Video: ತನ್ನ ಕಾಲನ್ನು ತಾನೇ ಸ್ಪರ್ಶಿಸಿ ನಮಸ್ಕರಿಸಿಕೊಂಡ ಪುಟಾಣಿ

ಸೋಶಿಯಲ್ ಮೀಡಿಯಾಯಲ್ಲಿ ಮುದ್ದು ಮಕ್ಕಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ದೃಶ್ಯಗಳನ್ನು ಮತ್ತೆ ಮತ್ತೆ ನೋಡಬೇಕೇನಿಸುವುದು ಸಹಜ. ಇದೀಗ ಈ ಪುಟಾಣಿಯೊಂದು ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಪುಟಾಣಿಯೊಂದು ತನ್ನ ಕಾಲನ್ನು ತಾನೇ ಮುಟ್ಟಿಕೊಂಡು ನಮಸ್ಕರಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತನ್ನ ಕಾಲನ್ನು ತಾನೇ ಸ್ಪರ್ಶಿಸಿ ನಮಸ್ಕರಿಸಿಕೊಂಡ ಪುಟಾಣಿ
ವೈರಲ್ ವಿಡಿಯೋ
Image Credit source: Instagram

Updated on: May 26, 2026 | 1:04 PM

ಪುಟಾಣಿಗಳು (little kids) ಏನು ಮಾಡಿದ್ರೂ ಚಂದನೇ. ಕೆಲವೊಮ್ಮೆ ಈ ಪುಟ್ಟ ಮಕ್ಕಳ ನಡೆನುಡಿಯಲ್ಲಿ ಮುಗ್ಧತೆ ಎದ್ದು ಕಾಣುತ್ತದೆ. ಹೆತ್ತವರು ಮಕ್ಕಳಿಗೆ ಏನು ಹೇಳಿಕೊಡುತ್ತಾರೆ ಅದನ್ನು ಚಾಚು ತಪ್ಪದೇ ಕಲಿಯುತ್ತದೆ. ಇದೀಗ ಪುಟಾಣಿಯೊಂದು ತನ್ನ ಕಾಲನ್ನು ತಾನೇ ಸ್ಪರ್ಶಿಸಿ ಆಶೀರ್ವಾದ ಪಡೆದುಕೊಂಡಿದೆ. ಪುಟಾಣಿಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ಪುಟ್ಟ ಹುಡುಗಿಯ ಮುಗ್ಧತೆಗೆ ಫಿದಾ ಆಗಿದ್ದಾರೆ.

Ishanvi ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುಟಾಣಿಯ ಮುಗ್ಧತೆ ತುಂಬಿದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪುಟ್ಟ ಹುಡುಗಿಯೊಂದು ಬಗ್ಗಿಕೊಂಡು ತನ್ನ ಕಾಲನ್ನು ತಾನೇ ಮುಟ್ಟಿ ಆಶೀರ್ವಾದ ಪಡೆದುಕೊಂಡಿದೆ. ಹೀಗೆ ನಾಲ್ಕೈದು ಬಾರಿ ನಮಸ್ಕರಿಸಿದ್ದು, ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಪ್ಪ ನೀನು ಸುಮ್ನೆ ಇರ್ತಿಯಾ; ತನ್ನದೇ ಭಾಷೆಯಲ್ಲಿ ತಂದೆಗೆ ಬೈಯುತ್ತಿರುವ ಪುಟಾಣಿ

ಈ ವಿಡಿಯೋ 4 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮಕ್ಕಳು ಎಷ್ಟು ಮುಗ್ಧರು ಎಂದು ಹೇಳಿದ್ದಾರೆ. ಇನ್ನೊಬ್ಬರು, ಬೇರೆಯವರಿಗೆ ಗೌರವ ಕೊಡೋದು ಎಷ್ಟು ಮುಖ್ಯವೋ ನಮ್ಗೆ ನಾವು ಗೌರವಿಸೋದು ಅಷ್ಟೇ ಮುಖ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇದು ಆತ್ಮಗೌರವ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:01 pm, Tue, 26 May 26

Loading...
Unable to load recommendations.
Follow Us