ಅಬ್ಬಬ್ಬಾ! ಆನೆ ನೋಡೋಕೆ ಮಾತ್ರ ದೊಡ್ಡದು, ಇದ್ರ ಕಿವಿ ಎಷ್ಟು ಚಿಕ್ಕದಿದೆ ನೋಡಿ

ಆನೆಗಳು ಮುಗ್ಧ ಜೀವಿಗಳು. ಆದರೆ ಮದವೇರಿದರೆ ಯಾರನ್ನು ಕೂಡ ಸುಮ್ಮನೆ ಬಿಡಲ್ಲ. ನೋಡಲು ದೈತ್ಯಾಕಾರವಾಗಿದ್ದರೂ ತನ್ನ ಸೌಮ್ಯ ಸ್ವಭಾವ, ತುಂಟಾಟದಿಂದಲೇ ಎಲ್ಲರಿಗೂ ಕೂಡ ಇಷ್ಟವಾಗುತ್ತದೆ. ತನ್ನ ಬೃಹದಾಕಾರದ ಶರೀರದಿಂದ ಎಲ್ಲರ ಗಮನ ಸೆಳೆಯುವ ಈ ಆನೆಯ ಕಿವಿಯನ್ನು ಎಂದಾದರೂ ನೀವು ನೋಡಿದ್ದೀರಾ. ಆದರೆ, ಮಾವುತರೊಬ್ಬರು ಆನೆ ಕಿವಿ ಎಲ್ಲಿದೆ ಹಾಗೂ ಎಷ್ಟು ದೊಡ್ಡದಿದೆ ಎಂದು ತೋರಿಸಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಬ್ಬಬ್ಬಾ! ಆನೆ ನೋಡೋಕೆ ಮಾತ್ರ ದೊಡ್ಡದು, ಇದ್ರ ಕಿವಿ ಎಷ್ಟು ಚಿಕ್ಕದಿದೆ ನೋಡಿ
ವೈರಲ್‌ ವಿಡಿಯೋ
Image Credit source: Instagram
Updated By: ಮಾಲಾಶ್ರೀ ಅಂಚನ್​

Updated on: May 18, 2025 | 5:26 PM

ಆನೆ (elephant) ಗಳೆಂದರೆ ಎಲ್ಲರಿಗೂ ಕೂಡ ಇಷ್ಟನೇ. ಅದರಲ್ಲಿಯೂ ಈ ಪುಟಾಣಿ ಆನೆಗಳನ್ನು ನೋಡಿದಾಗ ಮುದ್ದಾಡಬೇಕಿನಿಸುವುದು ಸಹಜ. ಸಾಮಾನ್ಯವಾಗಿ ಆನೆಗಳು ಎಂದಾಗ ನಮಗೆ ಮೊದಲು ನೆನಪಿಗೆ ಬರುವುದೇ ದೈತ್ಯಕಾರದ ದೇಹ, ಉದ್ದನೆಯ ಸೊಂಡಿಲು ಹಾಗೂ ದೊಡ್ಡದಾದ ಕಿವಿ. ನಾವೆಲ್ಲರೂ ಆನೆಯ ಕಿವಿ (elephant ear)ಯನ್ನು ನೋಡಿ ಕಿವಿ ಎಷ್ಟು ದೊಡ್ಡದಿದೆ ಎಂದುಕೊಂಡಿರುತ್ತೇವೆ. ಆದರೆ ಇದರ ಕಿವಿಯನ್ನು ಯಾರಾದ್ರೂ ಸೂಕ್ಷ್ಮವಾಗಿ ಗಮನಿಸಿದ್ದೀರಾ. ಹೌದು ಇದೀಗ ಮಾವುತ (mahout) ರೊಬ್ಬರು ಆನೆಯ ಕಿವಿ ಎಲ್ಲಿದೆ ಎಂದು ತೋರಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆನೆಯ ಕಿವಿ ಇಷ್ಟೊಂದು ಚಿಕ್ಕದಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

Kadina makkalu ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಮಾವುತರೊಬ್ಬರು ಮೈತುಂಬಾ ಮಣ್ಣನ್ನು ಮೆತ್ತಿಕೊಂಡು ಬಂದ ಆನೆಯನ್ನು ತೋರಿಸಿದ್ದಾರೆ. ಈ ವಿಡಿಯೋದಲ್ಲಿ ಅರ್ಧ ಅರ್ಧ ಕೆಜಿ ಮಣ್ಣು ಹಾಕಿಕೊಂಡು ಬಂದಿರುವುದನ್ನು ನೀವು ನೋಡುತ್ತಾ ಇರಬಹುದು. ಇದು ನಮ್ಮ ಅಣ್ಣ ತಮ್ಮನೇ, ಇವನ ಮೈ ಮೇಲೆ ಎಷ್ಟು ಮಣ್ಣು ಇದೆ ಅಂತ ನೀವು ನೋಡಬಹುದು. ಮೈ ಫುಲ್ ಮಣ್ಣು ಹಾಕಿಕೊಂಡು ಫುಲ್ ಗೌಜಿ ಮಾಡಿಕೊಂಡು ಬಂದಿದ್ದಾನೆ ಎಂದು ಹೇಳುವುದನ್ನು ನೋಡಬಹುದು.

ಇದನ್ನೂ ಓದಿ
ಪತಿಯ ಮುಂದೆ ವಧುದಕ್ಷಿಣೆ ಬೇಡಿಕೆಯಿಟ್ಟ ವಾಯುಪಡೆಯ ಮಹಿಳಾ ಅಧಿಕಾರಿ
ಇಟಲಿ ಪ್ರಧಾನಿಗೆ ಅಲ್ಬೇನಿಯಾದ ಪ್ರಧಾನಿ ಪ್ರಪೋಸ್ ಮಾಡಿದ್ರಾ!
8 ರಾಜ್ಯಗಳ ಸುತ್ತಾಟ, ಇದು ಕ್ಯಾರವ್ಯಾನ್ ನಲ್ಲಿ ಕೇರಳ ಕುಟುಂಬ
ಮೊಮ್ಮಗನ ಕಾರಿನ ಕೀ ಕೈಗೆ ಸಿಗುತ್ತಿದ್ದಂತೆ ಈ ಅಜ್ಜ ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ : ಉಚಿತ ಶೌಚಾಲಯ, ಉಚಿತ ಲಿಫ್ಟ್, ನೈಟ್ ಸ್ನಾಕ್ಸ್; ಈ ಕಂಪೆನಿಯಲ್ಲಿ ಭಾರೀ ಸವಲತ್ತು

ನಿಮಗೆ ಇವನ ಮೈ ನೋಡಿ ಮರುಭೂಮಿ ನೋಡಿದ ಹಾಗೆ ಅನಿಸ್ತಾ ಎಂದು ಹೇಳುವುದನ್ನು ನೋಡಬಹುದು. ಈ ವೇಳೆಯಲ್ಲಿ ಆನೆ ಕಿವಿ ಎಲ್ಲಿ ಎಂದು ತುಂಬಾ ಜನ ಕೇಳ್ತಾ ಇದ್ದೀರಾ ಎನ್ನುತ್ತಾ ಇದುವೇ ಆನೆ ಕಿವಿ ನೋಡಿ. ಎಲ್ಲರೂ ಆನೆ ಕಿವಿ ಒಳಗೆಯಿರುವುದು ಎಂದುಕೊಂಡಿದ್ದಾರೆ. ಆದರೆ ಒಳಗೆ ಇಲ್ಲ, ಕಿವಿ ಇರುವುದು ಇಲ್ಲಿ ಎಂದು ತೋರಿಸುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವೊಂದು ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಆನೆ ಕಿವಿ ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಬಳಕೆದಾರರೊಬ್ಬರು, ಈ ವಿಷಯ ಇವತ್ತೇ ಗೊತ್ತಾಗಿದ್ದು ಎಂದಿದ್ದಾರೆ. ಇನ್ನೊಬ್ಬರು, ಹೋ ಹೋ, ಕಿವಿ ಹಿಂದೆಗಡೆ ಇದೆ ಅಂದ್ಕೊಂಡಿದ್ದೆ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಮತ್ತೊಬ್ಬ  ಬಳಕೆದಾರರು, ಅದು ಕೀಟಗಳ ಕಚ್ಚುವಿಕೆಗೆ ರಕ್ಷಣೆ ಪಡೆಯುವ ತಂತ್ರ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೆ ಹಾರ್ಟ್ ಸಿಂಬಲ್ ಕಳುಹಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ