Tiger: ಎತ್ತು, ಹಸು, ಬೆಕ್ಕು, ನಾಯಿ ಮುಂತಾದ ಸಾಕುಪ್ರಾಣಿಗಳಿಗೆ ಮುದ್ದಿನಿಂದ ಅಪ್ಪಿಕೊಳ್ಳುವುದು ಮುತ್ತು ಕೊಟ್ಟಂತೆ ಮಾಡುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ ಮಾಡಿರುತ್ತೀರಿ. ಆದರೆ ವನ್ಯಪ್ರಾಣಿಗಳಿಗೆ? ಅದನ್ನೂ ನೋಡಿರುತ್ತೀರಿ. ಆದರೆ ಹೀಗೆ ನೇರಾನೇರ ಹುಲಿಗೆ ಚುಂಬಿಸುವುದನ್ನು? ಇಲ್ಲವಾದರೆ ಈಗ ನೋಡಿ. ಈ ವ್ಯಕ್ತಿ ಈ ದೈತ್ಯ ಹುಲಿಯನ್ನು ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನಾಲ್ಕು ದಿನಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ (Instagram) ಹಂಚಿಕೊಂಡ ಈ ವಿಡಿಯೋ ಅನ್ನು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಕೆಲವರಂತೂ ಈತ ಬಾರೀ ಅದೃಷ್ಟವಂತ ಎನ್ನುತ್ತಿದ್ದಾರೆ.
ಇದನ್ನೂ ಓದಿ : Viral Video: ‘ಹುಟ್ಟಿದ್ದು ಒಂಟಿಗಾಲಲ್ಲಿ ಆದರೆ ಬದುಕಿನುದ್ದಕ್ಕೂ ನರ್ತಿಸುತ್ತೇನೆ’ ಫಾತೀಮಾ
ಇಷ್ಟು ದೊಡ್ಡ ಪ್ರಾಣಿಯೊಂದಿಗೆ ಈತ ಹೀಗೆ ಆಟವಾಡುತ್ತಿರುವುದನ್ನು ನೋಡಲು ಸಂತೋಷವೆನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು. ಆ ಹುಲಿ ಕೆಟ್ಟ ಮೂಡ್ಗೆ ತಿರುಗುವತನಕ ಅವನು ಹೀಗೆ ಆಟವಾಡುತ್ತಾನೆ ಚುಂಬಿಸುತ್ತಾನೆ, ಮುಂದೆ? ಎಂದು ಕೇಳಿದ್ದಾರೆ ಇನ್ನೊಬ್ಬರು.
ನನಗೂ ಹೀಗೊಂದು ಅವಕಾಶ ಸಿಗಬಾರದೆ? ಎಂದು ಕೇಳಿದ್ದಾರೆ ಒಬ್ಬರು. ಯಾಕೆ ಬದುಕುವ ಆಸೆ ಇಲ್ಲವೆ? ಎಂದಿದ್ಧಾರೆ ಇನ್ನೊಬ್ಬರು. ನಿಜಕ್ಕೂ ಈ ಹುಲಿ ತುಂಬಾ ಸುಂದರವಾಗಿದೆ, ಅಂದರೆ ಅವನು ಅದನ್ನುಅಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಈ ಮನುಷ್ಯ ಹೀಗೇಕೆ ವರ್ತಿಸುತ್ತಿದ್ದಾನೆ? ಅವನು ಹೀಗೆ ಮಾಡುವುದರಿಂದ ಹುಲಿಗೆ ತೊಂದರೆಯಾಗುವುದಿಲ್ಲವೆ? ಎಂದಿದ್ದಾರೆ ಒಬ್ಬರು. ನಾನು ನಾಯಿ ಬೆಕ್ಕು ಮುಂತಾದ ಪ್ರಾಣಿಗಳನ್ನು ಸಾಕಿಕೊಂಡಿದ್ದೇನೆ ಆದರೆ ನನ್ನ ಹೆಂಡತಿಯನ್ನು ಬಿಟ್ಟು ಯಾವ ಪ್ರಾಣಿಗೂ ಚುಂಬಿಸಿಲ್ಲ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ‘ಗುರು’ ಸಿನೆಮಾದ ಈ ಹಾಡನ್ನು ಭಾರ್ಗವಿ ವೆಂಕಟರಾಮ್ ಕರ್ನಾಟಕ ಸಂಗೀತಪಾಕದಲ್ಲಿ ಅದ್ದಿ ತೆಗೆದಾಗ
ಬೆಕ್ಕು ಮತ್ತು ಹುಲಿಗಳಿಗೆ ಮುದ್ದಿಸಿಕೊಳ್ಳುವುದೆಂದರೆ ಇಷ್ಟವೆನ್ನಿಸುತ್ತದೆ ಎಂದು ನಾನು ಈ ವಿಡಿಯೋ ಮೂಲಕ ಅರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ನನಗ್ಯಾಕೋ ಈ ಮನುಷ್ಯ ಸಹಜವೆನ್ನಿಸುತ್ತಿಲ್ಲ ಎಂದಿದ್ಧಾರೆ ಕೆಲವರು. ನಾನಂತೂ ಈ ವಿಡಿಯೋ ಅನ್ನು ಮತ್ತೆ ನೋಡುವುದಿಲ್ಲ ಎಂದಿದ್ದಾರೆ ಇನ್ನೂ ಒಂದಿಷ್ಟು ಜನ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ