ಲಂಡನ್: ಇಂದು (ಮೇ 6) ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕ (King Charles III’s coronation) ನಡೆದಿದೆ. ಇದಕ್ಕೂ ಮುನ್ನ ನೆನ್ನೆ (ಮೇ5) ಲಂಡನ್ ಮೆಟ್ರೋ ರೈಲೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ದಕ್ಷಿಣ ಲಂಡನ್‌ನ ಟ್ಯೂಬ್ ರೈಲಿನಲ್ಲಿ ನಡೆದಿದೆ. ಲಂಡನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಬಿಬಿಸಿ ಪ್ರಕಾರ , ಘಟನೆಯು ಕ್ಲಾಫಮ್ ಕಾಮನ್ ಸ್ಟೇಷನ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಇದೀಗ ಈ ಕುರಿತು ಒಂದು ವೀಡಿಯೊ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಮೆಟ್ರೋ ರೈಲಿನ ಅಂಡರ್‌ಗ್ರೌಂಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ, ರೈಲಿನ ಒಳಗೆ ಇದ್ದ ಪ್ರಯಾಣಿಕರನ್ನು ಹೊರಗೆ ಬರಲು ಒಬ್ಬ ವ್ಯಕ್ತಿ ಸುತ್ತಿಗೆಯಿಂದ ರೈಲಿನ ಗಾಜಿನ ಕಿಟಕಿಗೆ ಹೊಡೆದು ಪ್ರಯಾಣಿಕರು ಹೊರಗೆ ಬರುವಂತೆ ಮಾಡಿದ್ದಾನೆ. ಚಾರ್ಲ್ಸ್ III ರ ಪಟ್ಟಾಭಿಷೇಕದ ಮೊದಲು ಲಂಡನ್ ರೈಲಿನ ಅಂಡರ್‌ಗ್ರೌಂಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು.
ಈ ಘಟನೆಯಿಂದ ಯಾವುದೇ ಅಪಘಾತಗಳು ವರದಿಯಾಗಿಲ್ಲ ಎಂದು ಬ್ರಿಟಿಷ್ ಸಾರಿಗೆ ಪೊಲೀಸ್ (ಬಿಟಿಪಿ) ಮಾಹಿತಿ ನೀಡಿದ್ದಾರೆ. ಲಂಡನ್ ಅಗ್ನಿಶಾಮಕ ದಳದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬಂದಿದ್ದರು ಆದರೆ ಬೆಂಕಿಯ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಬ್ಯಾಟರ್‌ಸಿಯಾ, ಟೂಟಿಂಗ್ ಮತ್ತು ಬ್ರಿಕ್ಸ್‌ಟನ್‌ನಿಂದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸುವ ಮೊದಲು ಸುಮಾರು 500 ಜನರು ರೈಲಿನಿಂದ ಹೊರಗೆ ಬಂದಿದ್ದಾರೆ.
A fire broke out in the London Underground before the coronation of Charles III
A fire broke out in the London Underground. People in a panic knock out the windows of the train, so as not to die, inhaling acrid smoke. pic.twitter.com/5r13TYEBHu— Spriter (@Spriter99880) May 6, 2023
ಇದನ್ನೂ ಓದಿ:King Charles III s coronation: ಬ್ರಿಟನ್ ರಾಜ 3ನೇ ಚಾರ್ಲ್ಸ್ ಪಟ್ಟಾಭಿಷೇಕ
ಮೆಟ್ರೋ ನಿಲ್ದಾಣದಲ್ಲಿ ರೈಲು ಹಠಾತ್ತನೆ ನಿಂತಿದೆ. ಹಲವು ನಿಮಿಷಗಳವರೆಗೆ ರೈಲು ಚಲನೆ ನಿಲ್ದಾಣದಲ್ಲೇ ಬಾಕಿಯಾಗಿತ್ತು, ಈ ಬಗ್ಗೆ ಸಿಬ್ಬಂದಿಗಳಿಂದ ಯಾವುದೇ ಪ್ರಕಟನೆ ರೈಲಿನಲ್ಲಿ ಬಂದಿಲ್ಲ. ನಂತರ ರೈಲಿನಲ್ಲಿ ಉರಿಯುತ್ತಿದ್ದ ದೀಪ ಆಫ್ ಆಗಿದೆ. ಸ್ವಲ್ಪ ಸಮಯದ ನಂತರ ಮತ್ತು ಹಿಂಭಾಗದಿಂದ ಕಿರುಚುವ ಶಬ್ದ ಕೇಳಿದೆ ಎಂದು ಪ್ರಯಾಣಿಕರೊಬ್ಬರು ಪಿಎ ಸುದ್ದಿ ಸಂಸ್ಥೆಗೆ ತಿಳಿಸಿದರು.
ನಂತರ ರೈಲಿನ ಸಿಬ್ಬಂದಿ ಹಿಂಭಾಗಕ್ಕೆ ಹೋಗುವಂತೆ ಹೇಳಿದ್ದಾರೆ. ಒಂದು ಕ್ಷಣ ಎಲ್ಲರೂ ಭಯಭಿತರಾಗಿದ್ದರು, ಹೊರಗಿನಿಂದ ರೈಲಿನ ಕಿಟಕಿ ಗ್ಲಾಸ್ನ್ನು ಮುರಿಯಲು ಶುರು ಮಾಡಿದ್ದಾರೆ. ರೈಲಿನಲ್ಲಿ ಸುಟ್ಟ ವಾಸನೆ ಬರುತ್ತಿತ್ತು. ಆ ಕಾರಣದಿಂದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: