Viral: 1975ರಲ್ಲಿ ಈ ನೋಟ್​ ಬರೆದ ಮಹಿಳೆಯನ್ನು ಪತ್ತೆ ಹಚ್ಚಿದ ವ್ಯಕ್ತಿ

|

Updated on: Jul 06, 2023 | 1:32 PM

Notes : ಅಮೆರಿಕದಲ್ಲಿ ಮನೆಯೊಂದನ್ನು ಕೆಡವುತ್ತಿದ್ದಾಗ ಬಡಗಿಯ ತಂಡಕ್ಕೆ ಲಿವಿಂಗ್​ ರೂಮಿನ ಗೋಡೆಯ ಚೌಕಟ್ಟಿನೊಳಗೆ ಈ ನೋಟ್​ ಸಿಕ್ಕಿದೆ. ಇದು 48 ವರ್ಷಗಳ ಹಿಂದೆ 14 ವರ್ಷದ ಹುಡುಗಿ ಬರೆದದ್ದಾಗಿದೆ. ಆಕೆಗೀಗ 61ವರ್ಷ.

Viral: 1975ರಲ್ಲಿ ಈ ನೋಟ್​ ಬರೆದ ಮಹಿಳೆಯನ್ನು ಪತ್ತೆ ಹಚ್ಚಿದ ವ್ಯಕ್ತಿ
ಅಮೆರಿಕದ ಮನೆಯ ಗೋಡೆಯಲ್ಲಿ ಸಿಕ್ಕ ಕೈಬರಹದ ನೋಟ್​.
Follow us on

America : ಅಮೆರಿಕದ ಇಲಿನಾಯ್ಸ್​ನ ಟೇಝ್ವೆಲ್ ಕೌಂಟಿಯ ಹಳೆಯ ಮನೆಯೊಂದರ ಗೋಡೆಯೊಳಗೆ ಬಚ್ಚಿಟ್ಟಿದ್ದ ಬಾಟಲಿಯಲ್ಲಿ ಈ ನೋಟ್​ ಪತ್ತೆಯಾಗಿದೆ. 48 ವರ್ಷಗಳ ಹಿಂದೆ 14 ವರ್ಷಗಳ ಹುಡುಗಿಯೊಬ್ಬಳು ಎರಡು ಪುಟಗಳ ಈ ನೋಟ್​ ​ ಬರೆದಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಟೆಫಾನಿ ಹೆರಾನ್​ (Stephanie Herron) ಎಂಬಾಕೆ 29.9.1975 ರಂದು ಬರೆದ ನೋಟ್​ ಇದಾಗಿದೆ. ಬಡಗಿ (Carpenter) ಡಕೋಟಾ ಮೊಹ್ನ್​ ಈ ನೋಟ್​ನೊಂದಿಗೆ ಸ್ಪೆಫಾನಿಯನ್ನೂ ಪತ್ತೆಹಚ್ಚಿದ್ದಾನೆ.

‘ನನ್ನ ತಂಡ ಈ ಮನೆಯ ಮುಂಭಾಗದ ಕೋಣೆಯ ಗೋಡೆಯನ್ನು ಕೆಡವಿದರು. ನಾನು ಅದರೊಳಗಿನ ಅವಶೇಷಗಳನ್ನು ಶುಚಿಗೊಳಿಸುತ್ತಿದ್ದಾಗ ನೋಟ್​ ಎಂದು ಬರೆದದ್ದು ಕಂಡಿತು. ಜೊತೆಗೆ ಪುಟ್ಟ ಬಾಟಲಿಯೂ ಇತ್ತು. ಆ ಬಾಟಲಿಯೊಳಗೆ ಈ ಚೀಟಿ ಇತ್ತು. ತಕ್ಷಣವೇ ಮೊಬೈಲಿನಿಂದ ಫೋಟೋ ತೆಗೆದುಕೊಂಡು ಫೇಸ್​ಬುಕ್​ಗೆ ಅಪ್​ಲೋಡ್ ಮಾಡಿದೆ.’ ಎಂದಿದ್ಧಾನೆ ಬಡಗಿ ಡಕೋಟಾ ಮೊಹ್ನ್​.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಆಧುನಿಕ ಶ್ರವಣಕುಮಾರ; ತಾಯಿ ಮತ್ತು ಗಂಗಾಜಲ ಹೊತ್ತೊಯ್ದ ಯುವಕ

ನಂತರ ಸ್ಟೆಫಾನಿ ಹೆರಾನ್​ನ ಸಹೋದರಿ ಅಮಂಡಾ ಬಿರ್ಕಿ ಫೇಸ್​ಬುಕ್​ ಪೋಸ್ಟ್​ ನೋಡಿದವರೇ, ‘ಸ್ಟೆಫಾನಿ ನನ್ನ ಸಹೋದರಿ.” ಎಂದು ಪ್ರತಿಕ್ರಿಯಿಸಿದ್ದಾರೆ. ಸ್ಟೆಫಾನಿ ಕೂಡ ಇದೇ ಪೋಸ್ಟ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ; ‘ಹೌದು ನಾನೇ ಈ ನೋಟ್​ ಬರೆದಿರುವುದು. ನನ್ನ ಅಮ್ಮ ಈ ಸಮಯದಲ್ಲಿ ಗರ್ಭಿಣಿಯಾಗಿದ್ದರು. ಇದನ್ನು ಬರೆದ ಮರುದಿನವೇ ನನ್ನ ತಂಗಿ ಜನಿಸಿದಳು’ ಎಂದಿದ್ದಾರೆ. ಸ್ಟೆಫಾನಿ ಹೆರಾನ್​ಗೆ ಈಗ 61 ವರ್ಷ. ಅವರೀಗ ಸ್ಟೆಫಾನಿ ಪೋಯ್ಟ್. ಆಕೆ ತನ್ನ ಗಂಡ ಮತ್ತು ಐದು ಮಕ್ಕಳೊಂದಿಗೆ ನ್ಯೂಯಾರ್ಕ್​ನಲ್ಲಿ ವಾಸವಾಗಿದ್ದಾರೆ.

ಇದನ್ನೂ ಓದಿ : Viral Video: ನೀರು ಕುಡಿಯಲು ಬಂದಿರುವ ಸಿಂಹಗಳು ಒಂದಲ್ಲ ಎರಡಲ್ಲ ಒಟ್ಟು 20!

‘ಈ ನೋಟ್​ ಸಿಕ್ಕ ವಿಷಯ ನನ್ನನ್ನು ದಿಗ್ಭ್ರಮೆಗಳಿಸಿದೆ. ನಾನಿದನ್ನೆಲ್ಲವನ್ನೂ ಮರೆತಿದ್ದೆ. ಆದರೆ ವರ್ಷಗಳು ಉರುಳಿದರೂ ಬದುಕು ನಿಲ್ಲುವುದಿಲ್ಲ. ನಾನು ಗ್ರೀನ್​ವ್ಯಾಲಿಯಲ್ಲಿ ಬಾಲ್ಯ ಕಳೆದೆ. ಅಲ್ಲಿರುವವರಿಂದ ಪ್ರತಿಕ್ರಿಯೆಗಳನ್ನು ಓದುತ್ತಿದ್ದೇನೆ. ಪ್ರತಿಕ್ರಿಯಿಸಿರುವವರ ಪೈಕಿ ಪರಿಚಯವಿಲ್ಲದ ಶಿಕ್ಷಕರು, ವಿದ್ಯಾರ್ಥಿಗಳೂ ಇದ್ದಾರೆ. ಮನಸ್ಸು ತುಂಬಿಬಂದಿದೆ. ಫೇಸ್​ಬುಕ್​ಗೆ ಧನ್ಯವಾದ’ ಎಂದಿದ್ದಾರೆ ಸ್ಟೆಫಾನಿ.

ಮತ್ತಷ್ಟು ವೈರಲ್​ ನ್ಯೂಸ್​​​ ಓದಲು ಕ್ಲಿಕ್ ಮಾಡಿ

Published On - 1:29 pm, Thu, 6 July 23