Video: ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಭರತನಾಟ್ಯ ಮಾಡಿದ ಪುಟ್ಟ ಕಂದಮ್ಮ

ಪುಟಾಣಿಗಳು ಏನು ಮಾಡಿದರೂ ನೋಡೋಕೆ ಚಂದ. ಈ ಮುದ್ದು ಮಕ್ಕಳ ಡ್ಯಾನ್ಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಸದಾ ವೈರಲ್ ಆಗುತ್ತಿರುತ್ತವೆ. ಮಕ್ಕಳು ಯಾವುದೇ ಹಿಂಜರಿಕೆಯಿಲ್ಲದೆ, ಮುಗ್ಧವಾಗಿ ಕುಣಿಯುವುದನ್ನು ನೋಡುವುದೇ ಒಂಥರಾ ಖುಷಿ. ಇದೀಗ ಪುಟ್ಟ ಹುಡುಗಿಯೊಬ್ಬಳು ಭರತನಾಟ್ಯ ಸ್ಟೆಪ್ ಹಾಕಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಭರತನಾಟ್ಯ ಮಾಡಿದ ಪುಟ್ಟ ಕಂದಮ್ಮ
ವೈರಲ್‌ ವಿಡಿಯೋ
Image Credit source: Instagram

Updated on: Jun 16, 2026 | 4:09 PM

ಪುಟಾಣಿಗಳೇ (little kids) ಹಾಗೆ, ಹಾಡು ಕೇಳಿದ ಕೂಡಲೇ ಯಾವುದೇ ಹಿಂಜರಿಕೆಯಿಲ್ಲದೆ ಸ್ಟೆಪ್ ಹಾಕಲು ಶುರು ಮಾಡ್ತಾರೆ. ಇನ್ನು ಸ್ಟೇಜ್ ಮೇಲೆ ಯಾರಾದ್ರೂ ಡ್ಯಾನ್ಸ್ ಮಾಡುತ್ತಿದ್ದರೆ ವೇದಿಕೆಯ ಮುಂಭಾಗದಲ್ಲಿ ಪುಟ್ಟ ಮಕ್ಕಳು ಡ್ಯಾನ್ಸ್ ಮಾಡ್ತಾರೆ. ಇಂತಹ ಸಾಕಷ್ಟು ವಿಡಿಯೋ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಪುಟಾಣಿಯೊಂದು ತನ್ನ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಭರತನಾಟ್ಯ ಮಾಡುತ್ತಿದೆ. ಈ ವಿಡಿಯೋ ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.

ನ್ಯಾಹ ಗೌರಂಗಿ (Nyha Gaurangi) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪುಟಾಣಿಯೊಂದು ತನ್ನ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಭರತನಾಟ್ಯ ಸ್ಟೆಪ್ ಹಾಕುತ್ತಿರುವುದನ್ನು ಕಾಣಬಹುದು. ಈ ಪುಟಾಣಿಯ ತಾಯಿ ತನ್ನ ಮಗಳನ್ನು ಡ್ಯಾನ್ಸ್ ಮಾಡಲು ಹುರಿದುಂಬಿಸಿದ್ದಾಳೆ. ಆ ಬಳಿಕ ಮೆಲ್ಲನೆ ಡ್ಯಾನ್ಸ್ ಮಾಡುತ್ತಾ ಬೀಳುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಫ್ರಿಡ್ಜ್‌ನಲ್ಲಿದ್ದ ಮೊಸರನ್ನು ಕದ್ದು ತಿಂದ ಪುಟಾಣಿ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪ್ರೊಫೆಷನಲ್ ಡ್ಯಾನ್ಸರ್ ಎಂದರೆ, ಮತ್ತೊಬ್ಬರು ಮತ್ತೆ ಮತ್ತೆ ನೋಡಬೇಕೆನಿಸುವ ವಿಡಿಯೋ ಎಂದು ಹೇಳಿದ್ದಾರೆ. ಇನ್ನೊಬ್ಬರು, ತಾಯಿ ಮೊದಲ ಶಿಕ್ಷಕಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:08 pm, Tue, 16 June 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us