ಆರೋಪಿಯನ್ನು ಬಂಧಿಸಿ ಆತನ ಮನೆಯನ್ನು ನೆಲಸಮಗೊಳಿಸಿದ ಪೊಲೀಸರು
Madhya Pradesh : ಮದುವೆಯಾಗಲು ನಿರಾಕರಿಸಿದ್ದಕ್ಕೆ 19 ಹರೆಯದ ಹುಡುಗಿಯನ್ನು ಅಮಾನುಷವಾಗಿ ಥಳಿಸಿದ್ದ ಯುವಕನನ್ನು ಉತ್ತರಪ್ರದೇಶದ ಪೊಲೀಸರು ಇದೀಗ ಬಂಧಿಸಿ, ಆತನ ಮನೆಯನ್ನು ನೆಲಸಮಗೊಳಿಸಿದ್ದಾರೆ.
ಮಧ್ಯಪ್ರದೇಶದ 24 ವರ್ಷದ ಪಂಕಜ್ ತ್ರಿಪಾಠಿ ಎಂಬ ಯುವಕ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ 19ರ ಹರೆಯದ ಹುಡುಗಿಯ ಕಪಾಳಿಗೆ ಹೊಡೆದು ಕೂದಲನ್ನು ಹಿಡಿದೆಳೆದು ನೆಲಕ್ಕಪ್ಪಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಈತನನ್ನು ಬಂಧಿಸಿ ಈತನ ಮನೆಯನ್ನು ಬುಲ್ಡೋಝರ್ನಿಂದ ನೆಲಸಮಗೊಳಿಸಿದ್ದಾರೆ. ಈ ಅಮಾನುಷ ಘಟನೆಯನ್ನು ನೆಟ್ಟಿಗರು ಕಟುವಾಗಿ ಟೀಕಿಸಿದ್ದಾರೆ.
ಮಧ್ಯಪ್ರದೇಶದ ರೇವಾದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಯುವತಿಯು ಮದುವೆಯನ್ನು ನಿರಾಕರಿಸಿದ್ದಕ್ಕೆ ಈ ಯುವಕ ಹೀಗೆ ಕ್ರೂರವಾಗಿ ಹಲ್ಲೆ ಮಾಡಿದ್ಧಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಈತ ಪರಾರಿಯಾಗಿದ್ದಾನೆ. ಶನಿವಾರ ರಾತ್ರಿ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಆರೋಪಿ ಪಂಕಜ ತ್ರಿಪಾಟಿಯನ್ನು ಪೊಲೀಸರು ಬಂಧಿಸಿದ್ಧಾರೆ ಇಷ್ಟೇ ಅಲ್ಲ ಇವನ ಮನೆಯನ್ನು ನೆಲಸಮಗೊಳಿಸಿದ್ದಾರೆ. ಪೂರ್ತಿ ನೆಲಸಮಗೊಳಿಸುವವರೆಗೂ ಜಿಲ್ಲಾ ಪೊಲೀಸರು ಹಾಜರಿದ್ದರು.
ಅಲ್ಲದೆ ಡ್ರೈವರ್ ವೃತ್ತಿಯಲ್ಲಿದ್ದ ಆರೋಪಿಯ ಡ್ರೈವಿಂಗ್ ಲೈಸನ್ಸ್ ಅನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಮಯದಲ್ಲಿ ಸರಿಯಾದ ಕ್ರಮ ಕೈಗೊಳ್ಳದ ಸ್ಥಳೀಯ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
Bulldozer action by MP govt, Arrested Boy from Rewa who brutally beaten and filmed his girlfriend asking for marry her. pic.twitter.com/lmeazFV14S
— Political Kida (@PoliticalKida) December 25, 2022
ಆರೋಪಿಯು ಯುವತಿಯನ್ನು ಹೀಗೆ ಅಮಾನುಷವಾಗಿ ಹಲ್ಲೆ ಮಾಡುತ್ತಿದ್ದುದನ್ನು ಆತನ ಸ್ನೇಹಿತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ. ಯುವತಿಯು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರೂ ಆಕೆಯನ್ನು ಎದ್ದುನಿಲ್ಲಿಸಲು ಪ್ರಯತ್ನಿಸುತ್ತಾನೆ ಆರೋಪಿ. ನಂತರ ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗುತ್ತಾನೆ. ಗಂಟೆಗಟ್ಟಲೆ ಆ ಸ್ಥಳದಲ್ಲಿಯೇ ಆಕೆ ಪ್ರಜ್ಞಾಹೀನಳಾಗುತ್ತಾಳೆ. ಈಕೆಯನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ಸೇರಿಸುತ್ತಾರೆ.
ಈ ಎರಡೂ ವಿಡಿಯೋಗಳನ್ನು ನೋಡಿದ ನೆಟ್ಟಿಗರು, ‘ಆಕೆಯನ್ನು ಹೀಗೆ ಕ್ರೂರವಾಗಿ ಹಿಂಸಿಸಿದ ಅವನಿಗಿ ಕಠಿಣ ಶಿಕ್ಷೆಯಾಗಬೇಕು ಜೊತೆಗೆ ಈ ಕೃತ್ಯಕ್ಕೆ ಸಹಕರಿಸಿದ ಆತನ ಸಂಬಂಧಿ ಮತ್ತು ಸ್ನೇಹಿತರಿಗೂ. ಆದರೆ ಪೊಲೀಸರು ಮನೆಯನ್ನು ಏಕೆ ನೆಲಸಮ ಮಾಡಿದರು ಎನ್ನುವುದು ತಿಳಿಯಲಿಲ್ಲ ಎಂದಿದ್ದಾರೆ. ಈತನನ್ನು ಹೀಗೆ ಬೆಳೆಸಿದ ಪೋಷಕರಿಗೆ ಶಿಕ್ಷೆಯಾಬೇಕು ಎಂದಿದ್ದಾರೆ ಕೆಲವರು.
ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಇದು ಯಾಕೋ ಮನಬಂದಂತೆ ಕಾನೂನನ್ನು ಕೈಗೆತ್ತಿಕೊಂಡಂತೆ ಕಾಣುತ್ತಿದೆ ಎಂದಿದ್ದಾರೆ ಅನೇಕರು. ಜೈಲುಪಾಲಾದ ಆರೋಪಿಯನ್ನು ಸ್ಥಳೀಯ ರಾಜಕಾರಣಿಗಳು ರಕ್ಷಿಸುವ ಸಾಧ್ಯತೆ ಇದೆ ಎಂದೂ ಕೆಲವರು ಅನುಮಾನಿಸಿದ್ಧಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:16 am, Mon, 26 December 22