Viral Video: ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಬಾವಿಯಲ್ಲಿ ಬಿದಿದ್ದ ನಾಯಿಯನ್ನು ರಕ್ಷಿಸಿದ ಮಂಗಳೂರಿನ ಮಹಿಳೆ

ಮೌನಾ ಎಂಬ ಹೆಸರಿನ ಬಳಕೆದಾರರಿಂದ ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ ಮತ್ತು ಇದುವರೆಗೆ 15,000 ಬಾರಿ ವೀಕ್ಷಿಸಲಾಗಿದೆ.

Viral Video: ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಬಾವಿಯಲ್ಲಿ ಬಿದಿದ್ದ ನಾಯಿಯನ್ನು ರಕ್ಷಿಸಿದ ಮಂಗಳೂರಿನ ಮಹಿಳೆ
ನಾಯಿಯನ್ನು ಕಾಪಾಡುತ್ತಿರುವ ಮಹಿಳೆ
Edited By:

Updated on: Feb 04, 2022 | 11:05 AM

viral video ಸಾಮಾಜಿಕ ಜಾಲತಾಣವೆನ್ನುವುದು ಸದ್ಯ ನಮ್ಮೆಲ್ಲರ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ನಾವು ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಂಲ್ಲೊಂದು ವೈರಲ್ ವಿಡಿಯೋಗಳನ್ನು ನೋಡುತ್ತಿರುತ್ತೇವೆ. ಕೆಲವೊಂದು ವಿಡಿಯೋಗಳು ನಮ್ಮ ಮನಮುಟ್ಟುತ್ತವೆ. ಅಂತಹದ್ದೇ ಒಂದು ಘಟನೆ ಈಗ ಮಂಗಳೂರಿನಲ್ಲಿ ನಡೆದಿದೆ. ಹೌದು ಮಂಗಳೂರಿನಲ್ಲಿ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದಿದ್ದ ನಾಯಿಯನ್ನು ರಕ್ಷಿಸಿರುವಂತಹ ಮನಮಿಡಿಯುವ ಘಟನೆ ನಡೆದಿದೆ. ಈ ವಿಡಿಯೋ ಅಂತರ್ಜಾಲದಲ್ಲಿ ಸದ್ಯ ವೈರಲ್ ಆಗಿದೆ. ಎರಡು ನಿಮಿಷ ಏಳು ಸೆಕೆಂಡುಗಳ ವೀಡಿಯೊದಲ್ಲಿ, ಬಾವಿಯೊಳಗೆ ಆಕಸ್ಮಿಕವಾಗಿ ಬಿದ್ದ ನಾಯಿಯನ್ನು ಮಹಿಳೆ ರಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ.

ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಇತರೇ ಜನರು ಆಕೆಯ ದೇಹಕ್ಕೆ ಹಗ್ಗವನ್ನು ಕಟ್ಟಿ ಮಹಿಳೆ ಬಾವಿಗೆ ಇಳಿಸಿದ್ದಾರೆ. ನಂತರ ಮತ್ತೊಂದು ಹಗ್ಗವನ್ನು ಎಸೆಯಲಾಗಿದ್ದು,  ಅವಳು ಅದನ್ನು ನಾಯಿಯ ಸುತ್ತಲೂ ಕಟ್ಟಿದ್ದಾಳೆ. ನಂತರ ನಾಯಿಯನ್ನು ಸುರಕ್ಷಿತವಾಗಿ ಮೇಲೆ ಎಳೆಯಲಾಗಿದೆ. ನಂತರ ಮಹಿಳೆ ತುಂಬಾ ಕಷ್ಟಪಟ್ಟು ಬಾವಿಯಿಂದ ಹೊರ ಬಂದಿದ್ದಾರೆ. ನಾಯಿಯನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. “ನನಗೆ, ಅವಳು ಹೀರೋ.” ಎಂದು ಒಬ್ಬರು ಬರೆದುಕೊಂಡರೇ ಮತ್ತೊಬ್ಬರು, “ಜನರು ಎಲ್ಲಾ ಜೀವ ರೂಪಗಳ ಬಗ್ಗೆ ಹೆಚ್ಚು ಸಂವೇದನಾಶೀಲರಾಗುತ್ತಾರೆ ಮತ್ತು ಒಂದು ದಿನ ನಾವು ಪ್ರಾಣಿ ಹತ್ಯೆ ಮತ್ತು ಇತರ ಕ್ರೌರ್ಯಗಳಿಂದ ಮುಕ್ತವಾದ ಜಗತ್ತನ್ನು ಹೊಂದುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.

ಇನ್ನೂ ಇ ವಿಡಿಯೋವನ್ನು ಮೌನಾ ಎನ್ನುವವರು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸುಮಾರು 15 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಮತ್ತು ಲೈಕ್ಸ್ ಬಂದಿವೆ. “ನಾಯಿಯನ್ನು ರಕ್ಷಿಸಿದ ಮಹಿಳೆಯನ್ನು ಆಶೀರ್ವದಿಸಿ” ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ;

ಕೋವಿಡ್-19 ಲಸಿಕೆ ಅಡ್ಡ ಪರಿಣಾಮದಿಂದ ನನ್ನ ಮಗಳು ಸಾವನ್ನಪಿದ್ದಾಳೆ ಎಂದು ಆರೋಪಿಸಿ; 1000 ಕೋಟಿ ರೂ. ಪರಿಹಾರ ಕೋರಿದ ವ್ಯಕ್ತಿ

Published On - 9:54 am, Fri, 4 February 22