗ್ಧತೆ (innocence) ಎಂದಾಗ ಮೊದಲು ನೆನಪಿಗೆ ಬರುವುದೇ ಈ ಮಕ್ಕಳು. ಜಗತ್ತಿನ ಪರಿವೆ ಇಲ್ಲದೇ ತಮಗೆ ತೋಚಿದ್ದನ್ನು ಮಾಡುವ, ಹೇಳುವ ಹಾಗೂ ತುಂಟಾವಾಡುವ ಕಂದಮ್ಮಗಳನ್ನು ಕಂಡಾಗ ಖುಷಿಯಾಗುತ್ತದೆ. ಈ ಪುಟಾಣಿ (kids)ಗಳು ಮುದ್ದು ಮುದ್ದಾಗಿ ಡ್ಯಾನ್ಸ್‌ ಮಾಡುವುದನ್ನು ನೀವು ನೋಡಿರುತ್ತೀರಿ. ಹಾಡು ಕಿವಿಗೆ ಬೀಳುತ್ತಿದ್ದಂತೆ  ತನಗೆ ತೋಚಿದ್ದಂತೆ ಹೆಜ್ಜೆ ಹಾಕುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿಯ ಡ್ಯಾನ್ಸ್‌ವೊಂದು ಎಲ್ಲರ ಗಮನ ಸೆಳೆದಿದೆ. ಕಾರಿನ ಸೈರನ್‌ ಕೇಳುತ್ತಿದ್ದಂತೆ ಪುಟಾಣಿಯೊಂದು ಡ್ಯಾನ್ಸ್‌ ಮಾಡಲು ಶುರು ಮಾಡಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರ ಹೃದಯವನ್ನು ಗೆದ್ದುಕೊಂಡಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?
@sarbas aero ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಪುಟಾಣಿಯೊಂದು ತಂದೆ ಕಾರಿನ ಸೈರನ್‌ನ್ನು ಸಂಗೀತವೆಂದು ಭಾವಿಸಿದೆ. ಈ ಸೈರನ್‌ ಕೇಳುತ್ತಿದ್ದಂತೆ ಮಗುವೊಂದು ತನ್ನ ಒಂದು ಕೈಯನ್ನು ಮೇಲಕ್ಕೆತ್ತಿ ಡ್ಯಾನ್ಸ್‌ ಮಾಡುತ್ತಿರುವುದನ್ನು ನೋಡಬಹುದು. ಸೈರನ್‌ ಆಫ್ ಆಗುವವರೆಗೂ ಹೆಜ್ಜೆ ಹಾಕಿದ್ದು  ಈ ದೃಶ್ಯವನ್ನು ಮನೆಯವರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ
ರಾಷ್ಟ್ರಗೀತೆಗೆ ಗೌರವ ಕೊಟ್ಟು ದೇಶಭಕ್ತಿ ಮೆರೆದ ಗೋಮಾತೆ
ಇಂತಹ ಮಗಳನ್ನು ಪಡೆದ ಆ ತಂದೆಯೇ ಪುಣ್ಯವಂತ
ಚಿಲ್ಲರೆ ಕಾಸಿನಲ್ಲಿ ಪತ್ನಿಗೆ ಮಂಗಳಸೂತ್ರ ಖರೀದಿಸಲು ಬಂದ ವೃದ್ಧ
ಅಪರಿಚಿತ ವ್ಯಕ್ತಿಗೆ ಊಟ ಹಾಕಿ ಸತ್ಕರಿಸಿದ ಬೆಂಗಳೂರಿನ ಕುಟುಂಬ

ಇದನ್ನೂ ಓದಿ : Video : ಈ ಕುಟುಂಬಕ್ಕೆ 56 ವರ್ಷಗಳ ಬಳಿಕ ಹೆಣ್ಣು ಮಗುವಿನ ಆಗ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು 19 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ಬಳಕೆದಾರರು ಮೆಚ್ಚುಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ಸಣ್ಣ ಸಣ್ಣ ವಿಷಯದಲ್ಲಿ ಖುಷಿ ಕಾಣಬೇಕೆಂದು ಇದಕ್ಕೆ ಹೇಳೋದು ಎಂದಿದ್ದಾರೆ. ಇನ್ನೊಬ್ಬರು, ಹೋಮ್ ಮೇಡ್ ಡಿಜೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪುಟ್ಟ ಮಕ್ಕಳ ಡ್ಯಾನ್ಸ್‌ ವಿಡಿಯೋ ನೋಡಿದಾಗ ಅವರ ಮುಗ್ಧತೆ ಎಷ್ಟಿದೆ ಎಂದು ತಿಳಿಯುತ್ತದೆ ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:05 am, Fri, 20 June 25