Viral Video: ಏಯ್​ ಕ್ರೂರಿ! ನನ್ನ ಬಿಟ್ಟು ಚಿಕನ್​ ತಿಂತೀದೀಯಾ? ಬಾ ಇದೆ ನಿನಗೆ…

Chicken Lover : ಮನುಷ್ಯರನ್ನು ಈ ವಿಷಯದಲ್ಲಿ ನೀವು ಏಮಾರಿಸಬಹುದು. ಆದರೆ ಈ ಚುರುಕುಮೂಗಿನ ಸೊಕ್ಕಿನ ಮುದ್ದನ್ನು ಖಂಡಿತ ಏಮಾರಿಸಲಾರಿರಿ. ಯಾಕೆ ಎಂದು ಈ ವಿಡಿಯೋ ನೋಡಿ.

Viral Video: ಏಯ್​ ಕ್ರೂರಿ! ನನ್ನ ಬಿಟ್ಟು ಚಿಕನ್​ ತಿಂತೀದೀಯಾ? ಬಾ ಇದೆ ನಿನಗೆ...
ನನ್ನ ಬಿಟ್ಟು ಚಿಕನ್​ ತಿಂದರೆ ಅಷ್ಟೇ!

Updated on: Jun 23, 2023 | 1:14 PM

Cat: ಪುಟ್ಟಮಕ್ಕಳಿಗೆ ಐಸ್ಕ್ರೀಮ್​ ಕೊಟ್ಟರೆ ಶೀತ ಆಗತ್ತೆ, ಕೆಮ್ಮು ಬರತ್ತೆ ಅಂತಾನೋ. ಚಾಕೋಲೇಟ್ (Chocolate) ಇನ್ನೇನೋ ಸಿಹಿ ತಿಂಡಿ ಜಾಸ್ತಿ ಕೊಟ್ಟರೆ ಒಳ್ಳೆಯದಲ್ಲ ಅಂತಾನೋ ಅಂತಾನೋ ದೊಡ್ಡವರು ಕಟ್ಟುನಿಟ್ಟುಮಾಡುವುದುಂಟು. ಹಾಗೆಂದು ಕೆಲ ದೊಡ್ಡವರೇನು ತ್ಯಾಗವೀರ-ವೀರೆಯರು ಎಂದುಕೊಳ್ಳಬೇಡಿ ಮತ್ತೆ! ಮಕ್ಕಳು ಆಟವಾಡಲು ಹೋದಾಗಲೋ, ಶಾಲೆಗೆ ಹೋದಾಗಲೋ ಅಥವಾ ಅವರಿಗೆ ಗೊತ್ತಾಗದಂತೆಯೋ ತಮಗೆ ಬೇಕಾದುದನ್ನು ತಿಂದು ಆತ್ಮತೃಪ್ತಿ ಪಟ್ಟುಕೊಂಡಿರುತ್ತಾರೆ. ಮಕ್ಕಳಿಗೆ ಹೇಗೋ ಏಮಾರಿಸಬಹುದು. ಆದರೆ ಪ್ರಾಣಿಗಳಿಗೆ? ಅವುಗಳ ಪ್ರಬಲವಾದ ವಾಸನಾಗ್ರಹಣ ಶಕ್ತಿಯಿಂದ ನೀವು ತಿಂಡಿತಿನಿಸುಗಳನ್ನು, ಅದರಲ್ಲೂ ಅವುಗಳಿಗೆ ಇಷ್ಟವಾದವುಗಳನ್ನು ಮರೆಮಾಚಲು ಸಾಧ್ಯವೇ ಇಲ್ಲ. ನೋಡಿ ಈ ವಿಡಿಯೋದಲ್ಲಿ ಏನಾಗಿದೆಯೆಂದು.

Enjoying chicken without me?
by u/Found_new_username in AnimalsBeingJerks

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನನ್ನ ಬಿಟ್ಟು ಚಿಕನ್ ತಿನ್ನುತ್ತೀಯಾ ಎಂದು ಈ ವ್ಯಕ್ತಿಯ ಹಾಸಿಗೆಯೊಳಗೆ ತೂರಿಕೊಂಡು ಬಂದು ಅವನ ಚಿಕನ್​ ಅನ್ನು ತಿಂದಿದೆ ಈ ಬೆಕ್ಕು! ಈ ವಿಡಿಯೋಗೆ ಸುಮಾರು 1,7000 ಜನರು ವೋಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ದ್ರೋಹ ಬಗೆಯುತ್ತಿದ್ದೀರಿ ನಿಮ್ಮ ಬೆಕ್ಕಿಗೆ, ಹುಷಾರು! ಎಂದು ತಮಾಷೆಯಿಂದ ಎಚ್ಚರಿಕೆ ನೀಡಿದ್ದಾರೆ. ಅದು ಕೂಗನ್ನು ಕೇಳಿಸಿಕೊಂಡರೇ ಸಾಕು, ಅಕಸ್ಮಾತ್​ ಅವನು ಚಿಕನ್​ ಕೊಡದಿದ್ದರೆ ಅದು ಅವನ ಬಾಯೊಳಗಿಂದನ್ನು ತೆಗೆದು ತಿನ್ನುತ್ತಿತ್ತೇನೋ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ತನ್ನ ಮರಿಯನ್ನು ಹೈನಾದಿಂದ ರಕ್ಷಿಸಿದ ಜಿರಾಫೆಯ ವಿಡಿಯೋ ವೈರಲ್

ಎಂಥಾ ಕ್ರೂರಿಯಾಗಿದ್ದೀರಿ ನೀವು! ಸಾಕಿದ ಬೆಕ್ಕಿಗೆ ಚಿಕನ್ ಕೊಡದೇ ತಿನ್ನುತ್ತಿದ್ದೀರಿ, ಮುಂದಿನ ಸಲ ಅದು ಇಲಿಯನ್ನು ನಿಮಗೆ ಕೊಡದೇ ತಿನ್ನುತ್ತದೆ ನೋಡುತ್ತಿರೀ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಸಾಕಿದ ಮೇಲೆ ಹಂಚಿಕೊಂಡು ತಿನ್ನಬೇಕು, ಅದು ಬಿಟ್ಟು ಹೀಗೆಲ್ಲ ಅಡಗಿಕೊಂಡು ತಿನ್ನುವುದು, ಅದೂ ಬೆಕ್ಕಿನಿಂದ! ಮಹಾಪರಾಧ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ. ನೀವು ನಿಮ್ಮ ಹೆಂಡತಿಯಿಂದ, ಗಂಡನಿಂದ, ಮಕ್ಕಳಿಂದ, ಅಪ್ಪ ಅಮ್ಮನಿಂದ, ಸ್ನೇಹಿತರಿಂದ, ಸಹೋದ್ಯೋಗಳಿಂದ ಈ ವಿಷಯದಲ್ಲಿ ಬಚಾವ್ ಆಗಬಹುದು. ಆದರೆ ಖಂಡಿತ ಬೆಕ್ಕಿನಿಂದಲ್ಲ! ಇದು ಮೊದಲೇ ಮುದ್ದಿನ ಸೊಕ್ಕು, ನೆನಪಿರಲಿ ಎಂದು ನೆಟ್ಟಿಗರು ತಮಾಷೆ ಮಾಡಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:27 am, Fri, 23 June 23