Video: ನನ್ನ ಕ್ಷಮಿಸಿ ಬಿಡಮ್ಮ, ಐಸ್ ಕ್ರೀಮ್ ನೋಡಿ ಆಸೆ ಆಯ್ತು; ಅಪರಿಚಿತ ಮಹಿಳೆಯ ಕೈಯಲ್ಲಿದ್ದ ಐಸ್ ಕ್ರೀಮ್ ರುಚಿ ಸವಿದ ಕಂದಮ್ಮ
ಈ ಪುಟಾಣಿಗಳು ಏನ್ ಮಾಡಿದ್ರೂ ಮುದ್ದಾಗಿ ಕಾಣಿಸುತ್ತದೆ. ಆದರೆ ಕಂದಮ್ಮಗಳು ಮಾಡುವ ಎಡವಟ್ಟುಗಳು ಹೆತ್ತವರನ್ನು ಸಂಕಷ್ಟದಲ್ಲಿ ಸಿಲುಕಿಸುತ್ತದೆ. ಈ ದೃಶ್ಯ ನೋಡಿದ ಮೇಲೂ ನಿಮ್ಗೆ ಹಾಗೆಯೇ ಅನಿಸಬಹುದು. ಪುಟಾಣಿಯೊಂದು ತನ್ನ ಪಕ್ಕದಲ್ಲಿ ನಿಂತಿದ್ದ ಮಹಿಳೆಯ ಕೈಯಲ್ಲಿ ಹಿಡಿದುಕೊಂಡಿದ್ದ ಐಸ್ ಕ್ರೀಮ್‌ನ್ನು ಸವಿದಿದ್ದು, ಮುಂದೆ ಆದದ್ದು ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಐಸ್ ಕ್ರೀಮ್ (Ice Cream) ಎಲ್ಲರಿಗೂ ಇಷ್ಟ. ಹೀಗಾಗಿ ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಬಾಯಿ ಚಪ್ಪರಿಸಿಕೊಂಡು ಐಸ್ ಕ್ರೀಮ್ ತಿಂತಾರೆ. ಮಕ್ಕಳ ಮುಂದೆ ಯಾರಾದ್ರು ಐಸ್ ಕ್ರೀಮ್ ತಿನ್ನುತ್ತಿದ್ದವರೇ ಅವರನ್ನೇ ದಿಟ್ಟಿಸಿ ನೋಡುತ್ತವೆ. ಕೆಲವೊಮ್ಮೆ ಹೆತ್ತವರ ಬಳಿ ನನಗೂ ಐಸ್ ಕ್ರೀಮ್ ಬೇಕು ಎಂದು ಹಠ ಹಿಡಿಯುವುದನ್ನು ನೋಡಿರುತ್ತೀರಿ. ಆದರೆ ಈ ಪುಟಾಣಿ ಮಾತ್ರ ಐಸ್ ಕ್ರೀಮ್ ಕಂಡೊಡನೆ ಹಾಗೆ ಮಾಡಿಲ್ಲ. ತನ್ನ ಪಕ್ಕ ನಿಂತಿದ್ದ ಅಪರಿಚಿತ ಮಹಿಳೆಯ ಕೈಯಲ್ಲಿ ಐಸ್ ಕ್ರೀಮ್ ಇರುವುದನ್ನು ನೋಡಿದ್ದಾಳೆ. ಈ ಪುಟಾಣಿಗೆ (little girl) ಐಸ್ ಕ್ರೀಮ್ ತಿನ್ನಬೇಕು ಎಂದು ಆಸೆಯಾಗಿದೆ. ಹೀಗಾಗಿ ಹಿಂದೆ ಮುಂದೆ ನೋಡದೇ ಆ ಮಹಿಳೆಯ ಕೈಯಲ್ಲಿದ್ದ ಐಸ್ ಕ್ರೀಮ್‌ಗೆ ಬಾಯಿ ಹಾಕಿದ್ದಾಳೆ. ಈ ಪುಟಾಣಿಯ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಪುಟ್ಟ ಕಂದಮ್ಮ ಮಾಡಿದ ಕೆಲಸ ನೋಡಿ ಅಚ್ಚರಿಪಟ್ಟಿದ್ದಾರೆ.
ಐಸ್ ಕ್ರೀಮ್ ಕಂಡೊಡನೆ ಈ ಪುಟಾಣಿ ಮಾಡಿದ್ದೇನು?
funnyvi6eos ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟಾಣಿಯೊಂದು ತನ್ನ ತಾಯಿಯೊಂದಿಗೆ ಬೇಕರಿಗೆ ಹೋಗಿರುವುದನ್ನು ಕಾಣಬಹುದು. ಈ ಪುಟ್ಟ ಹುಡುಗಿಯ ತಾಯಿಯೂ ಮಿಲ್ಕ್ ಶೇಕ್ ಖರೀದಿಸುತ್ತಿರುವುದನ್ನು ಕಾಣಬಹುದು. ಅಲ್ಲೇ ಪಕ್ಕದಲ್ಲಿ ನಿಂತಿದ್ದ ಮಹಿಳೆಯೂ ಐಸ್ ಕ್ರೀಮ್ ಹಿಡಿದು ನಿಂತಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಆದರೆ ಐಸ್ ಕ್ರೀಮ್ ನೋಡಿದ ಪುಟಾಣಿಯೂ ಯಾವುದೇ ಹಿಂಜರಿಕೆಯಿಲ್ಲದೇ ಅದರ ರುಚಿ ಸವಿದಿದೆ, ಇದನ್ನು ನೋಡಿದ ತಾಯಿಗೆ ಗಾಬರಿಯಾಗಿದೆ. ಐಸ್ ಕ್ರೀಮ್ ಹಿಡಿದಿದ್ದ ಮಹಿಳೆಯೂ ಒಂದು ಕ್ಷಣ ಶಾಕ್ ಆದರೂ ಮಗುವಿಗೆ ರೇಗಾಡದೆ ತನ್ನ ಕೈಯಲ್ಲಿದ್ದ ಐಸ್ ಕ್ರೀಮ್ ನೀಡುತ್ತಾಳೆ. ಇತ್ತ ಪುಟಾಣಿಯ ತಾಯಿಗೆ ಇರಿಸುಮುರಿಸು ಆದಂತೆ ಆಗುತ್ತದೆ, ಕೊನೆಗೆ ತನ್ನ ಕೈಯಲ್ಲಿದ್ದ ಮಿಲ್ಕ್ ಶೇಕ್‌ನ್ನು ಆ ಮಹಿಳೆಗೆ ನೀಡುವುದನ್ನು ಕಾಣಬಹುದು.
ಇದನ್ನೂ ಓದಿ:ಮೊದಲ ಬಾರಿಗೆ ಕಿವಿ ಫ್ರೂಟ್ ತಿಂದು ಮುದ್ದಾಗಿ ರಿಯಾಕ್ಷನ್ ಕೊಟ್ಟ ಕಂದಮ್ಮ
ಈ ಮುಗ್ಧ ಹುಡುಗಿಯ ಚೇಷ್ಟೆಯ ವಿಡಿಯೋ ನೆಟ್ಟಿಗರ ಹೃದಯ ಗೆದ್ದುಕೊಂಡಿದ್ದು, 13 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ದೃಶ್ಯ ಜೀವನದಲ್ಲಿ ಅವಕಾಶಗಳನ್ನು ಕಳೆದುಕೊಳ್ಳಬಾರದು ಎಂದು ಕಲಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ದಿನದ ಅತ್ಯಂತ ಸುಂದರ ಕ್ಷಣ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಈ ಪುಟಾಣಿ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಳು. ಮಕ್ಕಳು ಯಾವಾಗ್ಲೂ ತಮಗೆ ಬೇಕಾದ್ದನ್ನು ಮೊದಲು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








