Video: ಕೋವಿಡ್ ಸಮಯದಲ್ಲಿ ವ್ಯವಹಾರದಲ್ಲಿ 2 ಕೋಟಿ ರೂ ನಷ್ಟ, ನಗುತಲೇ ಎಲ್ಲವನ್ನು ಜಯಿಸಿದ ಈ ವ್ಯಕ್ತಿ ಎಲ್ಲರಿಗೂ ಸ್ಫೂರ್ತಿ

ಬದುಕು ಹೊಡೆತಗಳ ಮೇಲೆ ಹೊಡೆತಗಳನ್ನು ನೀಡುತ್ತದೆ. ಆದರೆ ಎಲ್ಲರಿಂದಲೂ ಸುಧಾರಿಸಿಕೊಳ್ಳಬೇಕಷ್ಟೆ. ಈ ವ್ಯಕ್ತಿಯ ಬದುಕಿನಲ್ಲಾದ ಸೋಲು, ಹೊಡೆತಗಳ ನಡುವೆ ಮುಖದಲ್ಲಿ ನಗು ಹಾಗೆಯೇ ಇದೆ. ಕೋವಿಡ್ ಸಮಯದಲ್ಲಿ ವ್ಯವಹಾರದಲ್ಲಿ 2 ಕೋಟಿ ರೂಪಾಯಿ ನಷ್ಟ ಅನುಭವಿಸಿದರೂ ಮತ್ತೆ ಎದ್ದು ನಿಲ್ಲುವೆ ಎಂದು ಹೇಳುವ ವ್ಯಕ್ತಿಯ ನಗುವೇ ಎಲ್ಲರಿಗೂ ಸ್ಫೂರ್ತಿ. ಪ್ರಯಾಣದ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಸಂದರ್ಶಕರ ಜತೆಗೆ ಆಡಿದ ಪ್ರತಿಯೊಂದು ಮಾತುಗಳು ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಕೋವಿಡ್ ಸಮಯದಲ್ಲಿ ವ್ಯವಹಾರದಲ್ಲಿ 2 ಕೋಟಿ ರೂ ನಷ್ಟ, ನಗುತಲೇ ಎಲ್ಲವನ್ನು ಜಯಿಸಿದ ಈ ವ್ಯಕ್ತಿ ಎಲ್ಲರಿಗೂ ಸ್ಫೂರ್ತಿ
ವೈರಲ್‌ ವಿಡಿಯೋ
Image Credit source: Instagram

Updated on: Oct 29, 2025 | 9:31 AM

ಎಲ್ಲರ ಬದುಕು (Life) ನಿರಂತರ ಹೋರಾಟವೇ. ಆದರೆ ಕೆಲವರು ಗೊತ್ತಿಲ್ಲದ್ದಂತೆ ಮುಗ್ಗರಿಸಿಕೊಂಡು ಬೀಳುತ್ತಾರೆ. ಹೀಗೆ ಬಿದ್ದಾಗ ಮತ್ತೆ ಮೇಲೆದ್ದು ಬದುಕು ಕಟ್ಟಿ ಕೊಳ್ಳುವ ಧೈರ್ಯ ಮಾಡುವುದು ಕಡಿಮೆಯೇ. ಬದುಕಿನ ಹೊಡೆತಗಳನ್ನ ತಿಂದ ವ್ಯಕ್ತಿಯ ಮನಸ್ಸಿನಲ್ಲಿ ಆ ನೋವು ಸದಾ ಇರುತ್ತದೆ. ಎಲ್ಲವನ್ನು ಧನಾತ್ಮಕವಾಗಿ ಸ್ವೀಕರಿಸುವ ಗುಣ ಎಲ್ಲರಲ್ಲೂ ಇರಲ್ಲ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯನ್ನು ಸಂದರ್ಶಕರೊಬ್ಬರು ಮಾತನಾಡಿಸಿದಾಗ ಅವರ ಬದುಕಿನ ಮತ್ತೊಂದು ಮುಖದ ಪರಿಚಯವಾಗಿದೆ. ಕೋವಿಡ್ (Covid) ಸಮಯದಲ್ಲಿ ಕೋಟಿಗಟ್ಟಲೇ ನಷ್ಟ ಕಂಡು ವ್ಯಕ್ತಿಯೊಬ್ಬರು ತಮ್ಮ ನೋವನ್ನು ಕೋಪ ಅಥವಾ ವಿಷಾದದ ರೂಪದಲ್ಲಿ ಹಂಚಿಕೊಳ್ಳಲಿಲ್ಲ. ನಗುತ್ತಲೇ ಬದುಕಿನ ಕರಾಳ ಮುಖವನ್ನು ತೆರೆದಿಟ್ಟಿದ್ದು ಅವರು ತಮ್ಮ ದೃಢಸಂಕಲ್ಪ ಹಾಗೂ ಆತ್ಮವಿಶ್ವಾಸದಿಂದ ಇಂಟರ್ನೆಟ್‌ನಾದ್ಯಂತ ಲಕ್ಷಾಂತರ ಜನರ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆಪ್ ಕರ್ತೆಕ್ಯಹೋ (aapkartekyaho) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಸಂದರ್ಶಕರೊಬ್ಬರು ಮಾತನಾಡಿಸಿದ್ದು, ಅದರ ಬದುಕಿನ ಕಥೆಯೂ ಎಲ್ಲರಿಗೂ ಸ್ಫೂರ್ತಿಯಾದಂತಿದೆ. ಪ್ರಯಾಣದ ವೇಳೆ ವ್ಯಕ್ತಿಯೊಬ್ಬರನ್ನು ಸಂದರ್ಶಕರೊಬ್ಬರು ನೀವು ಏನು ಮಾಡುತ್ತೀರಿ? ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ ವ್ಯಕ್ತಿ “ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಅಡ್ಮಿನ್ ಕೆಲಸ ಎಂದು ಉತ್ತರಿಸುತ್ತಾರೆ. ಎಲ್ಲಿ ಎಂದು ಕೇಳಿದಾಗ, ಅವರು ದುಬೈನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ
ಆರ್ಥಿಕ ಸಂಕಷ್ಟ ಇದ್ರೂ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆದೆ ಎಂದ ಯುವತಿ
ಸತತ 11 ವರ್ಷಗಳಿಂದ ವಡಾ ಪಾವ್ ಮಾರಿ ಜೀವನ ಸಾಗಿಸುತ್ತಿರುವ ಯಶಸ್ವಿ ಮಹಿಳೆ
ಹಣದ ಸಹಾಯ ಮಾಡಿದ ಅಪರಿಚಿತ ಹುಡುಗಿಗೆ ಈ ಹಣ ತಲುಪಿಸುವುದು ಹೇಗೆ?
ಭಿಕ್ಷೆ ಬೇಡಿ ಈ ವ್ಯಕ್ತಿ ಸಂಪಾದಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಆದ್ರೆ ಈ ಕೆಲಸಕ್ಕೂ ಮುನ್ನ ಭಾರತದಲ್ಲಿ ಸ್ವಂತ ಕಟ್ಟಡ ಸಾಮಗ್ರಿಗಳ ವ್ಯವಹಾರ ನಡೆಸುತ್ತಿದ್ದೆನು. ಕೋವಿಡ್ 19 ಲಾಕ್‌ಡೌನ್ ಬಂದಾಗ ಎಲ್ಲವೂ ಬದಲಾಯಿತು. ಮಾರುಕಟ್ಟೆ ನಿಧಾನವಾಯಿತು, ಯೋಜನೆಗಳು ಸ್ಥಗಿತಗೊಂಡು ಭಾರೀ ನಷ್ಟವನ್ನು ಎದುರಿಸಬೇಕಾಯಿತು. ಅಂದು ಕಳೆದುಕೊಂಡ 2 ಕೋಟಿ ರೂವನ್ನು ಇನ್ನೂ ಮರಳಿ ಪಡೆಯಲು ಆಗಲೇ ಇಲ್ಲ ಎಂದು ವ್ಯಕ್ತಿಯೂ ನಗುತ್ತಲೇ ಹೇಳುತ್ತಿರುವುದನ್ನು ನೋಡಬಹುದು. ಆದರೆ ಸಂದರ್ಶಕರು ಈ ಎಲ್ಲದರ ಹೊರತಾಗಿಯೂ ನಿಮ್ಮನ್ನು ಪ್ರೇರೇಪಿಸುತ್ತಿರುವುದು ಏನು ಎಂದು ಕೇಳಿದಾಗ ಜೀವನ ಸಾಗುತ್ತದೆ ಎಂಬ ಉತ್ತರ. ಈ ಮಾತು ಸಂದರ್ಶಕರಿಗೂ ಶಾಕ್‌ ಆಗಿದೆ.

ಇದನ್ನೂ ಓದಿ:ಕಾಲೇಜು ಅರ್ಧಕ್ಕೆ ಬಿಟ್ಟೆ, ಆರ್ಥಿಕ ಸಂಕಷ್ಟ ಇದ್ರೂ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆದೆ; ಕಷ್ಟದ ದಿನಗಳನ್ನು ನೆನಪಿಸಿಕೊಂಡ ಯುವತಿ

ಈ ವಿಡಿಯೋ ಹದಿನೈದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಒಳ್ಳೆಯ ಮನಸ್ಸು ಕಾಯುವ ತಾಳ್ಮೆ ಇದ್ದರೆ ಬದುಕಿನಲ್ಲಿ ಕಳೆದುಕೊಂಡಿರುವುದು ಮರಳಿ ಸಿಗುತ್ತದೆ, ಹೆಚ್ಚು ಚಿಂತಿಸಬೇಡಿ ಎಂದು ಹೇಳಿದ್ದಾರೆ. ಇನ್ನೊಬ್ಬರು ಬದುಕಿನಲ್ಲಿ ಹಾದಿಯನ್ನು ನೀವು ಮಹಾನ್ ಯೋಧ ಎಂದು ಕಾಮೆಂಟ್ ಮಾಡಿದ್ದಾರೆ. ಆ ನಗುವಿನಲ್ಲೇ ಎಲ್ಲವೂ ಅಡಗಿದೆ. ನಗುವಿನೊಂದಿಗೆ ಈ ವ್ಯಕ್ತಿ ಹೋರಾಟ ನಡೆಸಿ ಮುಂದೊಂದು ದಿನ ಎಲ್ಲವನ್ನು ಗಳಿಸುತ್ತಾನೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:16 pm, Tue, 28 October 25