Video: ಪ್ರಶ್ನೆಗೆ ಉತ್ತರ ಹೇಳಂದ್ರೆ ಹೊಟ್ಟೆ ನೋವೆಂದು ಕುಂಟು ನೆಪ ಹೇಳಿದ ಪುಟಾಣಿ, ಮುಂದೇನಾಯ್ತು ನೋಡಿ

ಪುಟಾಣಿಗಳೇ ಹಾಗೆನೇ ಬಿಡಿ, ಹೋಮ್ ವರ್ಕ್ ಮಾಡೋಕೆ ಕುಳಿತರಂತೂ ನಿದ್ದೆ ಬರುತ್ತದೆ ಎಂದು ಕಥೆ ಹೇಳ್ತಾರೆ. ಪುಸ್ತಕ ಕಂಡರೆ ಓಡಿ ಹೋಗ್ತಾರೆ. ಹೆತ್ತವರಿಗಷ್ಟೇ ಅಲ್ಲ, ಶಿಕ್ಷಕರಿಗೂ ಕೂಡ ಈಗಿನ ಮಕ್ಕಳನ್ನು ಸಂಭಾಳಿಸಿಕೊಂಡು ಹೋಗುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ಇದೀಗ ಈ ವಿಡಿಯೋ ನೋಡಿದ ಮೇಲೆ ನಿಮಗೂ ಕೂಡ ಹಾಗೆಯೇ ಅನಿಸಬಹುದು. ಪುಟಾಣಿಯೊಂದು ಟೀಚರ್ ಹೇಳಿದ್ದನ್ನು ಮಾಡಲು ಒಪ್ಪದೇ ಕುಂಟು ನೆಪ ಹೇಳಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Video: ಪ್ರಶ್ನೆಗೆ ಉತ್ತರ ಹೇಳಂದ್ರೆ ಹೊಟ್ಟೆ ನೋವೆಂದು ಕುಂಟು ನೆಪ ಹೇಳಿದ ಪುಟಾಣಿ, ಮುಂದೇನಾಯ್ತು ನೋಡಿ
ವೈರಲ್‌ ವಿಡಿಯೋ
Image Credit source: Facebook

Updated on: Mar 10, 2026 | 12:30 PM

ಈಗಿನ ಕಾಲದ ಮಕ್ಕಳು (children) ದೊಡ್ಡವರನ್ನು ಕೂಡ ಯಾಮಾರಿಸಿ ಬಿಡುತ್ತಾರೆ. ಶಾಲೆಗೆ ಹೋಗೋದು, ಹೋಮ್ ವರ್ಕ್ (home work) ಮಾಡುವ ವಿಷ್ಯದಲ್ಲಿ ನೆಪ ಹೇಳಿ ತಪ್ಪಿಸಿಕೊಳ್ತಾರೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ಶಾಲೆಯಲ್ಲಿ ಟೀಚರ್ ಜನವರಿ ಫೆಬ್ರವರಿ ಹೇಳು ಎನ್ನುತ್ತಿದ್ದಂತೆ ಪುಟ್ಟ ಹುಡುಗಿಯೂ ಹೊಟ್ಟೆ ನೋವಾಗ್ತಿದೆ ಎಂದು ಹೇಳಿ ನೆಪ ಹೇಳಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಪುಟಾಣಿಯ ನಟನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Royal Ranga ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟ್ಟ ಹುಡುಗಿ ಹಾಗೂ ಶಿಕ್ಷಕಿಯ ನಡುವಿನ ಸಂಭಾಷಣೆಯನ್ನು ಕಾಣಬಹುದು. ಈ ವಿಡಿಯೋದಲ್ಲಿ ಶಿಕ್ಷಕಿಯೂ, ಪುಟ್ಟ ಹುಡುಗಿಗೆ ಜನವರಿ, ಫೆಬ್ರವರಿ ಸೇರಿದಂತೆ ಹನ್ನೆರಡು ತಿಂಗಳ ಹೆಸರನ್ನು ಹೇಳು ಎನ್ನುವುದನ್ನು ನೋಡಬಹುದು. ಆದರೆ ಈ ಪುಟಾಣಿಯೂ ಹೊಟ್ಟೆ ನೋವಾಗ್ತಾ ಇದೆ ಎನ್ನುತ್ತಾ ಮುಖ ಸಣ್ಣ ಮಾಡಿದೆ. ಶಿಕ್ಷಕಿಯೂ ನಾನು  ಪ್ರಶ್ನೆ ಕೇಳಿದ್ದಕ್ಕೆ ಹೊಟ್ಟೆ ನೋವಾಗ್ತಾ ಇದೆಯೇ ಎಂದು ಕೇಳುತ್ತಿದ್ದಂತೆ ಪುಟಾಣಿಯೂ ಹೌದು ಎಂದು ತಲೆ ಅಲ್ಲಾಡಿಸಿದೆ. ಆ ಬಳಿಕ ಅಲ್ಲೇ ಇದ್ದವರ ಬಳಿ ಇವಳಿಗೆ ಒಂದು ಮಾತ್ರೆ ಕೊಡಿ ಎಂದಿದ್ದಾರೆ. ಈ ಪುಟ್ಟ ಬಾಲಕಿಯೂ ಜನವರಿ, ಫೆಬ್ರವರಿ ಹೇಳಲು ಶುರು ಮಾಡಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಬಿಳಿ ಮಹಿಳೆಯನ್ನು ಕಂಡೊಡನೆ ಅಳುತ್ತಾ ಓಡಲು ಶುರು ಮಾಡಿದ ಆಫ್ರಿಕನ್ ಪುಟಾಣಿಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಕಳ್ಳಿ ಇವಳು ಎಂದರೆ, ಮತ್ತೊಬ್ಬರು ಮುಗ್ಧ ಮನಸ್ಸು ಎಂದಿದ್ದಾರೆ. ಇನ್ನೊಬ್ಬರು, ಈಗಿನ ಪುಟಾಣಿಗಳು ನಾಟಕ ಮಾಡೋದ್ರಲ್ಲಿ ಜಾಣರು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us