Pakistan: ಮದುವೆ (Marriage) ಮುಗಿಸಿ ಎಲ್ಲರೂ ಔತಣಕೂಟದಲ್ಲಿ ಮುಳುಗಿದ್ದಾರೆ. ಸ್ವಲ್ಪ ಹೊತ್ತಿಗೆ ಅಲ್ಲಿಗೆ ಬಂದ ಪುರುಷನೊಬ್ಬ ಊಟ ಮಾಡುತ್ತಿರುವ ಇನ್ನೊಬ್ಬ ಪುರುಷನ ತಲೆಯ ಮೇಲಿನ ಟೋಪಿಯನ್ನು
(Cap) ಹಾರಿಸುತ್ತಾನೆ. ಅಲ್ಲಿಗೆ ಆ ಔತಣಕೂಟವೊಂದು ಕುಸ್ತಿ ಅಖಾಡಾ ಆಗಿ ಮಾರ್ಪಾಡುಗುತ್ತದೆ. ಅಲ್ಲಿದ್ದವರೆಲ್ಲ ಪರಸ್ಪರ ಕೈಕೈ ಮಿಲಾಯಿಸತೊಡಗುತ್ತಾರೆ. ಕುರ್ಚಿ ಟೇಬಲ್ಲುಗಳನ್ನು ಎತ್ತಿ ಹಿಂಸೆಗಿಳಿಯುತ್ತಾರೆ. ಔತಣಕೂಟ ಹೋಗಿ ಅದು ಯುದ್ಧಭೂಮಿಯಂತೆ ಗೋಚರಿಸುತ್ತದೆ. ಈ ವಿಡಿಯೋ X ನಲ್ಲಿ ವೈರಲ್ ಆಗಿದೆ. ಆರು ನಿಮಿಷದ ಈ ಘಟನೆಯು ಆ. 24ರಂದು ಪಾಕಿಸ್ತಾನದ ಮದುವೆಯೊಂದರಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ನೋಡಿ ನೆಟ್ಟಿಗರಂತೂ ಭಯಪಟ್ಟಿದ್ದಾರೆ.
ಇದನ್ನೂ ಓದಿ : Viral Optical Illusion: ಇದರಲ್ಲಿ ಅಡಗಿರುವ ಗುಪ್ತಸಂಖ್ಯೆಯನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ
ಈತನಕ ಈ ವಿಡಿಯೋ ಅನ್ನು 3.4 ಲಕ್ಷ ಜನರು ನೋಡಿದ್ದಾರೆ. 2,500 ಜನರು ಲೈಕ್ ಹಾಕಿದ್ದಾರೆ. ಸುಮಾರು 450 ಜನರು ರೀಪೋಸ್ಟ್ ಮಾಡಿದ್ದಾರೆ. ಎಲ್ಲವೂ ಶಾಂತವಾಗಿ ನಡೆಯುತ್ತಿರುವ ವೇಳೆ ಈ ಟೋಪಿ ಪ್ರಕರಣದಿಂದ ಇಡೀ ಔತಣಕೂಟ ಹಿಂಸೆಯಿಂದ ಭುಗಿಲೇಳುವುದನ್ನು ನೋಡಲು ಬಹಳ ಖೇದವೆನ್ನಿಸುತ್ತದೆ. ಈ ವಿಡಿಯೋ ಪಾಕಿಸ್ತಾನ ಮೂಲದ್ದು ಎಂದು @gharkekalesh ಹೇಳಿದ್ದಾರೆ.
Kalesh during marriage ceremony in pakistan over mamu didn’t got Mutton pieces in biriyani pic.twitter.com/mYrIMbIVVx
— Ghar Ke Kalesh (@gharkekalesh) August 29, 2023
ಈ ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಊಟದಲ್ಲಿ ನನಗೆ ಬೇಕಾಗುವಷ್ಟು ಮಾಂಸದ ತುಂಡುಗಳು ಸಿಗದಿದ್ದರೆ ನಾನು ಹೀಗೇ ಕೋಪಗೊಳ್ಳುತ್ತೇನೆ ಎಂದಿದ್ದಾರೆ ಒಬ್ಬರು. ಮಹಿಳೆಯರನ್ನು ಪುರುಷರನ್ನು ಒಟ್ಟಿಗೇ ಕೂರಿಸಿದ್ದರೆ ಹೀಗೆ ಜಗಳವಾಗುತ್ತಿರಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಛೇ ಈ ವಿಡಿಯೋ ನೋಡಿ ನನ್ನ ಮೂಡ್ ಹಾಳಾಯಿತು ಎಂದಿದ್ದಾರೆ ಮತ್ತೊಬ್ಬರು. ಬಟರ್ ಚಿಕನ್ ಒಳ್ಳೆಯ ಕ್ವಾಲಿಟಿಯದ್ದಿರಲಿಕ್ಕಿಲ್ಲ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:13 am, Fri, 1 September 23