ಸಾಮಾನ್ಯವಾಗಿ ಯಾರಾದ್ರೂ ಹೇಳಿದ ಕೆಲಸವನ್ನು ಸರಿಯಾಗಿ ಮಾಡಿಲ್ಲ ಅಂದ್ರೆ ಅಥವಾ ಕೆಲಸದಲ್ಲಿ ಎಡವಟ್ಟು ಮಾಡಿದ್ರೆ ಹೋಗಿ ಸಗಣಿ ತಿನ್ನು ಅಂತಾ ಹೇಳ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಸಗಣಿ ತಿಂದು ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಹೌದು ಚಪಾತಿಯೊಂದಿಗೆ ಪಲ್ಯ ಇಲ್ಲ ಅಂತ ಈ ಭೂಪ ಚಪಾತಿಗೆ ಸಗಣಿ ಬೆರೆಸಿ ತಿಂದಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಪೇಮಸ್ ಆಗೋಕೆ ನಮ್ ಜನ ಏನ್ ಬೇಕಾದ್ರೂ ಮಾಡ್ತಾರೆ ಅಂತ ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.
ಈ ಕುರಿತ ವಿಡಿಯೋವನ್ನು Viralvideop ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಇವರೊಂದಿಗೆ ಸ್ಪರ್ಧಿಸಲು ಯಾರಾದರೂ ಇದ್ದಾರೆಯೇ” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಪಾತಿಯೊಂದಿಗೆ ಸಗಣಿ ತಿನ್ನುವ ದೃಶ್ಯವನ್ನು ಕಾಣಬಹುದು. ಚಪಾತಿಯನ್ನು ಕೈಯಲ್ಲಿಡಿದು ಸಗಣಿ ಬಳಿ ಕುಳಿತ ಆ ವ್ಯಕ್ತಿ ಹಸಿ ಸಗಣಿಯನ್ನು ಚೆನ್ನಾಗಿ ಚಪಾತಿಗೆ ಬೆರೆಸಿ ನಂತರ ಅದನ್ನು ರೋಲ್ ಮಾಡಿಕೊಂಡು ತಿಂದಿದ್ದಾನೆ.
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಎಡಿಟಿಂಗ್ ಇದ್ದ ಹಾಗೆ ಕಾಣುತ್ತೆʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಗಣಿ ತಿಂದ ಈತನಿಗೆ ಖಂಡಿತವಾಗಿಯೂ ಯಾವುದೇ ಖಾಯಿಲೆ ಬಾರದುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಇದು ನಿಜವೇ ಅಥವಾ ಫೇಕ್ ಆಗಿರಬಹುದೇ ಒಂದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ