Jawan: ಜವಾನ್ ಸಿನೆಮಾದ ಹವಾ ದಿನೇ ದಿನೇ ಹೆಚ್ಚುತ್ತಿದೆ. ಚಲೇಯಾ ಹಾಡಿನ ರೀಲ್ಗಳಿಗಂತೂ ಲೆಕ್ಕವೇ ಇಲ್ಲ. ನಿನ್ನೆಯಷ್ಟೇ ಶಾರುಖ್ ಖಾನ್ನ ಕಟ್ಟಾ ಅಭಿಮಾನಿಯಾದ ದಿವ್ಯಾಂಗ ವ್ಯಕ್ತಿಯೊಬ್ಬ ವೆಂಟಿಲೇಟರ್ನೊಂದಿಗೆ ಥಿಯೇಟರ್ಗೆ ಬಂದು ಸಿನೆಮಾ ನೋಡಿ ಹೋದನು. ಅಲ್ಲದೇ, ಥಿಯೇಟರಿನಲ್ಲಿ ಜವಾನ್ ಸಿನೆಮಾ ಪ್ರದರ್ಶನ ನಡೆಯುತ್ತಿದ್ದ ವೇಳೆ ಚಲೇಯಾ (Chaleya) ಹಾಡಿಗೆ ಡ್ಯಾನ್ಸ್ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್ ಆಯಿತು. ಇದೀಗ ಶಾರುಖ್ ಖಾನ್ನ ಪಾತ್ರದಂತೆ (ಆಝಾದ್) ತಲೆಗೆ ಮುಖಕ್ಕೆ ಬ್ಯಾಂಡೇಜ್ ಸುತ್ತಿಕೊಂಡು ರೈಲುನಿಲ್ದಾಣದಲ್ಲಿ ಮತ್ತು ರೈಲಿನಲ್ಲಿ ಓಡಾಡಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಬೇಸರದಿಂದ ಪ್ರತಿಕ್ರಿಯಿಸುತ್ತಿದ್ಧಾರೆ.
ಇದನ್ನೂ ಓದಿ : Viral Video: ಅಹಮದಾಬಾದ್; ಫಾರ್ಮಾ ಕೆಲಸದೊಂದಿಗೆ ಪಾಸ್ತಾ ಸ್ಟಾಲ್ ಕೂಡ ನಡೆಸುವ ಧ್ರುವಿ ಪಂಚಾಲ್
ಸೆ. 8ರಂದು ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ ಸುಮಾರು 2 ಮಿಲಿಯನ್ ಜನರು ನೋಡಿದ್ದಾರೆ. 2 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಈ ವಿಡಿಯೋ ನೋಡಿ ತಮ್ಮ ಅಭಿಪ್ರಾಯಗಳನ್ನು ಬರೆದಿದ್ದಾರೆ.
@_ak_arbaz_01 ಎಂಬ ಇನ್ಸ್ಟಾಗ್ರಾಂ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅಣ್ಣಾ ನೀವು ಬಹಳ ಒಳ್ಳೆಯ ವಿಡಿಯೋಗಳನ್ನು ಮಾಡುತ್ತೀರಿ, ಆದರೆ ದಯವಿಟ್ಟು ಅವುಗಳನ್ನು ಪೋಸ್ಟ್ ಮಾಡಬೇಡಿ ಎಂದಿದ್ದಾರೆ ಒಬ್ಬರು. ಈ ವಿಡಿಯೋ ನೋಡಿ ಏನು ಹೇಳಬೇಕೆಂದು ತಿಳಿಯುತ್ತಿಲ್ಲ ಎಂದಿದ್ದಾರೆ ಇನ್ನೊಬ್ಬರು. ಅದ್ಭುತವಾಗಿ ಕಾಣುತ್ತಿದ್ದೀರಿ! ಹೀಗೆಯೇ ರಸ್ತೆಯಲ್ಲೆಲ್ಲ ಓಡಾಡಿ, ಆದರೆ ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಪಾದ ಮುಟ್ಟಿದರೆ ಎದ್ದುನಿಂತು ಆಶೀರ್ವದಿಸುತ್ತಾನೆ ಈ ಕೊಲ್ಕತ್ತೆಯ ಗಣಪ
ರೀಲ್ಗೋಸ್ಕರ ಹೀಗೆ ಮಾಡಲು ಹೋಗಿ ರಿಯಲ್ ಲೈಫ್ನಲ್ಲಿ ನಿಜವಾಗಲೂ ಏಟು ತಿಂದರೆ ಏನು ಗತಿ ಎಂದಿದ್ದಾರೆ ಒಬ್ಬರು. ನಿನಗೆ ಆಸ್ಕರ್ ಅವಾರ್ಡ್ ಕೊಡಬೇಕು ಎಂದಿದ್ದಾರೆ ಇನ್ನೊಬ್ಬರು. ಮಕ್ಕಳು ವಯಸ್ಸಾದವರು ನಿನ್ನ ಅವತಾರ ನೋಡಿ ಭಯಪಡುತ್ತಾರೆ ಮಾರಾಯಾ, ಇಂಥದೆಲ್ಲ ಸಾಕುಮಾಡು. ಒಂದು ಹೋಗಿ ಇನ್ನೊಂದು ಆದರೆ ಏನು ಮಾಡುತ್ತೀ? ಎಂದಿದ್ದಾರೆ ಮತ್ತೊಬ್ಬರು. ರೈಲ್ವೇ ಪೊಲೀಸರು ಈ ವ್ಯಕ್ತಿಯನ್ನು ಯಾಕೆ ವಿಚಾರಿಸಿಕೊಳ್ಳುತ್ತಿಲ್ಲ? ಎಂದು ಒಂದಿಷ್ಟು ಜನ ಕೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:34 am, Thu, 21 September 23