Video: ಅಮ್ಮ ಬೈದದ್ದಕ್ಕೆ ಮನೆಯ ಮುದ್ದಿನ ಶ್ವಾನದ ಬಳಿ ಅಳುತ್ತಾ ಕಂಪ್ಲೇಂಟ್ ಹೇಳಿದ ಪುಟಾಣಿ

ನಿಯತ್ತು, ನಿಷ್ಠೆ ಎಂದಾಗ ನೆನಪಿಗೆ ಬರುವುದೇ ಶ್ವಾನ. ಸೋಶಿಯಲ್ ಮೀಡಿಯಾದಲ್ಲಿ ಶ್ವಾನದ ಮುದ್ದು ಮುದ್ದಾದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಮ್ಮ ಬೈದದ್ದಕ್ಕೆ ಪುಟಾಣಿಯೂ ಅಳುತ್ತಾ ಕೂತಿದ್ದು, ಮನೆಯ ಮುದ್ದಿನ ಶ್ವಾನವು ಸಮಾಧಾನ ಪಡಿಸಿದೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ

Video: ಅಮ್ಮ ಬೈದದ್ದಕ್ಕೆ ಮನೆಯ ಮುದ್ದಿನ ಶ್ವಾನದ ಬಳಿ ಅಳುತ್ತಾ ಕಂಪ್ಲೇಂಟ್ ಹೇಳಿದ ಪುಟಾಣಿ
ವೈರಲ್ ವಿಡಿಯೋ
Image Credit source: Instagram

Updated on: Feb 01, 2026 | 1:31 PM

ಶ್ವಾನಗಳ (Dogs) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿಯೇ ಇಲ್ಲ. ಮನೆಯಲ್ಲಿ ಮಕ್ಕಳಿದ್ರೆ ಅವುಗಳ ಪಾಲಿಗೆ ಈ ಶ್ವಾನಗಳು ಬಾಡಿ ಗಾರ್ಡ್ ನಂತೆ ಇರುತ್ತದೆ. ಪುಟಾಣಿಗಳು ಅಪಾಯಕ್ಕೆ ಸಿಲುಕಿಕೊಂಡ್ರೆ ರಕ್ಷಿಸುವುದರಲ್ಲಿ ಈ ಶ್ವಾನಗಳು ಎತ್ತಿದ ಕೈ. ಹೀಗಾಗಿ ಪುಟಾಣಿ ಮಕ್ಕಳು ಹಾಗೂ ಶ್ವಾನಗಳ ಸುಂದರ ಬಾಂಧವ್ಯಕ್ಕೆ ಇಂತಹ ದೃಶ್ಯಗಳು ಸಾಕ್ಷಿಯಾಗುತ್ತವೆ. ಆದರೆ ಪುಟ್ಟ ಹುಡುಗಿಯೊಬ್ಬಳು (little girl) ಅಮ್ಮನ ಕೈಯಲ್ಲಿ ಬೈಗುಳ ತಿಂದು ಅಳುತ್ತಾ ಕುಳಿತಿದ್ದರೆ, ಮನೆಯ ಮುದ್ದಿನ ಶ್ವಾನ ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಹೌದು,  ಅಮ್ಮನ ಬಗ್ಗೆ ಪುಟಾಣಿಯೂ ದೂರು ಹೇಳುತ್ತಿದ್ದಂತೆ ಶ್ವಾನವೂ ಪಕ್ಕದಲ್ಲೇ ಕುಳಿತು ಸಮಾಧಾನ ಪಡಿಸಿದ್ದಂತಿದೆ ಈ ದೃಶ್ಯ. ಈ ಶುದ್ಧ ಬಾಂಧವ್ಯಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದು, ಈ ಕ್ಲಿಪ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚೀನಾ ಡೈರೀಸ್ 2025 (chinadairies) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟಾಣಿಯೊಂದು ಅಮ್ಮನ ಕೈಯಲ್ಲಿ ಬೈಗುಳ ತಿಂದು ಅಳುತ್ತಾ ಕುಳಿತಿದೆ. ಈ ಪುಟಾಣಿಯೂ ಶ್ವಾನದ ಬಳಿ ಅಮ್ಮನ ಬಗ್ಗೆ ಕಂಪ್ಲೇಂಟ್ ಹೇಳಿದ್ದು ಶ್ವಾನವು ಅಪ್ಪಿಕೊಂಡು ಸಮಾಧಾನ ಪಡಿಸಿರುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುದ್ದಿನ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯಲು 15 ಲಕ್ಷ ರೂ. ಖರ್ಚು ಮಾಡಿದ ದಂಪತಿ!

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ದೃಶ್ಯ ಮುದ್ದಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇಬ್ಬರದ್ದು ಮುಗ್ಧ ಹಾಗೂ ಶುದ್ಧ ಮನಸ್ಸು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ವಿಡಿಯೋ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us