Viral Video: ದೈತ್ಯಕೊಂಬಿನ ಗೂಳಿಯೊಂದಿಗೆ ಕಾರ್​ ಸವಾರಿ ಮಾಡಿದ ವ್ಯಕ್ತಿ; ಅಯ್ಯಯ್ಯೋ ಎಂದ ನೆಟ್ಟಿಗರು

Bull: ಬೆಕ್ಕನ್ನೋ, ನಾಯಿಯನ್ನೋ ಹೀಗೆ ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತೀರಿ ಅಥವಾ ಕೂರಿಸಿಕೊಂಡು ಹೋಗುವುದನ್ನು ನೋಡಿದ್ದೀರಿ. ಆದರೆ ಗೂಳಿಯನ್ನು, ಅದೂ ಇಷ್ಟುದ್ದ ದೊಡ್ಡ ಕೊಂಬುಳ್ಳ ಗೂಳಿಯನ್ನು? ಅಬ್ಬಾ ನೋಡಿದ ಯಾರಿಗೂ ಭಯವಾಗುವುದಲ್ಲವೆ? ಹೆದ್ದಾರಿಯಲ್ಲಿ ಈ ಮನುಷ್ಯ ಕಾರಿನಲ್ಲಿ ಹೀಗೆ ರಾಜಾರೋಷವಾಗಿ ಇದನ್ನು ಕರೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ, ನೋಡಿ ನೀವೂ ಒಮ್ಮೆ.

Viral Video: ದೈತ್ಯಕೊಂಬಿನ ಗೂಳಿಯೊಂದಿಗೆ ಕಾರ್​ ಸವಾರಿ ಮಾಡಿದ ವ್ಯಕ್ತಿ; ಅಯ್ಯಯ್ಯೋ ಎಂದ ನೆಟ್ಟಿಗರು
ದೊಡ್ಡ ಕೊಂಬುಳ್ಳ ಗೂಳಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಪ್ರಯಾಣಿಸುತ್ತಿರುವ ವ್ಯಕ್ತಿ

Updated on: Sep 01, 2023 | 4:04 PM

Bull: ನಾಯಿಬೆಕ್ಕುಗಳನ್ನು ಕಾರಿನಲ್ಲಿ ಕರೆದೊಯ್ಯಬಹುದು. ಕುರಿ, ಆಕಳು, ಎತ್ತು, ದನಕರುಗಳನ್ನು ಟೆಂಪೋ, ಟ್ರಕ್​ನಲ್ಲಿ ಸಾಗಿಸಬಹುದು. ಆದರೆ ಇಲ್ಲೊಬ್ಬ ಕಾರಿನಲ್ಲಿ ದೈತ್ಯ ಕೊಂಬುಳ್ಳ ಗೂಳಿಯನ್ನು ಕರೆದೊಯ್ಯುತ್ತಿದ್ದಾನೆ. ಅದೂ ಹೆದ್ದಾರಿಯಲ್ಲಿ! ಇಂಥ ಅಪಾಯಕಾರಿ ವಿಡಿಯೋ ನೋಡಿದ ನೆಟ್ಟಿಗರು ಹೌಹಾರುತ್ತಿದ್ದಾರೆ. ವೈರಲ್ (Viral) ಆಗುತ್ತಿರುವ ಈ ವಿಡಿಯೋಗೆ ಬಗೆಬಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಊರೇ ಹಾರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ ಎಂಬಂತೆ ಹೆದ್ದಾರಿಯಲ್ಲಿ ಶಾಂತಚಿತ್ತದಿಂದ ಚಲಿಸುತ್ತಿದ್ದಾನೆ. ಆ ಗೂಳಿಯೋ ರಾಜಾರೋಷವಾಗಿ ವಾಯುವಿಹಾರದಲ್ಲಿ ಮೈಮರೆತರುವಂತಿದೆ.

ಇದನ್ನೂ ಓದಿ : Viral Video: ಸೀರೆಯುಟ್ಟು ಪಲ್ಟಿ ಹೊಡೆದ ಅಥ್ಲೀಟ್​; ಅಚ್ಚರಿಗೊಂಡ ನೆಟ್ಟಿಗರು

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಗೂಳಿ ಏನಾದರೂ ಹೀಗೆ ರೈಡ್ ಕರೆದುಕೊಂಡು ಹೋಗು ಎಂದು ಹೇಳಿತ್ತೋ ಏನೋ ಗೊತ್ತಿಲ್ಲ. ಅಥವಾ ಇನ್ನೊಂದು ಜಾಗಕ್ಕೆ ಈ ಪ್ರಾಣಿಯನ್ನು ಸಾಗಿಸುತ್ತಿದ್ದಾನೋ ಗೊತ್ತಿಲ್ಲ. ಅಂತೂ ನೋಡಲು ಈ ದೃಶ್ಯ ಅತ್ಯಂತ ಭಯಂಕರವಾಗಿದೆ. ಅಕಸ್ಮಾತ್ ಈ ಗೂಳಿ ದಾರಿಹೋಕರ ಮೇಲೆ ಹರಿಹಾಯ್ದರೆ! ಅಥವಾ ದಾರಿಹೋಕರು ಇದನ್ನು ಕೆಣಕಿದರೆ ಇದರ ಮಾಲಿಕನ ಗತಿ ಏನು?

ನೋಡಿ ಗೂಳಿ ರೈಡ್

ಷೋಕಿಗಾಗಿ ಹೀಗೆ ಗೂಳಿಯೊಂದಿಗೆ ಸವಾರಿ ಹೊರಟಿದ್ದಾನೋ ಏನೋ ಗೊತ್ತಿಲ್ಲ. ಅಂತೂ ಪೊಲೀಸರ ಕೈಗೆ ಈತ ಸಿಕ್ಕಿಬಿದ್ದಿದ್ದಾನೆ. ಮುಂದೇನಾಯಿತೋ ಅದು ಅವನಿಗೇ ಗೊತ್ತು! ಅವನ ಕಾರನ್ನು ಗಮನಿಸಿ, ಕಾರಿಗೆ ಎರಡು ಕೊಂಬುಗಳನ್ನು ಚಂದ್ರಾಕಾರದಲ್ಲಿ ಅಂಟಿಸಿದ್ದಾನೆ. ಬಹುಶಃ ಅವನು ಷೋಕಿಗಾಗಿಯೇ ಗೂಳಿಯನ್ನು ರೈಡ್​ಗೆ ಕರೆದುಕೊಂಡು ಬಂದಿರುವ ಸಾಧ್ಯತೆ ಇದೆ.

ಇದನ್ನೂ ಓದಿ : Viral Video: ಕಪ್ಪುಸುಂದರಿಯ ಕನ್ನಡಿಯೊಂದಿಗಿನ ಏಕಾಂತ; ಭಂಗ ಮಾಡಿದ ನೆಟ್ಟಿಗರು

ಸಾರ್ವಜನಿಕ ಪ್ರದೇಶಗಳಲ್ಲಿ ಹೀಗೆ ಅಪಾಯಕಾರಿಯಾಗಿ ಪ್ರಾಣಿಗಳ ಸಾಗಾಣಿಕೆ ಖಂಡಿತ ಸಲ್ಲದು. ಕಾನೂನು ಮೀರಿ ನಡೆದರೆ ಖಂಡಿತ ಪೊಲೀಸರ ಅತಿಥಿಯಾಗಬೇಕಾಗುತ್ತದೆ. ಆ. 31 ರಂದು ಪೋಸ್ಟ್ ಮಾಡಿರುವ ಈ ವಿಡಿಯೋ ಅನ್ನು ಅಂತೂ ನೆಟ್ಟಿಗರು ಉಸಿರು ಬಿಗಿ ಹಿಡಿದುಕೊಂಡು ನೋಡುತ್ತಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ