Jailer : ರಜಿನಿಕಾಂತ್ ಮತ್ತು ತಮನ್ನಾ ಅಭಿನಯದ ಜೈಲರ್ನ ಹವಾ ಈಗ ಎಲ್ಲೆಲ್ಲಿಯೂ. ಕಾವಾಲಾ (Kaavaalaa) ಹಾಡಿಗೆ ಇಷ್ಟು ದಿನ ವೃತ್ತಿಪರ ನೃತ್ಯ ಕಲಾವಿದೆಯರು, ರೂಪದರ್ಶಿಗಳು ಥೇಟ್ ತಮ್ಮನ್ನಾರಂತೆ ಹೆಜ್ಜೆ ಹಾಕಿದ್ದನ್ನು ನೋಡಿದ್ದೀರಿ ಮತ್ತು ನೋಡುತ್ತಿದ್ದೀರಿ. ನೃತ್ಯದಿಂದ ಉಡುಗೆಯತನಕವೂ ತಮನ್ನಾರನ್ನೇ ಅನುಕರಿಸಲು ಪ್ರಯತ್ನಿಸಿದ್ದು ರೀಲ್ಗಳಿಗೆ ಮತ್ತಷ್ಟು ರಂಗನ್ನು ತಂದಿದೆ. ಹೆಣ್ಣುಮಕ್ಕಳಷ್ಟೇ ಯಾಕೆ ಈ ಹಾಡಿಗೆ ಕುಣಿಯಬೇಕು ಮತ್ತು ಅವರಷ್ಟೇ ಯಾಕೆ ತಮನ್ನಾರ ಉಡುಪನ್ನು ಅನುಕರಿಸಬೇಕು ಎಂದು ಯೋಚಿಸಿದ ನೃತ್ಯಪ್ರಿಯ ಪುರುಷೋತ್ತಮರೊಬ್ಬರು ತಮನ್ನಾರನ್ನು ಅವರ ಉಡುಗೆಯನ್ನು ಸಾಧ್ಯವಾದಷ್ಟು ಅನುಕರಿಸಿದ್ದಾರೆ. ನೆಟ್ಟಿಗರಿಂದ ಮೆಚ್ಚುಗೆಯನ್ನೂ ಪಡೆದಿದ್ದಾರೆ.
ಜಿ.ಸಿ. ಗೌಡ ಎನ್ನುವವರು ಇನ್ಸ್ಟಾಗ್ರಾಂನಲ್ಲಿ ಇವರ ವಿಡಿಯೋ ಹಂಚಿಕೊಂಡಿದ್ದಾರೆ. ನೋಡೋಕೆ ಸ್ವಲ್ಪ ವಿಚಿತ್ರವಾಗಿ ಕಂಡರೂ ಇವರ ಪ್ರೊಫೈಲ್ ನೋಡಿದ್ ಮೇಲೆ ತುಂಬಾ ಒಳ್ಳೆಯ ಡ್ಯಾನ್ಸರ್ ಅಂತ ಗೊತ್ತಾಯ್ತು ಎಂದು ಇವರು ಈ ವಿಡಿಯೋಗೆ ಒಕ್ಕಣೆ ಬರೆದಿದ್ದಾರೆ. ಒಟ್ಟಿನಲ್ಲಿ ಈ ರೀಲ್ ಎಲ್ಲಾ ರೀತಿಯಿಂದ ನೆಟ್ಟಿಗರನ್ನು ವಿಶೇಷವಾಗಿ ಸೆಳೆಯುತ್ತಿದೆ. ಅನೇಕರು ಇವರ ಮತ್ತಷ್ಟು ಡ್ಯಾನ್ಸ್ ರೀಲ್ಸ್ ನೋಡಬೇಕೆಂದು ಇವರ ಪ್ರೊಫೈಲ್ ಲಿಂಕ್ ಕೊಡಿ ಎಂದಿದ್ಧಾರೆ.
ಇದನ್ನೂ ಓದಿ : Viral: ಬಾರ್ಬಿ: ಗುಲಾಬಿ ಜ್ವರ ಮೋದಿ, ಸೋನಿಯಾ, ರಾಹುಲ್, ಲಾಲೂ ಇನ್ನ್ಯಾರಿಗೆಲ್ಲ?
ಈತನಕ ಈ ವಿಡಿಯೋ ಅನ್ನು ಸುಮಾರು 17,000 ಜನರು ಲೈಕ್ ಮಾಡಿದ್ದಾರೆ. 50,000ಕ್ಕೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. ವೀಕೆಂಡ್ನಲ್ಲಿ ಈ ವಿಡಿಯೋ ನೋಡಿ ನನ್ನ ಮೂಡ್ ಫ್ರೆಷ್ ಆಯ್ತು ಎಂದಿದ್ದಾರೆ ಕೆಲವರು. ಇವರು ತಮನ್ನಾರ ಅಣ್ತಮ್ಮ ಎಂದಿದ್ದಾರೆ ಒಬ್ಬರು. ತಮನ್ನಾಗೇ ಕಾಂಪಿಟಿಷನ್ನು ಎಂದಿದ್ದಾರೆ ಮತ್ತೊಬ್ಬರು. ನಿಜಕ್ಕೂ ಸೂಪರ್, ನನ್ನ ತಲೆನೋವು ಓಡಿ ಹೋಯ್ತು ಎಂದಿದ್ದಾರೆ ಮಗದೊಬ್ಬರು. ಹತ್ತು ಸಲವಾದರೂ ನೋಡಿದೆ ಈ ವಿಡಿಯೋ, ಕಾಸ್ಟ್ಯೂಮ್ ಅಂತೂ ಸೂಪರ್ ಎಂದಿದ್ದಾರೆ ಇನ್ನೂ ಒಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:21 am, Mon, 31 July 23